Author: Tulunada Surya

ಬ್ರಹ್ಮಾವರ:ನಿನ್ನೆ ಸಾಯಂಕಾಲ ಸಾಹೇಬ್ರಕಟ್ಟೆಯಿಂದ ಬ್ರಹ್ಮಾವರದ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ, ಬಾರ್ಕೂರು ಬ್ರಿಡ್ಜ್ ಸಮೀಪ ಸಂಜೆ ಸುಮಾರು 4 ಗಂಟೆಯ ವೇಳೆಗೆ ರಸ್ತೆಯ ಬದಿಯಲ್ಲಿ ಬಿದ್ದಿದ್ದ ಒಂದು ಬ್ಯಾಗ್‌ನ್ನು ರೋಶನ್ ಡಿಸೋಜ ಅಮ್ಮುಂಜೆ ಗಮನಿಸಿದರು.ತಕ್ಷಣವೇ ಬ್ಯಾಗ್‌ನ್ನು ತೆರೆದು ಪರಿಶೀಲಿಸಿದಾಗ, ಅದರೊಳಗೆ ಬಟ್ಟೆಗಳು ಹಾಗೂ ಬೆಲೆಬಾಳುವ ಚಿನ್ನಾಭರಣಗಳು ಇರುವುದನ್ನು ಕಂಡುಬಂದಿತು. ಯಾವುದೇ ಸಂಶಯಕ್ಕೆ ಆಸ್ಪದ ಕೊಡದೆ, ಅದೇ ಕ್ಷಣದಲ್ಲಿ ಈ ವಿಷಯವನ್ನು ತಮ್ಮ ವಾಟ್ಸಪ್ ಸ್ಟೇಟಸ್ ಹಾಗೂ ವಿವಿಧ ಗ್ರೂಪ್‌ಗಳ ಮೂಲಕ ಸಾರ್ವಜನಿಕವಾಗಿ ಹಂಚಿಕೊಂಡರು.ದೇವರ ಕೃಪೆಯಿಂದ ಹಾಗೂ ಸಾಮಾಜಿಕ ಜಾಲತಾಣದ ಸಹಕಾರದಿಂದ, ಬ್ಯಾಗ್‌ನ ನೈಜ ವಾರಸುದಾರರು ದಾವಣಗೆರೆಯವರು ಎಂಬುದು ಪತ್ತೆಯಾಗಿದ್ದು, ವಸ್ತುಗಳನ್ನು ಸುರಕ್ಷಿತವಾಗಿ ಅವರಿಗೆ ಹಸ್ತಾಂತರಿಸಲಾಗಿದೆ.ಈ ಬಗ್ಗೆ ಪ್ರತಿಕ್ರಿಯಿಸಿದ ತುಳುನಾಡ ರಕ್ಷಣಾ ವೇದಿಕೆ ಮುಖಂಡ ರೋಶನ್ ಡಿಸೋಜ ಅಮ್ಮುಂಜೆ “ಇದನ್ನು ಸಾಧನೆ ಎಂದು ತೋರಿಸಿಕೊಳ್ಳಲು ನಾನು ಹಂಚಿಕೊಂಡಿಲ್ಲ. ಬೇರೆಯವರ ವಸ್ತು ನಮಗೆ ಬೇಡ ಎಂಬ ಮನಸ್ಥಿತಿಯಿಂದಲೇ ಈ ನಡೆ. ಕಷ್ಟಪಟ್ಟು ದುಡಿದು ಸಂಪಾದಿಸಿದ ವಸ್ತು ಕಳೆದುಕೊಂಡಾಗ ಆಗುವ ನೋವು ಎಷ್ಟು ದೊಡ್ಡದು ಅನ್ನೋದು ಅದನ್ನು ಅನುಭವಿಸಿದವರಿಗೇ ಗೊತ್ತು. ಆ ನೋವಿನ ಶಾಪ…

