Author: Tulunada Surya

ಮಂಗಳೂರು, ಸೆಪ್ಟೆಂಬರ್ 14: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 14 ರಿಂದ 16ರ ವರೆಗೆ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆಗಳು, ಮತ್ತು ಮೊಸರುಕುಡಿಕೆ ಉತ್ಸವಗಳು ನಡೆಯಲಿವೆ. ಈ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ವ್ಯತ್ಯಯ ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅವರು ಎತ್ತಂಗಡಿಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಮದ್ಯ ಸೇವನೆಯಿಂದಾಗಿ ಕಿಡಿಗೇಡಿಗಳು ಗಲಭೆ ಸೃಷ್ಟಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದೇಶದಡಿಯಲ್ಲಿ, ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಬಾರ್‌, ವೈನ್ ಶಾಪ್‌ಗಳು ಹಾಗೂ ಲೈಸನ್ಸ್ ಹೊಂದಿರುವ ಮದ್ಯದಂಗಡಿಗಳು ಸೆಪ್ಟೆಂಬರ್ 14ರಿಂದ 16ರ ವರೆಗೆ ಮುಚ್ಚಿರಬೇಕು. ಈ ಅವಧಿಯಲ್ಲಿ ಯಾವುದೇ ರೀತಿಯ ಮದ್ಯ ಮಾರಾಟವೂ ನಿಷಿದ್ಧವಾಗಿದೆ. ಜಿಲ್ಲಾ ಆಡಳಿತ ಹಾಗೂ ಪೊಲೀಸ್ ಇಲಾಖೆ ಶಾಂತಿಯುತ ಉತ್ಸವಕ್ಕೆ ತಯಾರಿ ನಡೆಸುತ್ತಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಕೋರಲಾಗಿದೆ.

Read More

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು 2023-24 ನೇ ಸಾಲಿನಲ್ಲಿ ₹1174 ಕೋಟಿ ವ್ಯವಹಾರ ನಡೆಸಿದ್ದು, ₹12.79 ಕೋಟಿ ನಿವ್ವಳ ಲಾಭ ದಾಖಲಿಸುವ ಮೂಲಕ ಮಹತ್ತರ ಸಾಧನೆ ಮಾಡಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಅವರು ಈ ಮಾಹಿತಿಯನ್ನು ನೀಡಿದ್ದಾರೆ. ದೈನಂದಿನ ಹಾಲು ಶೇಖರಣೆಯು ಪ್ರಸ್ತುತ 3.97 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. 2024-25 ನೇ ಸಾಲಿನಲ್ಲಿ ದಿನದ ಸರಾಸರಿ ಶೇಖರಣೆಯು 3.42 ಲಕ್ಷ ಲೀಟರ್ ಆಗಿತ್ತು, ಮತ್ತು ಈಗ 2025-26 ನೇ ಸಾಲಿನಲ್ಲಿ 16% ಶೇಖರಣೆ ಪ್ರಗತಿ ಕಂಡುಬಂದಿದೆ. ಮಾರಾಟ ಮತ್ತು ಉತ್ಪನ್ನಗಳ ವಿಸ್ತರಣೆ ದಿನದ ಮೂಲದ ಮೇಲೆ 4.02 ಲಕ್ಷ ಲೀಟರ್ ಹಾಲು ಮತ್ತು 81,000 ಕೆ.ಜಿ. ಮೊಸರು ಮಾರಾಟವಾಗುತ್ತಿದೆ. ಹಾಲು, ಮೊಸರು ಜೊತೆಗೆ ಕಹಾಮ್ ಉತ್ಪನ್ನಗಳ ಮಾರಾಟವೂ ಜೋರು ಹೊಂದಿದೆ. ರೈತ ಕಲ್ಯಾಣ ಮತ್ತು ವಿಮಾ ಯೋಜನೆಗಳು 55000 ಹೈನುಗಾರ ರೈತರ ಹಿತದೃಷ್ಟಿಯಿಂದ ಸ್ಥಾಪಿಸಲಾದ ರೈತ…

