ಚಿತ್ರದುರ್ಗ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿ ಮಾಡಿಸಿ, ಬಳಿಕ ಗರ್ಭಪಾತ ಮಾಡಿಸಿದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕನನ್ನು ತಳಕು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಯನ್ನು ಡಿಓ ರಾಜಣ್ಣ ಎಂದು ಗುರುತಿಸಲಾಗಿದ್ದು, ಆತ ಹತ್ತನೇ ತರಗತಿಯ ವಿದ್ಯಾರ್ಥಿನಿಯನ್ನು ದುರುಪಯೋಗಪಡಿಸಿಕೊಂಡು ಗರ್ಭಿಣಿ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಪ್ರಕರಣ ಬಯಲಾಗುವ ಭೀತಿಯಿಂದ ಲಕ್ಷ್ಮಿ ಶ್ರೀನಿವಾಸ್ ನರ್ಸಿಂಗ್ ಹೋಂನಲ್ಲಿ ಗರ್ಭಪಾತ ಮಾಡಿಸಿದ ಸಂಗತಿ ತನಿಖೆಯಲ್ಲಿ ಬಹಿರಂಗವಾಗಿದೆ.
ಆರೋಪಿ ಬಂಧನವಾಗುತ್ತಿದ್ದಂತೆ ಗರ್ಭಪಾತ ನಡೆಸಿದರೆಂದು ಆರೋಪಿಸಲಾಗಿರುವ ವೈದ್ಯೆ ಡಾ. ಶಂಕರ್ ಲಕ್ಷ್ಮಿ ನಾಪತ್ತೆಯಾಗಿದ್ದು, ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇವರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.
ತಳಕು ಪೊಲೀಸ್ ಠಾಣೆ ಪಿಎಸ್ಐ ಶಿವಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಈ ಸಂಬಂಧ ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
Trending
- ಅಪ್ರಾಪ್ತ ವಿದ್ಯಾರ್ಥಿನಿ ಗರ್ಭಪಾತ ಪ್ರಕರಣ: ಶಿಕ್ಷಕ ಬಂಧನ
- ಹೆಬ್ರಿ: ರಸ್ತೆ ದಾಟುವ ವೇಳೆ ಮಿನಿ ಗೂಡ್ಸ್ ಡಿಕ್ಕಿ – ವಿದ್ಯಾರ್ಥಿನಿ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ ಸ್ಥಳೀಯರಿಂದ ಪ್ರತಿಭಟನೆ
- ಮಂಗಳೂರು: ಪ್ರೀತಿಯಲ್ಲಿ ಮನಸ್ತಾಪ – 22ರ ಯುವಕ ಆತ್ಮಹತ್ಯೆ, ಯುವತಿಯ ವಿರುದ್ಧ ಆರೋಪ
- ಉಡುಪಿ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಅಗ್ರ ಸಾಧನೆಗೆ ತುರವೇ ಉಡುಪಿ ಜಿಲ್ಲಾ ಅಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ಅಭಿನಂದನೆ
- ಮಂಗಳೂರು :ಏಪ್ರಿಲ್ 12ರಂದು ಬಂಟರ ಯಾನೆ ನಾಡವರ ಮಾತೃ ಸಂಘದ ಮಹತ್ವದ ಅಧಿವೇಶನ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮ
- ಬೆಂಗಳೂರು–ಮೈಸೂರು ಮಾರ್ಗಕ್ಕೆ ಇನ್ನಷ್ಟು ವೇಗ ಮತ್ತು ಸುಧಾರಣೆ : ಕುಮಾರಸ್ವಾಮಿ ಮೈಸೂರು ವಿಭಾಗದಲ್ಲಿ ಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳಲಿದೆ: ಸೋಮಣ್ಣ
- ಸರ್ಕಾರಿ ಕಚೇರಿಗಳಲ್ಲಿ ನಿಯಮ ಪಾಲನೆ ಕಡ್ಡಾಯ: ಲೋಕಾಯುಕ್ತ ಡಿವೈಎಸ್ಪಿ ದಿನಕರ ಶೆಟ್ಟಿ ಎಚ್ಚರಿಕೆ
- ನೆತ್ತಿಲ ಕೋಟೆಕಾರ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತಿಭಾವದಿಂದ ನೆರವೇರಿದ ಧಾರ್ಮಿಕ ಕಾರ್ಯಕ್ರಮ