Read More

ತುಳುನಾಡ ಸೂರ್ಯ ನ್ಯೂಸ್, ದೊಡ್ಡಬಳ್ಳಾಪುರ ಪ್ರೀತಿ–ಮದುವೆ ಎಂಬ ಮುಖವಾಡದ ಹಿಂದೆ ಹಣದ ಬೇಟೆ? ಪ್ರೀತಿ, ನಂಬಿಕೆ ಮತ್ತು ಮದುವೆ ಎಂಬ ಪವಿತ್ರ ಸಂಬಂಧಗಳನ್ನು ಅಸ್ತ್ರವಾಗಿ ಮಾಡಿಕೊಂಡು ಪುರುಷರನ್ನು ವಂಚಿಸಿದ ಗಂಭೀರ ಆರೋಪಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಹಿಳೆಯೊಬ್ಬರ ವಿರುದ್ಧ ಕೇಳಿಬಂದಿವೆ. ದೊಡ್ಡಬಳ್ಳಾಪುರ ತಾಲೂಕಿನ ಸುಧಾರಾಣಿ ಎಂಬ ಮಹಿಳೆಯ ವಿರುದ್ಧ ಇಬ್ಬರು ಗಂಡಂದಿರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ಇದೀಗ ಜಿಲ್ಲೆ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರೀತಿ–ಪ್ರೇಮ; ಮದುವೆ – ಆದರೆ ಉದ್ದೇಶ ಒಂದೇ? ಸುಧಾರಾಣಿ ಮದುವೆ ಎಂಬ ನೆಪದಲ್ಲಿ ಹಣವಿರುವ ಪುರುಷರನ್ನು ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿದ್ದಾಳೆ ಎಂಬ ಆರೋಪಗಳು ಗಂಭೀರ ಸ್ವರೂಪ ಪಡೆದಿವೆ. ಪ್ರೀತಿ–ಪ್ರೇಮದ ನಾಟಕವಾಡಿ ಮದುವೆಯಾಗುವುದು, ನಂತರ ವೈಯಕ್ತಿಕ ಸಮಸ್ಯೆಗಳು, ಚಿಕಿತ್ಸೆ, ಕುಟುಂಬದ ತುರ್ತು ಅಗತ್ಯಗಳನ್ನು ಮುಂದಿಟ್ಟು ಲಕ್ಷಾಂತರ ರೂಪಾಯಿ ಹಣ ಪಡೆದು ಸಂಪರ್ಕ ಕಡಿತ ಮಾಡುವುದು – ಇದೇ ಆಕೆಯ ಕಾರ್ಯಪದ್ಧತಿ ಎಂದು ಆರೋಪಿಸಲಾಗಿದೆ. ಮೊದಲ ಗಂಡ ಮತ್ತು ಮಕ್ಕಳನ್ನು ಬಿಟ್ಟು ಹೋದ ಸುಧಾರಾಣಿ?…

