ಉಡುಪಿ, ಮಾ.29: ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳರ್ಪಾಡಿ ಮಾನೈ ಪ್ರದೇಶದಲ್ಲಿರುವ ಸರ್ಕಾರಿ ಕ್ರೀಡಾಂಗಣವನ್ನು ಅಕ್ರಮವಾಗಿ ಒತ್ತುವರಿ ಮಾಡಲು ಕೆಲವರು ಯತ್ನಿಸುತ್ತಿರುವ ಘಟನೆ ಹಿನ್ನೆಲೆಯಲ್ಲಿ ಹಿರಿಯಡ್ಕ ಪೋಲಿಸ್ ಠಾಣೆ ತೆರಳಿ ಮನವಿ ನೀಡಿ ಕೂಡಲೇ ಕ್ರಮ ಕೈಗೊಳ್ಳುವಂತೆ ತುಳುನಾಡ ರಕ್ಷಣಾ ವೇದಿಕೆ, ಕಾಪು ತಾಲೂಕು ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಉಡುಪಿ ಜಿಲ್ಲಾದ್ಯಕ್ಷರಾದ ಫ್ರಾಂಕಿ ಡಿಸೋಜ ಕೊಳಲಗಿರಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾವಂಜೆ,
ತುಳುನಾಡ ರಕ್ಷಣಾ ವೇದಿಕೆ ಕಾಪು ಅಧ್ಯಕ್ಷರು
ನಿತೀನ್ ಕುಮಾರ್ ಶೆಟ್ಟಿ ಕಾಪು ತಾಲೂಕು
ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಕುಲಾಲ್ ರ್ಶಿ
ಬೈರಂಪಲ್ಲಿ ಘಟಕ ಅಧ್ಯಕ್ಷರಾದ
ಕೃಷ್ಣಾನಂದ ನಾಯಕ್
ಬೈರಂಪಳ್ಳಿ ಘಟಕ ಪ್ರಧಾನ ಕಾರ್ಯದರ್ಶಿ
ರಂಜಿತ್ ಕುಲಾಲ್
ಗುಣಾಕಾರ್ ಉಪಾಧ್ಯಕ್ಷರು ಭೈರಂಪಳ್ಳಿ ಘಟಕ
ಕಾರ್ತಕ್ ಕುಮಾರ್, ಸಚಿನ್ ಕುಮಾರ್ ಶೆಟ್ಟಿ, ಅಜಯ್ ಕುಲಾಲ್, ಗೋಪಾಲ ಕುಲಾಲ್, ಸಚಿನ್ ಕುಮಾರ್ ಶೆಟ್ಟಿ ಕಿರಣ್ ಕುಮಾರ್ ಆದಿತ್ಯ, ಅಭಿನಂದನ್, ರಕ್ಷಿತ್, ಸ್ವಾತಿಕ್ ನಾಯಕ್ ಗಣೇಶ್ ಕುಲಾಲ್ ರಾಕೇಶ್ ಕುಲಾಲ್ ಮಂಜುನಾಥ್ ಕುಲಾಲ್ ,ಹರ್ಷ ಪೂಜಾರಿ, ಶೋಧನ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಸತೀಶ್ ಕುಲಾಲ್, ಪ್ರದೀಪ್ ,ಸುರೇಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು

ಈ ಕುರಿತು ಘಟಕದ ಅಧ್ಯಕ್ಷರು ಪ್ರಕಟಣೆ ನೀಡಿದ್ದು, ಈ ಹಿಂದೆ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅದರ ಅನ್ವಯ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿತ್ತು. ಆದರೆ, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವ ಮುನ್ನವೇ ಭಾನುವಾರದ ಸರ್ಕಾರಿ ರಜೆ ದಿನವನ್ನು ದುರುಪಯೋಗಪಡಿಸಿಕೊಂಡು ಗೋವಿಂದ ನಾಯಕ್ ಹಾಗೂ ಅವರ ಪುತ್ರರಾದ ಕೃಷ್ಣಾನಂದ ನಾಯಕ್ ಮತ್ತು ಶಿವಾನಂದ ನಾಯಕ್ ಅವರು ಜೆಸಿಬಿ ಯಂತ್ರದ ಸಹಾಯದಿಂದ ಕ್ರೀಡಾಂಗಣದ ಮಧ್ಯಭಾಗದಲ್ಲಿ ಕಾಲುವೆ ತೋಡಿ ಮೈದಾನವನ್ನು ಹಾನಿಗೊಳಪಡಿಸಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.

ಈ ಘಟನೆಯಿಂದ ಸ್ಥಳೀಯ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಭಾರೀ ಅಡ್ಡಿಯಾಗಿದ್ದು, ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಮಕ್ಕಳಿಗೆ ಬೆದರಿಕೆ ಹಾಕಿ “ಇದು ನಮ್ಮ ಸ್ವಂತ ಜಾಗ” ಎಂದು ಹೇಳಿ ಆಟವಾಡುವುದನ್ನು ತಡೆಯಲು ಯತ್ನಿಸುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.

ತುಳುನಾಡ ರಕ್ಷಣಾ ವೇದಿಕೆ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು,
- ಜಿಲ್ಲಾಧಿಕಾರಿಗಳ ಆದೇಶದಂತೆ ಗ್ರಾಮ ಲೆಕ್ಕಾಧಿಕಾರಿಗಳಿಂದ ಸ್ಥಳ ಪರಿಶೀಲನೆ ಶೀಘ್ರ ನಡೆಸಬೇಕು.
- ಸರ್ವೇ ಅಧಿಕಾರಿಗಳಿಂದ ಭೂಮಿಯ ಅಳತೆ ಪೂರ್ಣಗೊಳ್ಳುವವರೆಗೆ ಯಾವುದೇ ಒತ್ತುವರಿ ನಡೆಯದಂತೆ ತಡೆಯಬೇಕು.
- ಮಕ್ಕಳಿಗೆ ಸುರಕ್ಷಿತವಾಗಿ ಕ್ರೀಡಾಂಗಣದಲ್ಲಿ ಆಟವಾಡಲು ಪೊಲೀಸ್ ಭದ್ರತೆ ಒದಗಿಸಬೇಕು.
- ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಅಧಿಕಾರಿಗಳು ತಕ್ಷಣ ಜಾಗೃತಿ ವಹಿಸಿ ಕ್ರಮ ಕೈಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.






