ಮಂಗಳೂರು: ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ತೆಗೆದುಕೊಳ್ಳವ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ
ಬಂಟ್ವಾಳ ಪುತ್ತೂರು ಬೆಳ್ತಂಗಡಿ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣೆಗಳಲ್ಲಿ ಸಭೆ ನಡೆಸಲಾಗಿದೆ ಸಹಕಾರಿ ಬ್ಯಾಂಕುಗಳು ಹಾಗೂ ಸೊಸೈಟಿಗಳ ಮುಖ್ಯಸ್ಥರು ಮತ್ತು ಅಧಿಕಾರಿಗಳೊಂದಿಗೆ ಆಯಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಬ್ಯಾಂಕು ಮತ್ತು ಸೊಸೈಟಿಗಳ ಭದ್ರತೆ ಕುರಿತು ಸೂಚನೆ ನೀಡಲಾಗಿದ್ದು ಭದ್ರತಾ ಸಿಬ್ಬಂದಿ ನೇಮಕಾತಿ ಮತ್ತು ಸಿಸಿಟಿವಿ ಅಳವಡಿಕೆ ಸೇರಿದಂತೆ ಭದ್ರತೆ ಖಾತ್ರಿ ಪಡಿಸಲು ನಿರ್ದೇಶನ ನೀಡಲಾಗಿದೆ ಈ ಮಧ್ಯೆ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ ಸಂಬಂಧ ತನಿಖೆಗಾಗಿ ಎಸಿಪಿ ಧನ್ಯ ನಾಯಕ್ ನೇತೃತ್ವದಲ್ಲಿ ಎಂಟು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಇನ್ನು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಶಯಾಸ್ಪದ ವ್ಯಕ್ತಿಗಳನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ
Trending
- ✨ ಮಂಗಳೂರಿನ ಎಮ್ಸಿಸಿ ಬ್ಯಾಂಕ್ನಲ್ಲಿ ಸಂಭ್ರಮಭರಿತ ದೀಪಾವಳಿ ಆಚರಣೆ
- ದಿ|ಜಲಂಧರ ರೈ ಸಮಾಜಕ್ಕಾಗಿ ಸರ್ವಸಮರ್ಪಿತ ಕಾರ್ಯಕರ್ತ, ಇಪ್ಪತ್ತೈದನೇ ವರ್ಷದ ಸಂಸ್ಮರಣಾ ಸಮಾರಂಭದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ ಅಭಿಮತ
- 🕊️ ಬೆಂಗಳೂರು ತುಳುಕೂಟ ಅಧ್ಯಕ್ಷ ಸುಂದರರಾಜ ರೈ ಅವರ ನಿಧನಕ್ಕೆ ಸಂತಾಪ 🕊️
- ಮಣಿಪಾಲ: ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ – ಇಬ್ಬರು ಬಂಧನ
- ವೈದ್ಯಕೀಯ ಪರೀಕ್ಷೆಯ ನೆಪದಲ್ಲಿ ಯುವತಿಗೆ ಕಿರುಕುಳ: ಖಾಸಗಿ ಚರ್ಮ ತಜ್ಞನ ಬಂಧನ
- ಪುತ್ತೂರಿನಲ್ಲಿ ಪೊಲೀಸರ ಮೇಲೆ ದಾಳಿ ಮಾಡಿದ ಆರೋಪಿ ಗುಂಡೇಟಿಗೆ ಗಾಯ
- ಮಂಗಳೂರು: ಒಂಬತ್ತು ವಂಚನೆ ಪ್ರಕರಣಗಳ ಆರೋಪಿತೆ ಬರ್ಕೆ ಪೊಲೀಸರಿಂದ ಬಂಧನ
- 🌟 ಬುಹುಮುಖ ಪ್ರತಿಭೆ ಪ್ರಭಾ ನಾರಾಯಣ್ ಸುವರ್ಣ — ಸಮಾಜಸೇವೆಯ ಪಥದಲ್ಲಿ ಪ್ರಕಾಶಮಾನ ನಕ್ಷತ್ರ

