ಮಂಗಳೂರು, ಅ.16 – ಶ್ರೀ ಬಾರ್ಕೂರು ಮಹಾ ಸಂಸ್ಥಾನ ಭಾರ್ಗವ ಬೀಡು ಸಂಸ್ಥಾನದ ದಶಮ ಸಂಭ್ರಮದ ಅಂಗವಾಗಿ “ಬಂಟ ಸಂಸ್ಕೃತಿ ಪರಂಪರೆ ಅನಾವರಣ” ಕಾರ್ಯಕ್ರಮ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಹಾಮಂಡಲದ ಪದಗ್ರಹಣ ಸಮಾರಂಭವು ಅಕ್ಟೋಬರ್ 19, ಭಾನುವಾರ ಸಂಜೆ 3 ಗಂಟೆಗೆ ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿನ ವಿ.ಕೆ. ಶೆಟ್ಟಿ ಸಭಾಂಗಣದಲ್ಲಿ ಜರಗಲಿದೆ ಎಂದು ಮಹಾಮಂಡಲದ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ತಿಳಿಸಿದ್ದಾರೆ.
ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಮಹತ್ವದ ಕಾರ್ಯಕ್ರಮದಲ್ಲಿ ಶ್ರೀ ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿ ಪರಮಪೂಜ್ಯ ಡಾ. ವಿದ್ಯಾವಾಚಸ್ಪತಿ ವಿಶ್ವ ಸಂತೋಷ ಭಾರತಿ ಶ್ರೀಪಾದರ ದಿವ್ಯ ಉಪಸ್ಥಿತಿ ಇರಲಿದೆ ಎಂದು ತಿಳಿಸಿದ್ದಾರೆ.
ಪ್ರಮುಖ ಅತಿಥಿಗಳು:
• ಉದ್ಘಾಟನೆ: ಡಾ. ಕೆ. ಪ್ರಕಾಶ್ ಶೆಟ್ಟಿ, ಆಡಳಿತ ನಿರ್ದೇಶಕರು, ಎಂಆರ್ಜಿ ಗ್ರೂಪ್, ಬೆಂಗಳೂರು
• ಅಧ್ಯಕ್ಷತೆ: ಡಾ. ಸದಾಶಿವ ಶೆಟ್ಟಿ ಕೂಳೂರು ಕನ್ಯಾನ, ಸಿಎಂಡಿ, ಹೇರಂಭಾ ಇಂಡಸ್ಟ್ರೀಸ್, ಮುಂಬೈ
• ದಶಮ ಸಂಭ್ರಮ ಸಂಕಲ್ಪ ಅನಾವರಣ: ಶಶಿಧರ ಶೆಟ್ಟಿ ಬರೋಡ, ಆಡಳಿತ ನಿರ್ದೇಶಕರು, ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈ. ಲಿ.
• ಅಶಯ ನುಡಿಗಳು: ಡಾ. ಎಂ. ಮೋಹನ್ ಆಳ್ವಾರ್, ಕಾರ್ಯಾಧ್ಯಕ್ಷರು, ಶ್ರೀ ಬಾರ್ಕೂರು ಮಹಾಸಂಸ್ಥಾನ ಟ್ರಸ್ಟ್
ಸಾಂಸ್ಕೃತಿಕ ವೈಭವ:
ಕಾರ್ಯಕ್ರಮದ ನಂತರ, ಪರಮಪೂಜ್ಯ ಶ್ರೀ ಸಂತೋಷ್ ಶ್ರೀಪಾದರು ನೀಡುವ ಶ್ರಾವಣೀಯ ವ್ಯಾಖ್ಯಾನದಲ್ಲಿ, ಪಟ್ಲ ಸತೀಶ್ ಶೆಟ್ಟಿ ನಿರ್ವಹಣೆಯಲ್ಲಿ “ಗಾನ ಸುಧೆ ಯಕ್ಷ ವ್ಯಾಖ್ಯಾನ ವೈಭವ – ಕರ್ಣ ಪರ್ವ” ಕಾರ್ಯಕ್ರಮ ನಡೆಯಲಿದೆ.
ಸಂಘಟನಾ ಸಮಿತಿಗಳು ರಚನೆ:
ಡಾ. ಮೋಹನ್ ಆಳ್ವಾರ್ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಯೊಂದು ತಾಲೂಕು ಮಟ್ಟದಲ್ಲೂ ಮಹಾಮಂಡಲದ ಶಾಖೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾ, ತಾಲೂಕು ಮತ್ತು 8 ಕ್ಷೇತ್ರೀಯ ಮಂಡಲಗಳ ಪದಗ್ರಹಣ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿದ್ದವರು:
ಆನಂದ ಶೆಟ್ಟಿ ಅಡ್ಯಾರ್ (ಜಿಲ್ಲಾ ಮಹಾಮಂಡಲ ಅಧ್ಯಕ್ಷರು), ಕೆ. ರಾಜೇಶ್ ಶೆಟ್ಟಿ ಶಬರಿ (ಸಂಸ್ಥಾನದ ವಕ್ತಾರ), ಭಾಸ್ಕರ ಚಂದ್ರ ಶೆಟ್ಟಿ, ಚಂದ್ರಹಾಸ ಕಂಫರ್ಟ್ (ಮಹಾಮಂಡಲ ಪ್ರಧಾನ ಕಾರ್ಯದರ್ಶಿ), ನಿಟ್ಟೆಗುತ್ತು ರವಿರಾಜ್ ಶೆಟ್ಟಿ (ಮಂಗಳೂರು ಮಂಡಲ ಗೌರವಾಧ್ಯಕ್ಷ), ವಿಜಯ ಶೆಟ್ಟಿ (ಸದಸ್ಯ) ಮುಂತಾದವರು ಉಪಸ್ಥಿತರಿದ್ದರು.

