ಮಂಗಳೂರು ; ದಕ್ಷಿಣ ಕನ್ನಡ ಫ್ಲವರ್ ಡೆಕೋರೇಟರ್ಸ್ ಮಾಲಕರ ಸಂಘ, ಮಂಗಳೂರು ಇದರ ವತಿಯಿಂದ ನಡೆದ ಮೂರನೇ ವರ್ಷದ ಪುರ್ಪದ ಗೆಲ್ಮೆನ ಆಟಿನ ಕಮ್ಮೆನ ಕಾರ್ಯಕ್ರಮ ಸ್ಕೇಟ್ ಸಿಟಿ ಹೊಯ್ಗೆಬೈಲು ಅಶೋಕನಗರದಲ್ಲಿ ವಿಜೃಂಭಣೆಯಿಂದ ನಡೆಯಿತು

ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಮಾತನಾಡಿದ ಕೆ.ಕೆ ಪೆಜಾವರ ತುಳುನಾಡಿನಲ್ಲಿ ಆಟಿ ತಿಂಗಳಿನಲ್ಲಿ ಆಚರಿಸಲಾಗುವ ಒಂದು ದಿನವೆಂದರೆ ಆಟಿಡೊಂಜಿ ದಿನ. ಈ ದಿನವನ್ನು ಆಟಿ ಅಮವಾಸ್ಯೆಯಂದು ಆಚರಿಸುತ್ತಾರೆ. ಈ ದಿನ ತುಳುನಾಡಿನ ಜನರು “ಪಾಲೆದ ಕಷಾಯ” (ಹಾಲೆ ಮರದ ತೊಗಟೆಯಿಂದ ತಯಾರಿಸಿದ ಕಷಾಯ) ಕುಡಿಯುವ ಸಂಪ್ರದಾಯವಿದೆ. ಈ ಕಷಾಯವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಆಟಿ ತಿಂಗಳು ತುಳುನಾಡಿನಲ್ಲಿ ಕಷ್ಟದ ತಿಂಗಳೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಮಳೆ ಹೆಚ್ಚಾಗಿರುತ್ತದೆ ಮತ್ತು ಕೃಷಿ ಚಟುವಟಿಕೆಗಳು ಸ್ಥಗಿತಗೊಳ್ಳುತ್ತವೆ. ಹಾಗಾಗಿ, ಈ ಸಮಯದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಆಟಿಡೊಂಜಿ ದಿನದಂದು ಆಚರಿಸಲಾಗುವ ಈ ಕಷಾಯ ಸೇವನೆಯು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಆಟಿ ಅಮಾವಾಸ್ಯೆಯಂದು ಆಚರಿಸಲಾಗುವ ಆಟಿಡೊಂಜಿ ದಿನದಲ್ಲಿ ಪಾಲೆದ ಕಷಾಯ ಸೇವನೆಯ ಜೊತೆಗೆ, ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಾದ ಆಟಿ ಕಳೆಂಜ, ಚನ್ನೆಮಣೆ ಗೊಬ್ಬು ಮುಂತಾದವುಗಳನ್ನು ಸಹ ಆಚರಿಸಲಾಗುತ್ತದೆ. ತುಳುನಾಡಿನ ಆಟಿ ತಿಂಗಳ ಆಚರಣೆಗಳು ಮತ್ತು ನಂಬಿಕೆಗಳು ಇಂದಿಗೂ ತುಳುನಾಡಿನ ಜನಜೀವನದಲ್ಲಿ ಹಾಸುಹೊಕ್ಕಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೇದವ್ಯಾಸ ಕಾಮತ್, ಪ್ರಸನ್ನ ಉಡುಪಿ ಫ್ಲವರ್ ಡೆಕೋರೇಷನ್ ಮಾಲಕರ ಸಂಘ ಅಧ್ಯಕ್ಷರು,ಪದ್ಮರಾಜ್ ಪದ್ಮ ಪ್ರಸಾದ್ ಫೋಟೋಗ್ರಾಫಿ ಡಿಸ್ಟ್ರಿಕ್ಟ್ ಅಧ್ಯಕ್ಷರು, ಸಾಮಿಯಾನ ಡಿಸ್ಟ್ರಿಕ್ಟ್ ಕಾರ್ಯದರ್ಶಿ ನಿಷ್ಮಿತ್ ಪೂಜಾರಿ ಕಾವೂರು,ಕ್ಯಾಟ್ರಿಂಗ್ ಅಧ್ಯಕ್ಷರು ಅಬ್ದುಲ್ ರಶೀದ್,ಎಲ್ಇಡಿ ವಾಲ್ ಡಿಸ್ಟ್ರಿಕ್ಟ್ ಅಧ್ಯಕ್ಷರು ಲೀಲಾಕ್ಷ ಕರ್ಕೇರ ,ಸಂಘದ ನಿಕಟ ಪೂರ್ವ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ,ಸಂಘದ ಅಧ್ಯಕ್ಷರು ತುಷಾರ್ ಸುರೇಶ್,ಸಂಘದ ಕಾರ್ಯದರ್ಶಿ ಜಯೇಶ್ ಬರೆಟೊ,ಸಂಘದ ಖಜಾಂಜಿ ಸಂಜಯ್ ನಾಯಕ್,ಕಾರ್ಯಕ್ರಮದ ಸಂಯೋಜಕರು ಸುಲಕ್ಷಣ್ ಬಿ ರೈ,ಪೂರ್ಣಿಮಾ ಎಂ,ಬಾಲಕೃಷ ಕದ್ರಿ,ಆವಿಲ್ ಮೇನೆಜಸ್ ಬಂಟ್ವಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ತುಳುನಾಡಿನ ಕಂಬಳದಲ್ಲಿ ಹಲವು ಪ್ರಶಸ್ತಿಯನ್ನು ಪಡೆದ
ಹೆಮ್ಮೆಯ ಕೋಣ ದೂಜ ಗೆ ಸನ್ಮಾನಿಸಲಾಯಿತು ಜೊತೆಯಲ್ಲಿ
ಪದವು ಕಾನಡ್ಕ ಮಾಲಕರು ಡೊಲ್ಪಿ ಡಿಸೋಜಾ , ಡೆರಿಕ್ ಡಿಸೋಜಾರವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮೂಲಬಿಂಬ ಆಟಿ ಕಳೆಂಜೆಯನ್ನು ಡೋಣಿ ಮೂಲಕ ಕರೆತರಲಾಯಿತು.


ಈ ವಿಜೃಂಭಣೆಯ ಆಟಿನ ಕಮ್ಮೆನ ಕಾರ್ಯಕ್ರಮದಲ್ಲಿ 126 ಬಗೆಯ ತಿಂಡಿತಿನಸುಗಳು ಹಾಗೂ ತುಳುನಾಡಿನ ವಿಶಿಷ್ಟ ಶೈಲಿಯ ಪಾನಿಯಗಳಿದ್ದವು. ಜೊತೆಗೆ ಹಲವು ಬಗೆಯ ಖಾದ್ಯಗಳ ಜೊತೆ ಮಧ್ಯಾಹ್ನದ ವಿಶಿಷ್ಠವಾದ ಭೋಜನದ ಬಳಿಕ ಹಲವು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ತಳುನಾಡಿನ ಶೈಲಿ ಹಾಗೂ ಪರಂಪರೆಯನ್ನು ಚಿತ್ರಿಸಲಾಗಿತ್ತು.
ತುಳುನಾಡಿನ ತಿಂಡಿ-ತಿನಿಸುಗಳ ಪ್ರದರ್ಶನವು ಮಾವಿನ ಹಣ್ಣಿನ ಪಾಯಸ, ಹಲಸಿನ ಹಣ್ಣಿನ ಕಡುಬು, ಮುಳ್ಕ, ಬಾಳೆ ಹೂವಿನ ಚಟ್ನಿ , ಕೆಸುವಿನ ಎಲೆಯ ಪತ್ರೊಡೆ ಮತ್ತು ಚಟ್ನಿ, ಚೊಗಟೆ ಸೊಪ್ಪಿನ ದೋಸೆ, ಮುರುಗನ ಹುಳಿ ಸಾರು, ಕಯಾಮೆ ಅಕ್ಕಿ ಅನ್ನ ಹಾಗೂ ಮೆಂತ್ಯ ಸೊಪ್ಪಿನ ಚಿತ್ರಾನ್ನ , ಗಂಜಿ ಮುಂತಾದವುಗಳನ್ನು ಒಳಗೊಂಡಿತ್ತು.ಇದೇ ಸಂದರ್ಭದಲ್ಲಿ ಕಲಿ, ವೈನ್ ಗಳಂತಹ ಸುರಪಾನಗಳಿದ್ದವು.
ಕಾರ್ಯಕ್ರಮವನ್ನು ಸಾಹಿಲ್ ರೈ ಹಾಗೂ ಸೌಜನ್ಯ ಹೆಗ್ಡೆ ನಿರೂಪಿಸಿದರು.
