ಬಂಟರ ಸಂಘ ಕಾವಳಕಟ್ಟೆ ವಲಯ
ಪದಗ್ರಹಣ ಆಟಿದ ಕೂಟ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಇಂದು ಕೆದ್ದಳಿಕೆ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಯುತ ತುಕಾರಾಂ ಶೆಟ್ಟಿ, ನಿವೃತ್ತ ಪಶುಪಾಲನ ಕಾರ್ಯಕರ್ತರು ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ವಾಮದಪದವು ವಲಯದ ಅಧ್ಯಕ್ಷರಾದ ಶ್ರೀ ವಸಂತ ಶೆಟ್ಟಿ ಕೇದಗೆ ಮತ್ತು ಉಪಾಧ್ಯಕ್ಷರಾದ ಯಶೋಧರ್ ಶೆಟ್ಟಿ ದಂಡೆ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ
ಶ್ರೀ ಸೀತಾರಾಮ್ ಶೆಟ್ಟಿ ಸೇವಾ ಉಪಸ್ಥಿತರಿದ್ದರು. ವಲಯದ ಅಧ್ಯಕ್ಷರಾದ ಶ್ರೀ ಮೋಹನ್ ಶೆಟ್ಟಿ ನರ್ವಲ್ದಡ್ಡ, ಗೌರವಾಧ್ಯಕ್ಷರಾದ ಜಗನ್ನಾಥ್ ಶೆಟ್ಟಿ ಕೆದ್ದಳಿಕೆ ,ಉಪಾಧ್ಯಕ್ಷರಾದ ಪ್ರದೀಪ್ ಶೆಟ್ಟಿ ಬಿಯಂತಬೆಟ್ಟು, ಲೋಕನಾಥ್ ಶೆಟ್ಟಿ ಬಂಗೇರಕೆರೆ, ಸದಾನಂದ ಪೂಂಜಾ ದೈಕಿನಕಟ್ಟೆ, ಪ್ರಕಾಶ್ ವಿ ಶೆಟ್ಟಿ ಮಧ್ವ, ಸುಂದರ್ ಶೆಟ್ಟಿ ಶಾಂತಿ ನಿಲಯ, ಯುವ ವಿಭಾಗದ ಅಧ್ಯಕ್ಷರಾದ ಕಿಶೋರ್ ಕುಮಾರ್ ರೈ, ಉಷಾ ಪ್ರಕಾಶ್ ಶೆಟ್ಟಿ ಮಧ್ವ ಕಾಡಬೆಟ್ಟು ಹಾಗೂ ವಲಯದ ಪ್ರಮುಖರು ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆ ಯನ್ನು ನಾಗೇಶ್ ರೈ ಬೆಂಗತ್ತೋಡಿ, ಗಣೇಶ್ ಶೆಟ್ಟಿ ಸೇವಾ ನಡೆಸಿಕೊಟ್ಟರು.
ಪ್ರಾರ್ಥನೆಯನ್ನು ಕು. ನಿಧಿಶಾ ಮತ್ತು ಕು.ದೀಪ್ತಿ ಮತ್ತು ಕು.ಸಮೀಕ್ಷಾ ನಡೆಸಿಕೊಟ್ಟರು.
ಮಧ್ಯಾಹ್ನದ ಸಭಾ ಕಾರ್ಯಕ್ರಮದಲ್ಲಿದ್ದ ಅತಿಥಿಗಳು:
ಸದಾನಂದ ಆಳ್ವಾ, ಕಂಪ, ಕಾರ್ಯದರ್ಶಿಗಳು ಬಂಟರ ಸಂಘ ಬಂಟ್ವಾಳ ತಾಲೂಕು), ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, (ಅಧ್ಯಕ್ಷರು,ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಾವಳಪಡೂರು)
ಶ್ರೀಮತಿ ವಿಂಧ್ಯಾ ಎಸ್ ರೈ( ಉಪಾಧ್ಯಕ್ಷರು , ದ.ಕ.ಜಿಲ್ಲಾ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ) ದಯಾನಂದ ಶೆಟ್ಟಿ ಅಮೈ, (ಅಧ್ಯಕ್ಷರು ಸರಪಾಡಿ ವಲಯ ಬಂಟರ ಸಂಘ)
ಶ್ರೀಮತಿ ಅರುಣಾ ಬಿ ಶೆಟ್ಟಿ ಇಚ್ಚಿಲ( ಕಾರ್ಯಕಾರಿಣಿ ಸದಸ್ಯೆ,ತಾಲೂಕು ಬಂಟರ ಸಂಘ ಬಂಟ್ವಾಳ)
ನಾರಾಯಣ ಶೆಟ್ಟಿ ಕುಮಂಗಿಲ (ಪ್ರಗತಿಪರ ಕೃಷಿಕರು) ಅಜಿತ್ ಶೆಟ್ಟಿ ಕಾರಿಂಜ ಅಧ್ಯಕ್ಷರು, ಕಾವಳಮೂಡೂರು ಗ್ರಾ.ಪಂ) ಹರ್ಷಾ ಶೆಟ್ಟಿ ಭಂಢಾರದ ಬೆಟ್ಟು, ಪ್ರಗತಿಪರ ಕೃಷಿಕರು, ಕೌಶಿಕ್ ಶೆಟ್ಟಿ ಕಾಡಿಮಾರು (ಅಧ್ಯಕ್ಷರು ಸಾರ್ವಜನಿಕ ಗೌರಿ ಗಣೇಶೋತ್ಸವ ಸಮಿತಿ ಪುಂಜಾಲಕಟ್ಟೆ) ವಿಶ್ವನಾಥ ಶೆಟ್ಟಿ ಕೊಟ್ಟಿಂಜ (ಅಧ್ಯಕ್ಷರು, ಫರಂಗಿಪೇಟೆ ವಲಯ)
ಶಂಕರ್ ಶೆಟ್ಟಿ ನಡ್ಯೋಡಿಗುತ್ತು (ಅಧ್ಯಕ್ಷರುಬಿ.ಸಿ.ರೋಡ್ ವಲಯ),
ಹರೀಶ್ಚಂದ್ರ ಆಳ್ವಾ(ಪ್ರಧಾನ ಕಾರ್ಯದರ್ಶಿ, ಫರಂಗಿಪೇಟೆ ವಲಯ) ಪುಷ್ಪರಾಜ್ ಶೆಟ್ಟಿ ( ಮಾಜಿ ಅಧ್ಯಕ್ಷರು, ಬಿ.ಸಿ.ರೋಡ್ ವಲಯ) ಕೃಷ್ಣ ಶೆಟ್ಟಿ (ಕೋಶಾಧಿಕಾರಿ ಫರಂಗಿಪೇಟೆ ವಲಯ)
ಜಗನ್ನಾಥ ರೈ ಮೇರಾವು (ಕಾರ್ಯದರ್ಶಿ ಫರಂಗಿಪೇಟೆ ವಲಯ) ಉಪಸ್ಥಿತರಿದ್ದರು.
ಸನ್ಮಾನಿತರು:
ಶ್ರೀ ಚಂದ್ರಶೇಖರ್ ಶೆಟ್ಟಿ ಪುಳಿಮಜಲು,(ಮಾಜಿ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಶ್ರೀ ಕಾರಿಂಜೇಶ್ವರ ದೇವಸ್ಥಾನ ಕಾರಿಂಜ)
ಶ್ರೀಮತಿ ಸುಧಾ ಚಂದ್ರಶೇಖರ್ ಶೆಟ್ಟಿ ಪುಳಿಮಜಲು( ಡಾಕ್ಟರೇಟ್ ಪದವಿ ಪಡೆದವರು, ಮತ್ತು NCC ಮೇಜರ್ ಪದವಿ ಪಡೆದವರು)
ವಿದುಷಿ ಸಹನಾ ಎಂ ಶೆಟ್ಟಿ ನರ್ವಲ್ದಡ್ಡ ( ಭರತಾಟ್ಯದಲ್ಲಿ ವಿದುಷಿ ಪದವಿ ಗಳಿಸಿದವರು) ಇವರನ್ನು ಸನ್ಮಾನಿಸಲಾಯಿತು.
ವಲಯದ ಅಧ್ಯಕ್ಷರಾಗಿ ಎರಡು ಅವಧಿಯಲ್ಲಿ ಸಂಘವನ್ನು ಮುನ್ನಡೆಸಿದ ಗೌರವಾಧ್ಯಕ್ಷರಾದ ಜಗನ್ನಾಥ ಶೆಟ್ಟಿ ಕೆದ್ದಳಿಕೆ ಮತ್ತು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಚಂದ್ರಶೇಖರ್ ಶೆಟ್ಟಿ ಪಣೆಕಲ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾರ್ಥಿ ವೇತನ: ಎಸ್ ಎಸ್ ಎಲ್ ಸಿ ಮತ್ತು ಪಿ.ಯು.ಸಿ. ಯಲ್ಲಿ 85% ಗಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಪುರಸ್ಕರಿಸಲಾಯಿತು.
ಎಸ್ ಎಸ್ ಎಲ್ ಸಿ ಯಲ್ಲಿ ವಲಯದಲ್ಲಿ ಅತ್ಯಧಿಕ ಅಂಕ ಗಳಿಸಿದ ಕುಮಾರಿ ಸಹನಾ ಪಣೆಕಲ( 616 ) ಹಾಗೂ ಪಿ ಯು ಸಿ ಯಲ್ಲಿ ಕುಮಾರಿ ಅಶ್ವಿತಾ ಭಂಢಾರಿ ಬೇಂಗತ್ತೋಡಿ(533) ಇವರುಗಳಿಗೆ ಶ್ರೀ ಸದಾಶಿವ ಶೆಟ್ಟಿ ಕೈಮಾರು ಇವರು ಕೊಡಮಾಡುವ ಪ್ರೋತ್ಸಾಹ ಧನವನ್ನು ಸಲ್ಲಿಸಿದರು.
ಗಣೇಶ್ ಶೆಟ್ಟಿ ಸೇವಾ ಕಾರ್ಯಕ್ರಮ ನಿರೂಪಿಸಿದರು, ದಿನೇಶ್ ಶೆಟ್ಟಿ ಕಾವಳಕಟ್ಟೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಮೇಲ್ಮನೆ ಧನ್ಯವಾದ ಸಲ್ಲಿಸಿದರು.