Read More

ಮಂಗಳೂರು: ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್ ದ.ಕ.ಜಿಲ್ಲೆ ಮತ್ತು ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿ ಜಂಟಿ ಆಶ್ರಯದಲ್ಲಿ ದೇರಳಕಟ್ಟೆಯಲ್ಲಿ ಸೆಪ್ಟೆಂಬರ್ 14 ತಾರೀಕಿನ 2025 ರಂದು ನಡೆದ ರಾಜ್ಯ ಮಟ್ಟದ ಚುಟುಕು ಕವಿಗೋಷ್ಟಿ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಪ್ರಶಸ್ತಿ ನೀಡುವ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾದ ಹಾಗೂ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಸದಸ್ಯ ಶ್ರೀಯುತ ಹಮೀದ್ ಹಸನ್ ಮಾಡೂರು ಇವರಿಗೆ ಭಾವೈಕ್ಯತಾ ಸಾಹಿತ್ಯ ರತ್ನ ಪ್ರಶಸ್ತಿ ಗೆ ಭಾಜನರಾಗಿರುತ್ತಾರೆ.

Read More

ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಭೆಯು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಕಛೇರಿ ಯಲ್ಲಿ ಬ್ಲಾಕ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ ರವರ ಅಧ್ಯಕ್ಷತೆಯಲ್ಲಿ ಜರುಗಿತು. 5ನೇ ವಾರ್ಡ್ ಚೊಕ್ಕಬೆಟ್ಟು ಟಿ . ಮೊಹಿದ್ದೀನ್ ಕೃಷ್ಣಾಪುರ ತನ್ನದೇ ಸ್ವಂತ ಕರ್ಚಿನಿಂದ ಇಂದಿರಾ ಸೇವಾ ಕೇಂದ್ರ ಕಚೇರಿ 8th ಎ ಬ್ಲಾಕ್ ಕೃಷ್ಣಾಪುರದಲ್ಲಿ ಸರಕಾರದ 5 ಗ್ಯಾರಂಟಿ ನೊಂದವನೆ ಹಾಗೂ ಅದರಲ್ಲಿ ಇರುವ ಸಮಸ್ಯೆಗಳನ್ನು ಸರಿಪಡಿಸುವ ಮೂಲಕ ಜನಪರ ಕೆಲಸಗಳನ್ನು ಮಾಡಿ ಕೊಡುವಲ್ಲಿ ಯಶಸ್ವಿ ಆಗಿದ್ದಾರೆ ಅದಲ್ಲದೆ ಮತದಾನ ಗುರುತು ಚೀಟಿ (voter id) ನೊಂದಾಯಿಸಲು ಸಹಾಯ ಇನ್ನಿತರ ಸರ್ಕಾರ ಸೌಲಭ್ಯ ಒದಗಿಸಲು ಪ್ರಯತ್ನಿಸಿ ಸಮಾಜ ಸೇವೆ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಗುರುತಿಸಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿಯವರು ಸನ್ಮಾನಿಸಿದರು.ಈ ಸಭೆಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ಧ್ವನಿ ಬೆಳಕು ಮಾಲಕರ ಸಂಘ, ಮಂಗಳೂರು ತಾಲೂಕು (ರಿ) ಇದರ ಕಾವೂರು ವಲಯದ ಆಶ್ರಯದಲ್ಲಿ ತೃತೀಯ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮ್ 2025 ಧ್ವನಿ ಬೆಳಕು ಮಾಲಕರ ಸಂಗಮ ಕಾರ್ಯಕ್ರಮ ಕಾವೂರು ಕೇಂದ್ರ ಮೈದಾನದಲ್ಲಿ ದಿನಾಂಕ- 13-9-2025,ಶನಿವಾರ,ಸಂಜೆ 7 ಗಂಟೆಗೆ ಸರಿಯಾಗಿ ಸಭಾ ಕಾರ್ಯಕ್ರಮ ನಡೆಯಿತು, ಈ ಕಾರ್ಯಕ್ರಮವನ್ನು ಮುಲ್ಕಿ ಮೂಡಬಿದ್ರಿ ಶಾಸಕರಾದಂತಹ ಶ್ರೀ ಉಮನಾಥ್ ಕೋಟ್ಯಾನ್ ಇವರು ಉದ್ಘಾಟಿಸಿ, ಮಾತನಾಡಿ, ಧ್ವನಿ ಬೆಳಕು ಮಾಲಕರ ಸಮಸ್ಯೆಯೂ ನನಗೆ ತಿಳಿದಿದೆ, ಇವರ ಜೀವನ ಕಷ್ಟದ ಜೀವನ, ನಿಮ್ಮ ಸಂಘಟನೆ ಇರುವುದರಿಂದ ನಿಮ್ಮ ಒಗ್ಗಟ್ಟು, ಎದ್ದು ಕಾಣುತ್ತಿದೆ, ಈಗಿನ ಪ್ರಸ್ತುತ ಸಮಸ್ಯೆಗಳಿಗೆ ಸಂಘಟನೆ ಇರುವುದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರು, ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ವೈ ಭರತ್ ಶೆಟ್ಟಿ ಮಾತನಾಡಿ ನಿಮ್ಮ ಸಮಸ್ಯೆಯನ್ನು ಸದನದಲ್ಲಿ ನಾವು ಧ್ವನಿಯೆತ್ತಿದ್ದೇವೆ, ನಿಮ್ಮ ಜೊತೆ ಯಾವಾಗಲೂ ನಾವು ಇರುತ್ತೇವೆ ಎಂದರು, ಧ್ವನಿ ಬೆಳಕು ಮಾಲಕರ ಸಂಘದ ಅಧ್ಯಕ್ಷರಾದ ಬೆನಟ್ ಡಿ ಸಿಲ್ವ ಮಾತನಾಡಿ ಕಾರ್ಯಕ್ರಮಕೆ ಶುಭ…

