ಮಂಗಳೂರು, ಸೆಪ್ಟೆಂಬರ್ 7:
ಬಜ್ಪೆ ಪಟ್ಟಣ ಪಂಚಾಯತ್ ಸಿಬ್ಬಂದಿಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಹಾಗೂ ಪಂಚಾಯತಿನ ಅಭಿವೃದ್ಧಿಗೆ ಅಡ್ಡಿಯಾಗುತ್ತಿರುವ ಶಕ್ತಿಗಳನ್ನು ಕಡಿವಾಣ ಹಾಕುವಂತೆ ಆಗ್ರಹಿಸಿ, ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ನಿಯೋಗ ಇಂದು ಮಾನ್ಯ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು

ನಿಯೋಗವು ಸರ್ಕಾರದ ಪ್ರಭಾವಿ ಹಸ್ತಕ್ಷೇಪದ ಅಗತ್ಯತೆಯನ್ನು ಮನಗಟ್ಟಿಸಿ, ಸ್ಥಳೀಯ ಅಧಿಕಾರಿಗಳಿಗೆ ಧೈರ್ಯ ತುಂಬಿಸುವಂತಹ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದೆ. ಅಲ್ಲದೆ, ಅಧಿಕಾರಿಗಳ ವಿರುದ್ಧ ದೂರುಗಳನ್ನು ಸಲ್ಲಿಸುವ ಮೂಲಕ ಆಡಳಿತ ಕಾರ್ಯಗಳಲ್ಲಿ ಅಡಚಣೆ ಸೃಷ್ಟಿಸುತ್ತಿರುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.

ಈ ನಿಯೋಗದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕ ಸಿರಾಜ್ ಬಜ್ಪೆ, ದಲಿತ ಸಂಘ ಸಮಿತಿಯ ರಾಜ್ಯ ಸಂಚಾಲಕ ಎಂ. ದೇವದಾಸ್, ಸಹ ಸಂಚಾಲಕ ಇಸ್ಮಾಯಿಲ್ ಇಂಜಿನಿಯರ್, INTUC ಜಿಲ್ಲಾಧ್ಯಕ್ಷ ನಿಸಾರ್ ಕರಾವಳಿ, ಮಹಿಳಾ ನಾಯಕಿ ಮತ್ತು ಕಂದಾವರ ಗ್ರಾಮ ಪಂಚಾಯತ್ ಸದಸ್ಯ ವಿಜಯ ಗೋಪಾಲ್ ಸುವರ್ಣ, ಸದಸ್ಯರಾದ ಮಾಲತಿ, ಬಜ್ಪೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಆಯಿಷಾ, ಹಿರಿಯ ನಾಗರಿಕ ಮೊನಕ್, ಅನ್ವರ್ ರಝಕ್ ಬಜ್ಪೆ, ದಲಿತ ಸಂಘ ಸಮಿತಿಯ ಸದಸ್ಯರು ಲಕ್ಷ್ಮಣ ಮತ್ತು ಸಂಕಪ್ಪ ಕಾಂಚನ್, SDPI ಮುಖಂಡ ಹಮೀದ್ ಕೂಲ್ ಪಾಯಿಂಟ್, ಪರಿಶಿಷ್ಟ ಪಂಗಡದ ಮುಖಂಡರು ಕಿರಣ್, ಇರ್ಷಾದ್ ಬಜ್ಪೆ, ಬಿ ಎಚ್ ಖಾದರ್ ಜರಿ, ನೌಫಾಲ್ ಸೌಹಾರ್ದ ನಗರ ಮತ್ತು ಹಲವಾರು ಊರಿನ ನಾಗರಿಕರು ಭಾಗವಹಿಸಿದ್ದರು.