Read More

ಉಡುಪಿ:ತುಳುನಾಡ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲಾ ಘಟಕದ ಮಹತ್ವದ ಸಭೆಯು ದಿನಾಂಕ 01-02-2026 ರಂದು ಉಡುಪಿ ಜಿಲ್ಲಾ ಕಚೇರಿಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪುರವರ ಅದ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಸಂಘಟನೆಯ ಉಡುಪಿ ಜಿಲ್ಲೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಮಹಿಳಾ ಘಟಕದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನೂತನ ಸದಸ್ಯರಾಗಿ ಮಹೇಶ್ ಪೂಜಾರಿ ಕೊಳಲಗಿರಿ, ನಾಗೇಶ್ ಭಂಡಾರಿ ಹಾವಂಜೆ , ಸುಮಿತ್ರ ಮದ್ವನಗರ ಮತ್ತಿತರ ಪ್ರಮುಖರು ಸೇರ್ಪಡೆಗೊಂಡರು. ಸಭೆಯಲ್ಲಿ ತುಳುನಾಡದ ಭಾಷೆ, ಸಂಸ್ಕೃತಿ, ಜಾನಪದ ಪರಂಪರೆ ಹಾಗೂ ಜನಪರ ಸಮಸ್ಯೆಗಳ ಕುರಿತು ಸವಿಸ್ತಾರ ಚರ್ಚೆ ನಡೆಯಿತು. ಸಂಘಟನೆಯ ಬಲವರ್ಧನೆ, ಗ್ರಾಮ–ಗ್ರಾಮಗಳಲ್ಲಿ ಘಟಕಗಳ ರಚನೆ, ಯುವಕರ ಹಾಗೂ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಸಾಮಾಜಿಕ ಹೋರಾಟಗಳು ಹಾಗೂ ಕಾರ್ಯಕ್ರಮಗಳ ಕುರಿತು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಧ್ಯೇಯ–ಉದ್ದೇಶಗಳನ್ನು ಕಾರ್ಯಕರ್ತರಿಗೆ ವಿವರಿಸಲಾಯಿತು. ತುಳುನಾಡದ ಅಸ್ತಿತ್ವ, ಹಕ್ಕುಗಳು ಹಾಗೂ ಸಂಸ್ಕೃತಿಯ…

Read More

ತುಳುನಾಡ ಸೂರ್ಯ ಕ್ರೈಂ ನ್ಯೂಸ್ : ಸಮಾಜದಲ್ಲಿ ಶಿಕ್ಷಕ ಎಂಬ ಪದಕ್ಕೆ ಗೌರವ, ನಂಬಿಕೆ ಮತ್ತು ನೈತಿಕತೆ ಎಂಬ ಅರ್ಥಗಳು ಸಹಜವಾಗಿ ಅಂಟಿಕೊಂಡಿರುತ್ತವೆ. ಮಕ್ಕಳ ಭವಿಷ್ಯ ರೂಪಿಸುವವನು, ಮೌಲ್ಯಗಳನ್ನು ಕಲಿಸುವವನು ಎಂಬ ಭಾವನೆ ಜನಮನದಲ್ಲಿ ಗಟ್ಟಿಯಾಗಿರುತ್ತದೆ. ಆದರೆ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಆನೆಮಜಲು ಎಂಬ ಪುಟ್ಟ ಹಳ್ಳಿಯಿಂದ ಹೊರಟ ಒಬ್ಬ ಶಿಕ್ಷಕ, ಇದೇ ನಂಬಿಕೆಯನ್ನು ತನ್ನ ಅತಿ ಭೀಕರ ಅಪರಾಧಗಳಿಗೆ ಆಯುಧವನ್ನಾಗಿ ಮಾಡಿಕೊಂಡನು ಎಂಬುದು ನಮ್ಮ ಸಮಾಜದ ಪಾಲಿಗೆ ಅತ್ಯಂತ ಕಟುವಾದ ಸತ್ಯ. ಮೋಹನ್ ಕುಮಾರ್ – ವೃತ್ತಿಯಲ್ಲಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ. ಹೊರಗೆ ನೋಡಲು ಸಾಮಾನ್ಯ ವ್ಯಕ್ತಿ. ಆದರೆ ಆತನ ಒಳಗಿನ ವಿಕೃತ ಮನಸ್ಸು, ಇಡೀ ಕರ್ನಾಟಕವನ್ನೇ ಬೆಚ್ಚಿಬೀಳಿಸುವಂತಹ ಸರಣಿ ಕೊಲೆಗಳ ಮೂಲಕ ಹೊರಹೊಮ್ಮಿತು. ‘ಸೈನೈಡ್ ಮೋಹನ್’ ಎಂಬ ಹೆಸರು ಅಪರಾಧ ಲೋಕದಲ್ಲಿ ಮಾತ್ರವಲ್ಲ, ಮಾನವೀಯತೆಯ ಇತಿಹಾಸದಲ್ಲೇ ಒಂದು ಭಯಾನಕ ಅಧ್ಯಾಯವಾಗಿ ಉಳಿಯಿತು. ನಂಬಿಕೆಯೇ ಆಯುಧ, ಮೋಸವೇ ತಂತ್ರ ಮೋಹನ್ ಬಳಸಿಕೊಂಡ ಪ್ರಮುಖ ಅಸ್ತ್ರವೇ ನಂಬಿಕೆ.…