Read More

ಉಡುಪಿ, ಸೆಪ್ಟೆಂಬರ್ 14 – ಕೋವಿಡ್-19 ಸಂದರ್ಭದಲ್ಲಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಾವಿರಾರು ಅಭ್ಯರ್ಥಿಗಳು ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಾಗಿ ಅನೇಕ ವರ್ಷಗಳಿಂದ ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಕೋಟ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹಸಚಿವ ಜಿ. ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿ, ಪೊಲೀಸರಿಗೆ ನೇಮಕಾತಿ ಮಾಡುವಾಗ ವಯೋಮಿತಿಯನ್ನು 30ರಿಂದ 33 ವರ್ಷಕ್ಕೆ ಹೆಚ್ಚಿಸಲು ಒತ್ತಾಯಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದ ಅವಧಿಯಲ್ಲಿ ವಯೋಮಿತಿ 30 ವರ್ಷವರೆಗೆ ನಿಗದಿಯಾಗಿದ್ದರೆ, ಆ ಸಮಯದಲ್ಲಿಯೇ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ವಯೋಮಿತಿ 33 ವರ್ಷಕ್ಕೆ ಹೆಚ್ಚಿಸಲು ಆಗ್ರಹಿಸಿದ್ದರು. ಆದರೆ, ಆಗ ಸರಕಾರದ ಅವಧಿಯಲ್ಲಿ ಈ ಮುಂದುವರಿಕೆ ಸಾಧ್ಯವಾಗಿಲ್ಲ. ಇದೀಗ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದು, ಮತ್ತೆ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗೆ ಸಿದ್ಧತೆ ನಡೆಯುತ್ತಿದೆ. ಈ ಸಂದರ್ಭ, ಕೋವಿಡ್ ಪರಿಣಾಮದಿಂದಾಗಿ ವಯೋಮಿತಿಯ ಜತೆಗೆ ಬಲಿಯಾದ ಯುವಕರಿಗೆ ನ್ಯಾಯ ಒದಗಿಸಲು ವಯೋಮಿತಿ 33 ವರ್ಷಕ್ಕೆ…

