ಸ್ವಾತಂತ್ರ್ಯ ಹೋರಾಟಗಾರರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿ ಹಾಗೂ ತುಳುನಾಡ ರಕ್ಷಣಾ ವೇದಿಕೆ ಸಹಯೋಗದೊಂದಿಗೆ ದಿನಾಂಕ 15-08-2025 ರಂದು ಬೆಳಗ್ಗೆ 10.30 ಕ್ಕೆ ಮಂಗಳೂರಿನ ಬಾವುಟ ಗುಡ್ಡೆಯಲ್ಲಿರುವ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಮುಂಭಾಗದಲ್ಲಿ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು

ಶಾಸಕ ವೇದವ್ಯಾಸ್ ಕಾಮತ್ ಸಮರವೀರ ರಾಮಯ್ಯರ ತ್ಯಾಗ ಬಲಿದಾನದ ಬಗ್ಗೆ ಮಾತನಾಡಿದರು. ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೇಶ್ ಶೆಟ್ಟಿ ಜಪ್ಪು ಅವರು ರಾಮಯ್ಯ ಗೌಡರ ವೀರ ಮರಣದ ವಿಚಾರವನ್ನು ತಿಳಿಸಿದರು. ವಿಶ್ವ ಶ್ರೇಷ್ಠ ಕಾರು ಕಂಪನಿ ರೋಲ್ಸ್ ರೋಯ್ ಕಾರ್ ಕಂಪೆನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಕು ರೀತು ಪರ್ಣಳಿಗೆ ಸನ್ಮಾನಿಸಲಾಯಿತು. ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಅಧ್ಯಕ್ಷೆ ಸೌಮ್ಯ ಸುಕುಮಾರ್ ಭಾಗವಹಿಸಿದ್ದರು. ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಸುರೇಶ್ ಬೈಲು, ಮೋಹನ್ ಕಲ್ಮಂಜ , ಬಾಲಕೃಷ್ಣ ಬಿ, ಕೃಷ್ಣಪ್ಪ ಬಿ, ಆನಂದ ಪಿಎಚ್, ರಕ್ಷಿತ್ ಪುತ್ತಿಲ, ಪ್ರಶಾಂತ್ ಭಟ್ ಕಡಬ, ಆಶೀಶ್ ಅಂಚನ್ , ಶಿವರಾಂ ನಿನಿಕಲ್ಲು, ರಾಮದಾಸ್ ಪುತ್ತೂರು, ಸುಂದರ್ ಗುಡ್ ಲೈಫ್, ವಕೀಲ ವಾಸುದೇವ ಗೌಡ , ನವೀನ್ ಚಂದ್ರ ಬೋಜಾರ , ಕಿರಣ್ ಹೊಸೊಳಿಕೆ, ಮಹೇಶ್ ನೆಡುತೋಟ, ಗುರುದೇವ್ ಯು.ಬಿ. ರಾಮಚಂದ್ರ ಕೆ. ಮಹೇಶ್ ಮೊಂಟಡ್ಕ, ಸರೀಕಾ ಪಣೆಮಜಲು ಸೇರಿದಂತೆ ಹಲವಾರು ಗಣ್ಯರು ಮತ್ತು ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಸ್ಥಾಪನೆ ಸಮಿತಿ ಹಾಗೂ ತುಳುನಾಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ಸ್ವಾಗತಿಸಿದರು