Read More

ಉಡುಪಿ: ಪೋಪ್ ಲಿಯೋ XIV ಅವರು ಉಡುಪಿ ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ರೆವ್. ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜ ಅವರನ್ನು ನೇಮಕ ಮಾಡಿದ್ದಾರೆ. ಈ ಕುರಿತು ಶನಿವಾರ, ಜನವರಿ 31, 2026ರಂದು ರೋಮ್‌ನಿಂದ ಮಧ್ಯಾಹ್ನ 12 ಗಂಟೆಗೆ (ಭಾರತೀಯ ಕಾಲಮಾನ ಸಂಜೆ 4.30ಕ್ಕೆ) ಅಧಿಕೃತ ಘೋಷಣೆ ಹೊರಬಿದ್ದಿದೆ. ಇದೇ ಸಂದರ್ಭದಲ್ಲಿ ಉಡುಪಿ ಕಲ್ಯಾಣ‌ಪುರದ ಅವರ್ ಲೇಡಿ ಆಫ್ ಮಿಲಾಗ್ರಿಸ್ ಕತೆಡ್ರಲ್‌ನಲ್ಲಿಯೂ ಈ ಘೋಷಣೆ ಪ್ರಕಟಿಸಲಾಯಿತು. ನೇಮಕಕ್ಕೂ ಮೊದಲು ಅವರು ಶಿರ್ವದ ಅವರ್ ಲೇಡಿ ಆಫ್ ಹೆಲ್ತ್ ಚರ್ಚ್‌ನ ಪಾರಿಷ್ ಪ್ರೀಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ರೆವ್. ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜ ಅವರು ಆಗಸ್ಟ್ 19, 1962ರಂದು ಉಡುಪಿ ಜಿಲ್ಲೆಯ ಉಚ್ಚಿಲ (ಯರ್ಮಲ್)ದಲ್ಲಿ ಲಾರೆನ್ಸ್ ಡಿ’ಸೋಜ ಮತ್ತು ಸೆಸಿಲಿಯಾ ಡಿ’ಸೋಜ ದಂಪತಿಗಳಿಗೆ ಜನಿಸಿದರು. ಆಳವಾದ ಕ್ರೈಸ್ತ ನಂಬಿಕೆ ಮತ್ತು ಮೌಲ್ಯಗಳಿಂದ ಬೆಳೆದ ಕುಟುಂಬದಲ್ಲಿ ಎಂಟು ಸಹೋದರ-ಸಹೋದರಿಯರಲ್ಲಿ ಅವರು ಒಬ್ಬರು. ಅವರ ಹಿರಿಯ ಸಹೋದರಿಯರಾದ ವೆರೋನಿಕಾ ಡಿ’ಸೋಜ ಮತ್ತು ಕ್ರಿಸ್ಟಿನ್ ಡಿ’ಸೋಜ…