Read More

ಕಾಪು : ಚಂದ್ರನಗರ ಖಿಲ್ರಿಯ ಜುಮ್ಮಾ ಮಸ್ಜಿದ್ ವತಿಯಿಂದ ಮಲ್ಲಾರು-ಮಜೂರು ಬದ್ರಿಯ ಜುಮ್ಮಾ ಮಸ್ಜಿದ್ ಅಧ್ಯಕ್ಷರು ಕಾಪುವಿನ ಖ್ಯಾತ ಸಮಾಜ ಸೇವಕರಾದ ಡಾ.ಫಾರೂಕ್ ಚಂದ್ರನಗರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಅವರು ಚಂದ್ರನಗರ ನನ್ನ ಹುಟ್ಟಿದ ಊರು ಇಲ್ಲಿಯ ಜನರ ಪ್ರೀತಿ ವಿಶ್ವಾಸ ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಈ ಮಸ್ಜಿದ್ ಗೆ ಯಾವುದೇ ವರಮಾನ ಇಲ್ಲದಿದ್ದರೂ ಇಲ್ಲಿಯ ಯುವಕರು ಜಮಾತಿಗರ ಸೇವೆ ದೇವರು ಮೆಚ್ಚುವಂತಹದು ಎಲ್ಲರಿಗೂ ಒಳ್ಳೆದಾಗಲಿ ಎಂದು ಶುಭ ಹಾರೈಸಿದರು ಈ ಸಂದರ್ಭದಲ್ಲಿ ಅನಿವಾಸಿ ಭಾರತೀಯ ಉದ್ಯಮಿ ಏನ್.ಟಿ ಎಕ್ಸ್ ಪ್ರೆಸ್ ಮಾಲಕರಾದ ಪರ್ಕಳ ರಜಬ್ ಬ್ಯಾರಿ, ಉದ್ಯಮಿ ಅಬ್ದುಲ್ಲ ಉಂಜಿ ಕತಾರ್, ಮೊಯಿದಿನ್ ಬ್ಯಾರಿ ಪರ್ಕಳ, ಖಿಲ್ರಿಯ ಜುಮ್ಮಾ ಮಸ್ಜಿದ್ ಖತಿಬರಾದ ಮುಸ್ತಫಾ ಸಖಾಫಿ, ಖಿಲ್ರಿಯ ಜುಮ್ಮಾ ಮಸ್ಜಿದ್ ಅಧ್ಯಕ್ಷರಾದ ಶಂಶುದ್ದಿನ್, ಮಸ್ಜಿದ್ ಅಭಿವೃದ್ಧಿ ಅಧ್ಯಕ್ಷರಾದ ಕೆ. ಎಂ ಉಮ್ಮರಬ್ಬ ಹಾಗೂ ಇನ್ನಿತರರು ಉಪಸ್ಥಿತರಿದ್ದರು

