ಬೆಂಗಳೂರು, ಆಗಸ್ಟ್ 3, 2025 — ಒಕಿನಾವನ್ ಶೋಟೋಕಾನ್ ಕರಾಟೆ ಚಾಂಪಿಯನ್ಶಿಪ್ 2025 ಅನ್ನು ಆಗಸ್ಟ್ 3ರಂದು ಯಲಚೆನಹಳ್ಳಿ ಟ್ರಾನ್ಸೆಂಡ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನಲ್ಲಿ ಅಂತರ್ ಶಾಲಾ ಸ್ಪರ್ಧೆಯು ಆಯೋಜಿಸಲಾಯಿತು.


ಈ ಸ್ಪರ್ಧೆಯಲ್ಲಿ, ಮಿತ್ತಬಾಗಿಲು ಗ್ರಾಮದ, ಆಚಾರಿಬೆಟ್ಟು ಮನೆಯ “ಶ್ರೀಯುತ ಟಿಲ್ಲರ್ ಡಿಕಯ್ಯ ಗೌಡ”ರ ಮೊಮ್ಮಕ್ಕಲಾದ, ಬೆಂಗಳೂರು ನಗರದಲ್ಲಿ ವಾಸವಾಗಿರುವ ‘ವಿನಯಚಂದ್ರ’ ರವರ ಅವಳಿ ಮಕ್ಕಳಾದ “ಎ. ವಿಭಾಷ್ ವಿನಯಚಂದ್ರ” ಮತ್ತು “ಎ. ವಿಭಾ ವಿನಯಚಂದ್ರ” ಅವರು ಪ್ರಭಾವಶಾಲಿ ಪ್ರದರ್ಶನ ನೀಡಿದ್ದು, ತಲಾ ಎರಡು ಪದಕ ಮತ್ತು ಟ್ರೋಪಿಗಳನ್ನು ಗೆಲ್ಲುವ ಮೂಲಕ ಟೂರ್ನಮೆಂಟ್ ಟ್ರೋಫಿಯನ್ನು ಪಡೆದಿದ್ದಾರೆ. ಇವರಿಗೆ ರಾಜೇಂದ್ರ ಬಾಬು ಮತ್ತು ಗೀತಾ ಎಂಬ ತರಬೇತಿದಾರರ ಮಾರ್ಗದರ್ಶನ ಲಭಿಸಿದೆ.
ವಿಭಾಷ್ ಮತ್ತು ವಿಭಾ ಇಬ್ಬರೂ ಜೆ.ಪಿ.ನಗರದ ಸನ್ ಜುಪಿಟರ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ 3ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಇವರ ಕರಾಟೆ ಸಾಧನೆಯು ಶಾಲೆಯು ಹಾಗೂ ತರಬೇತಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರವಾಗಿದೆ.
ಇವರ ತಂದೆ “ಶ್ರೀಯುತ. ವಿನಯಚಂದ್ರ” ಕರ್ನಾಟಕ ಹೈಕೋರ್ಟ್ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದು, ಅವರು ಮಕ್ಕಳ ಸಾಧನೆಗೆ ಹೆಮ್ಮೆಯ ಅಭಿವ್ಯಕ್ತಿ ನೀಡಿದರು.
ರಾಜ್ಯದ ವಿವಿಧೆಡೆಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದ ಈ ಸ್ಪರ್ಧೆ ಒಕಿನಾವನ್ ಶೈಲಿಯ ಕರಾಟೆಯ ಕೌಶಲ್ಯ ಮತ್ತು ಕ್ರೀಡಾಸ್ಪರ್ಧೆಯ ಉತ್ಸವವಾಗಿತ್ತು. ಸಹೋದರ-ಸಹೋದರಿಯರ ಪ್ರದರ್ಶನವು ಈ ಕೂಟದ ಪ್ರಮುಖ ಆಕರ್ಷಣೆಯಾಗಿ ಎದ ಹೊರಹೊಮ್ಮಿತು.