Read More

ತುಮಕೂರು :ಕಾನೂನು ಕಾಪಾಡಬೇಕಾದವರೇ ಲಂಚದ ಜಾಲಕ್ಕೆ ಸಿಲುಕಿರುವ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ್ ಕುಮಾರ್ ಅವರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಪ್ರಕರಣವೊಂದರಲ್ಲಿ ವಶಪಡಿಸಿಕೊಂಡಿದ್ದ ಕಾರನ್ನು ಬಿಡುಗಡೆ ಮಾಡುವುದಾಗಿ ಹೇಳಿ, ಪಿಎಸ್‌ಐ ಚೇತನ್ ಕುಮಾರ್ ಅವರು ಒಟ್ಟು 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದರ ಮೊದಲ ಹಂತವಾಗಿ 40 ಸಾವಿರ ರೂ. ಲಂಚ ಪಡೆಯುವ ವೇಳೆ, ಲೋಕಾಯುಕ್ತ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲೇ ದಾಳಿ ನಡೆಸಿ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಲಂಚ ಸ್ವೀಕರಿಸುತ್ತಿದ್ದ ಕ್ಷಣದಲ್ಲೇ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ತಂಡ, ಪಿಎಸ್‌ಐ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಕುರಿತು ವಿಸ್ತೃತ ತನಿಖೆ ಮುಂದುವರಿದಿದೆ. ➡️ ಲಂಚಮುಕ್ತ ಆಡಳಿತದ ಮಾತುಗಳ ನಡುವೆಯೇ, ಪೊಲೀಸ್ ಇಲಾಖೆಯೊಳಗಿನ ಭ್ರಷ್ಟಾಚಾರ ಮತ್ತೊಮ್ಮೆ ಬಹಿರಂಗವಾಗಿದೆ.

Read More

ಗಗನಚುಂಬಿ ಕಟ್ಟಡಗಳು, ಐಷಾರಾಮಿ ಹೋಟೆಲ್‌ಗಳು, ರೆಸಾರ್ಟ್‌ಗಳು ಹಾಗೂ ರಿಯಲ್‌ ಎಸ್ಟೇಟ್‌ ಕ್ಷೇತ್ರದ ಮೂಲಕ ತಮ್ಮದೇ ಆದ ಸಾಮ್ರಾಜ್ಯ ನಿರ್ಮಿಸಿದ್ದ ಕಾನ್ಫಿಡೆಂಟ್‌ ಗ್ರೂಪ್‌ ಸಂಸ್ಥೆಯ ಚೇರ್‌ಮೆನ್‌ ಸಿಜೆ ರಾಯ್‌ ಅವರು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಡೀ ಉದ್ಯಮ ವಲಯವನ್ನು ಬೆಚ್ಚಿಬೀಳಿಸಿದೆ. ಬೆಂಗಳೂರು ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಮಹತ್ವದ ವಾಣಿಜ್ಯ ಮತ್ತು ವಸತಿ ಯೋಜನೆಗಳನ್ನು ಜಾರಿಗೆ ತಂದಿದ್ದ ಸಿಜೆ ರಾಯ್‌, ಕಠಿಣ ಪರಿಶ್ರಮ, ದೃಢ ಸಂಕಲ್ಪ ಮತ್ತು ಉದ್ಯಮಶೀಲತೆಯ ಮೂಲಕ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸಂಸ್ಥೆಯನ್ನು ಕಟ್ಟಿಕೊಂಡಿದ್ದರು. ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಮಾತ್ರವಲ್ಲದೆ ಹೋಟೆಲ್‌, ಆತಿಥ್ಯ ಹಾಗೂ ಮನರಂಜನಾ ಕ್ಷೇತ್ರಗಳಲ್ಲಿಯೂ ಅವರು ಪ್ರಮುಖ ಹೆಸರು ಆಗಿದ್ದರು. ಜನಪ್ರಿಯ ಬಿಗ್‌ ಬಾಸ್‌ ಕಾರ್ಯಕ್ರಮ ಸೇರಿದಂತೆ ಹಲವಾರು ಮನರಂಜನಾ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ನೀಡಿ ಸಾರ್ವಜನಿಕರ ಗಮನ ಸೆಳೆದಿದ್ದರು. ಪ್ರಾಥಮಿಕ ಮಾಹಿತಿಯಂತೆ, ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಅವರು ತೀವ್ರ ಮನಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಕೆಲವು ಸಮಯದಿಂದ…