Read More

ಇತ್ತೀಚೆಗೆ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ವತಿಯಿಂದ ಬಜ್ಪೆ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಬಜ್ಪೆ ನಾಗರಿಕರ ಹಿತ ರಕ್ಷಣೆಯ ಬಗ್ಗೆ ನಡೆಸಿ, ಬಜ್ಪೆ ಪೇಟೆಯ ಸರ್ವಾಂಗೀಣ ಅಭಿವೃದ್ದಿ, ಬೆಳೆಯುತ್ತಿರುವ ಬಜ್ಪೆ ಪಟ್ಟಣ ಪಂಚಾಯತ್ನೊಳಗೊಂಡಂತೆ,ಸಮೀಪದ 4 ಗ್ರಾಮಪಂಚಾಯತ್ ಸೇರಿಸಿಕೊಂಡು, ಬಜ್ಪೆ ಪ್ರಾಥಮಿಕ ಅರೋಗ್ಯ ಕೇಂದ್ರವನ್ನು ,ಸಮುದಾಯ ಅರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸುವುದರ ಬಗ್ಗೆ ರಾಜಕೀಯ ಪಕ್ಷಗಳು, ನಮಗೆ ಇದುವರೆಗೆ ಆಶ್ವಾಸನೆ ಕೊಟ್ಟದು ಸಾಕು, ನಾವು ಇನ್ನೂ ತಡಮಾಡದೆ ಹಿತ ರಕ್ಷಣಾ ವೇದಿಕೆಯ ಮುಂದಾಳತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ತೀರ್ಮಾನಿಸಲಾಯಿತು. ಬಜ್ಪೆ ಪೇಟೆಯಲ್ಲಿ ಸುಸಜ್ಜಿತ ಬಸ್ಸು ನಿಲ್ದಾಣ ನಿರ್ಮಿಸುವಲ್ಲಿ ಮನವಿ ಕೊಡುವುದಾಗಿ ತೀರ್ಮಾನಿಸಿ, ನೆನಗುದ್ದಿಗೆ ಬಿದ್ದ ಇಂದಿರಾ ಕ್ಯಾಂಟೀನ್ ಅದಷ್ಟು ಬೇಗ ಉದ್ಘಾಟನೆ ಮಾಡಿಸಿ,ಸಾರ್ವಜನಿಕರಿಗೆ ಅನುಕೂಲಮಾಡಿಕೊಡುವ ವಿಷಯದಲ್ಲಿ ಪ್ರಯತ್ನಿಸಲು ತಿರ್ಮಾಣಕೈಗೊಳ್ಳಲಾಯಿತು. ಬಜ್ಪೆ ಪೇಟೆಯ ಪ್ರತಿಯೊಂದು ಅಭಿವೃದ್ಧಿಯಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಸಂಪೂರ್ಣವಾಗಿ ಸೇರಿಕೊಂಡು, ಸಂಬಂಧ ಪಟ್ಟ ಸಚಿವರು, ಅಧಿಕಾರಿಗಳು ಬೇಟಿಯಾಗುವುದಾಗಿ ನಿರ್ಣಯಿಸಲಾಯಿತು. ವಿಶೇಷವಾಗಿ ತಮ್ಮ ಗ್ರಾಮದ ಸ್ವಂತ ಭೂಮಿಯನ್ನು ಕೊಟ್ಟು ತ್ಯಾಗ ಮಾಡಿದ…

