ತುಳುನಾಡ ರಕ್ಷಣಾ ವೇದಿಕೆಯ ವಾಮದಪದವು ಘಟಕ ವತಿಯಿಂದ ಆಟಿ ಅಮವಾಸ್ಯೆಯ ಅಂಗವಾಗಿ ದಿನಾಂಕ 24-07-2025 ರಂದು ಬೆಳಿಗ್ಗೆ 5.30ಕ್ಕೆ ತುಳುನಾಡು ಸೂಪರ್ ಬಜಾರ್ ಬಸ್ತಿ ಕೋಡಿ ಸಮೀಪ ಬಂಟ್ವಾಳ ತಾಲೂಕು ಅಧ್ಯಕ್ಷ ದೇವಿಪ್ರಸಾದ್ ವಾಮದಪದವು ರವರು ಸಾಂಕೇತಿಕ ವಾಗಿ ತುಳುನಾಡ ರಕ್ಷಣಾ ವೇದಿಕೆ ವಾಮದಪದವು ಘಟಕ ಅಧ್ಯಕ್ಷ ಹರೀಶ್ ಪೂಜಾರಿ ಕುದ್ಕೋಳಿ ರವರ ಪಾಲೆದ ಕೆತ್ತೆ ಕಷಾಯ ಪಾಲೆದ ಕೆತ್ತೆ ಕಷಾಯ ನೀಡುವ ಮೂಲಕ ಚಾಲನೆ ನೀಡಿದರು. ಬಳಿಕ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆ ವರೆಗೆ
ವಾಮದ ಪದವು ನೀಲ ಕಂಠೇಶ್ವರ ನೀಲಿ ದೇವಾಸ್ಥಾನ ಮತ್ತು ಕಾರಿಂಜೇಶ್ವರ ಆಟಿ ಅಮಾವಾಸ್ಯೆ ತೀರ್ಥಸ್ನಾನ ಮಾಡುವ ಭಕ್ತರು ಸೇರಿದಂತೆ ಸುಮಾರು 250 ಕ್ಕಿಂತಲೂ ಹೆಚ್ಚು ಜನರು ಪಾಲೆದ ಕಷಾಯ ಮತ್ತು ಮೆಂತೆ ಗಂಜಿ ಸ್ವೀಕರಿಸಿದರು