Read More

ಕೊಡಗು :ಮೂರ್ನಾಡುಆಪ್ತಮಿತ್ರ ಬಳಗ ಮೂರ್ನಾಡು ಇವರ ಸೇವಾರ್ಥವಾಗಿ ನಡೆಯುವ “ಮೂರ್ನಾಡು ಯಕ್ಷೋತ್ಸವ” ಕಾರ್ಯಕ್ರಮವು ಫೆಬ್ರವರಿ 1ರಂದು ಆದಿತ್ಯವಾರ ಸಂಭ್ರಮದಿಂದ ನಡೆಯಲಿದೆ. ಯಕ್ಷಗಾನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಜನಸಾಮಾನ್ಯರಿಗೆ ಇನ್ನಷ್ಟು ಸಮೀಪಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವು ಸಂಜೆ 6.00 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಮೂರ್ನಾಡುವಿನಲ್ಲಿ ನಡೆಯಲಿದ್ದು ಯಕ್ಷಗಾನ ಪ್ರೇಮಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ಯಕ್ಷೋತ್ಸವದ ಮುಖ್ಯ ಆಕರ್ಷಣೆಯಾಗಿ ಶ್ರೀ ಹನುಮಗಿರಿ ಮೇಳದವರಿಂದ “ಸಂಪೂರ್ಣ ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಪ್ರದರ್ಶನ ನಡೆಯಲಿದೆ. ಧಾರ್ಮಿಕ, ಪೌರಾಣಿಕ ಮಹತ್ವ ಹೊಂದಿರುವ ಈ ಪ್ರಸಂಗವು ಭಕ್ತರಿಗೆ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಅನುಭವವನ್ನು ನೀಡಲಿದೆ. ಕಾರ್ಯಕ್ರಮದಲ್ಲಿ ತಮಗೆಲ್ಲರಿಗೂ ಆತಿಥ್ಯವಿರಲಿದೆ. ಯಕ್ಷಗಾನ ಕಲಾವಿದರ ನೈಪುಣ್ಯ, ವೇಷಭೂಷಣ, ಸಂಗೀತ ಹಾಗೂ ಸಂಭಾಷಣೆಯ ಸೊಗಡಿನಿಂದ ಕಾರ್ಯಕ್ರಮವು ರಾತ್ರಿಯಿಡೀ ರಂಗೇರಲಿದೆ. ಈ ಹಿನ್ನೆಲೆಯಲ್ಲಿ ಆಪ್ತಮಿತ್ರ ಬಳಗ ಮೂರ್ನಾಡು ವತಿಯಿಂದ ಯಕ್ಷಗಾನ ಅಭಿಮಾನಿಗಳು, ಕಲಾಸಕ್ತರು, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ…