Read More

ಮಂಗಳೂರು, ಸೆಪ್ಟೆಂಬರ್ 13 – ಯಾವುದೇ ಧಾರ್ಮಿಕ ಹಬ್ಬ, ಉತ್ಸವ, ಮೆರವಣಿಗೆಗಳಿಗೆ ಮಂಗಳೂರು ನಗರ ಪೊಲೀಸ್ ಇಲಾಖೆ ಯಾವುದೇ ರೀತಿಯ ಅಡ್ಡಿಯನ್ನೂ ಹಾಕಿಲ್ಲ ಎಂಬುದಾಗಿ ನಗರ ಪೊಲೀಸ್ ಕಮಿಷನರ್‌ ಸುಧೀರ್ ಕುಮಾರ್ ರೆಡ್ಡಿ ಅವರು ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಾರ್ವಜನಿಕ ಹಬ್ಬಗಳ ಆಚರಣೆ ಹಾಗೂ ಮೆರವಣಿಗೆಗಳಿಗೆ ಯಾವುದೇ ಕಾಲಮಿತಿಯನ್ನೂ ನಿಗದಿಪಡಿಸಿಲ್ಲ. ಆದರೆ ಧ್ವನಿಯ ಮಿತಿಯನ್ನು ಮಾತ್ರ ಕಾನೂನಿನಂತೆ ಪಾಲಿಸಲು ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ. ಕಮಿಷನರ್ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ನಡೆದ ಗಣೇಶೋತ್ಸವದ ಮೆರವಣಿಗೆಗಳು ರಾತ್ರಿ 2.30ರವರೆಗೆ ನಡೆದಿದ್ದರೂ ಎಲ್ಲಿ ಒಂದೂ ಸಮಸ್ಯೆಯು ಉಂಟಾಗಿಲ್ಲವೆಂದು ಅವರು ಉದಾಹರಣೆ ನೀಡಿದರು. “ನೆಹರೂ ಮೈದಾನದಲ್ಲಿ ನಡೆದ ಮೆರವಣಿಗೆಯ ಟ್ಯಾಬ್ಲೋಗಳಲ್ಲಿ ನಿರ್ಧರಿಸಿದ ಮಟ್ಟದ ಸೌಂಡ್‌ ಬಳಕೆಯಾಗಿತ್ತು. ಎಲ್ಲವೂ ಅಚ್ಚುಕಟ್ಟಾಗಿ ನಿರ್ವಹಣೆಯಾಗಿದ್ದು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಿಲ್ಲ” ಎಂದು ಹೇಳಿದರು. ಯಕ್ಷಗಾನ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಇದೇ ರೀತಿಯ ಮಾರ್ಗಸೂಚಿಗಳನ್ನು ಪಾಲಿಸುವುದು ಅಗತ್ಯ ಎಂದು ಅವರು ನೆನಪಿಸಿದರು. 100 ಜನರ ಸಾಮರ್ಥ್ಯದ ಸ್ಥಳದಲ್ಲಿ…

Read More

ಹಾಸನ, ಸೆಪ್ಟೆಂಬರ್ 12 – ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 373ರ ಬಳಿ ನಡೆದ ಗಣೇಶ ಮೆರವಣಿಗೆಯ ವೇಳೆ ಭೀಕರ ಅಪಘಾತ ಸಂಭವಿಸಿದ್ದು, ಲಾರಿಯೊಂದು ನಿಯಂತ್ರಣ ತಪ್ಪಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರ ಮೇಲೆ ಹರಿದ ಪರಿಣಾಮ ಕನಿಷ್ಠ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 15ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆ ಮೂಲಗಳ ಪ್ರಕಾರ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಸಾವಿರಾರು ಭಕ್ತರು ಡಿಜೆ ಸಂಗೀತದೊಂದಿಗೆ ಸಂಭ್ರಮದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಘಟನೆಯ ದೃಶ್ಯವಿವೆಡೆ ವೈರಲ್ ಆಗುತ್ತಿವೆ. ಸ್ಥಳೀಯರು ಹಾಗೂ ಪೊಲೀಸರ ನೆರವಿನಿಂದ ಗಾಯಾಳುಗಳಿಗೆ ತಕ್ಷಣವೇ ನೆರವು ನೀಡಲಾಯಿತು. ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಪ್ರಕಾರ, ಮೆರವಣಿಗೆ ಸಾಗುತ್ತಿರುವ ಸಮಯದಲ್ಲಿ ವೇಗವಾಗಿ ಬಂದ ಲಾರಿ ನಿಯಂತ್ರಣ ತಪ್ಪಿ ನೇರವಾಗಿ ಜನರ ಗುಂಪಿನಲ್ಲಿ ನುಗ್ಗಿದ್ದು, ಭಯಾನಕ ಪರಿಸ್ಥಿತಿ ಉಂಟಾಗಿದೆ. ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು, ಲಾರಿ ಚಾಲಕನನ್ನು…

Read More