Read More

ತಲಪಾಡಿ : ಭ್ಯಾರತಿ ಕವಿ, ಸಂಸ್ಕೃತಜ್ಞ ಹಾಗೂ ನಿವೃತ್ತ ಪ್ರಾಂಶುಪಾಲರಾದ ಶ್ರೀ ಸುಬ್ಬ ಪಕ್ಕಳ ಪಂಜಾಳ (80) ಅವರು ಇಂದು ಮುಂಜಾನೆ ತಮ್ಮ ಸ್ವಗೃಹದಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ನಿಧನರಾದರು.ತಲಪಾಡಿಯ ಕಾರಂತರ ಪಾಲು ಮನೆಯವರಾಗಿ ಪ್ರಸಿದ್ಧರಾಗಿದ್ದ ಶ್ರೀ ಪಂಜಾಳ ಅವರು, ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ರ್ಯಾಂಕ್ ವಿದ್ಯಾರ್ಥಿಯಾಗಿದ್ದು, ನಂತರ ಶಿಕ್ಷಕರಾಗಿ ಹಾಗೂ ಪ್ರಾಂಶುಪಾಲರಾಗಿ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿದ್ದರು.1976 ರಿಂದ 1981ರವರೆಗೆ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ (ಈಗಿನ ಪಿ.ಎ. ಕಾಲೇಜು) ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವರು, ಬಳಿಕ ಬೆಂಗಳೂರು ಸರ್ಕಾರಿ ಕಾಲೇಜಿನಲ್ಲಿ ಮುಖ್ಯ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದರು.ತಲಪಾಡಿ–ದೇವಿಪುರ ಪರಿಸರದಲ್ಲಿ ಹಿರಿಯ ಶಿಕ್ಷಕರಾಗಿ ಗುರುತಿಸಿಕೊಂಡಿದ್ದ ಅವರು, ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಅವರ ಜೀವನಕ್ಕೆ ದಾರಿ ತೋರಿದವರು. ನಿವೃತ್ತಿಯ ನಂತರವೂ ವಿವಿಧ ಶಾಲಾ-ಕಾಲೇಜು ಹಾಗೂ ಸಂಘ-ಸಂಸ್ಥೆಗಳೊಂದಿಗೆ ತಲೆ ಸಂಯೋಜಕರಾಗಿ ಕಾರ್ಯನಿರ್ವಹಿಸಿ, ಉಚಿತ ಶಿಕ್ಷಣ ಹಾಗೂ ಮಾರ್ಗದರ್ಶನ ನೀಡುತ್ತಿದ್ದರು.ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅನೇಕ ಬಂಧು-ಮಿತ್ರರನ್ನು ಅಗಲಿದ್ದಾರೆ.ಮಾನವೀಯ…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾಗಿರುವ ಮಂಗಳೂರು ದಸರಾ ಹಬ್ಬದ ವೈಭವವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ, 2026–27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮಂಗಳೂರು ದಸರಾ ಆಚರಣೆಗೆ ರೂ.5 ಕೋಟಿ ವಿಶೇಷ ಅನುದಾನ ಘೋಷಿಸಬೇಕೆಂದು ಮಂಗಳೂರು ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಹತ್ವದ ಮನವಿ ಸಲ್ಲಿಸಿದರು. ಮೈಸೂರು ದಸರಾ ಬಳಿಕ ರಾಜ್ಯದಲ್ಲೇ ಅತೀ ಹೆಚ್ಚು ಜನಸಂಚಾರವಾಗುವ ಹಬ್ಬಗಳ ಪೈಕಿ ಮಂಗಳೂರು ದಸರಾ ಪ್ರಮುಖ ಸ್ಥಾನ ಹೊಂದಿದೆ. ಪ್ರತಿವರ್ಷ ನವರಾತ್ರಿ ಸಂದರ್ಭದಲ್ಲಿ ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರಸಿದ್ಧ ದೇವಾಲಯಗಳು ಮತ್ತು ತೀರ್ಥಕ್ಷೇತ್ರಗಳು ದೇಶ-ವಿದೇಶಗಳಿಂದ ಆಗಮಿಸುವ ಲಕ್ಷಾಂತರ ಭಕ್ತರಿಂದ ಕಿಕ್ಕಿರಿದುಕೊಳ್ಳುತ್ತವೆ. ಈ ಹಬ್ಬವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲದೆ, ಜಿಲ್ಲೆಯ ಸಾಂಸ್ಕೃತಿಕ ಗುರುತು ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಸಹ ಮಹತ್ವದ ಕೊಡುಗೆ ನೀಡುತ್ತಿದೆ. ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ರೂ.5 ಕೋಟಿ ಅನುದಾನ ಘೋಷಿಸಿದಲ್ಲಿ, ಮಂಗಳೂರು ದಸರಾವನ್ನು ಇನ್ನಷ್ಟು ವಿಜೃಂಭಣೆಯಿಂದ, ಸಂಪ್ರದಾಯಬದ್ಧವಾಗಿ ಹಾಗೂ…

Read More