ಮಂಗಳೂರು: ತುಳು ಭಾಷೆ, ಸಂಸ್ಕೃತಿ, ಸಂಪ್ರದಾಯ ಅಭಿವೃದ್ಧಿ ನೆಲೆಯಲ್ಲಿ ದೇಶದಾದ್ಯಂತ ತುಳುವರು ಸಂಘ ಸಂಸ್ಥೆಗಳು ನಿರಂತರ ಕಾರ್ಯಕ್ರಮ ಸಮಾರಂಭವನ್ನು ಹಮ್ಮಿಕೊಂಡು ಕೆಲಸ ನಿರ್ವಹಿಸುತ್ತಿರುವುದು ಸಂತಸದ ವಿಷಯ. ಇದಕ್ಕೆ ಪೂರಕವಾಗಿ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ತುಳು ಭಾಷೆ ಅಭಿವೃದ್ಧಿಗೆ ಅಡ್ಡಿಪಡಿಸದೆ ಪ್ರೋತ್ಸಾಹಿಸಬೇಕಾಗಿದೆ. ಇತ್ತೀಚಿಗೆ ಮಂಗಳೂರಿನ ತುಳು ಅಧ್ಯಯನ ಕೇಂದ್ರವನ್ನು ಕೋಣಾಜೆಯ ಮಂಗಳಗAಗೋತ್ರಿಗೆ ಸ್ಥಳಾಂತರಿಸುವ ಬಗ್ಗೆ ಮಾಹಿತಿ ಇದೆ. ಈ ನಿರ್ಧಾರವನ್ನು ಹಿಂತೆಗೆಯಲು ಒಕ್ಕೂಟ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ದೇಶವಿದೇಶದ ತುಳುವರು ಮನವಿ ಸಲ್ಲಿಸಲು ಮಹಾಸಭೆಯಲ್ಲಿ ಒಕ್ಕೊರೊಳಿನ ನಿರ್ಧಾರ ಮಂಡಿಸಲಾಗಿದೆ ಎಂದು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ತಿಳಿಸಿದ್ದಾರೆ. ಅವರು ಇತ್ತೀಚೆಗೆ ಕಾವೂರು ಮುಗ್ರೋಡಿ ಎನ್ಕ್ಲೇವ್ನ ಒಕ್ಕೂಟದ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಹಾಸಭೆಯಲ್ಲಿ ಭಾಗವಹಿಸಿದ ಎಲ್ಲಾ ದೇಶವಿದೇಶದ ಪ್ರತಿನಿಧಿಗಳು ತುಳುವಿಗೆ ಸ್ಥಾನಮಾನ ಸಂಸ್ಕೃತಿ, ಸಂಪ್ರದಾಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ 25-26ನೇ ಸಾಲಿನಲ್ಲಿ ಹಮ್ಮಿಕೊಳ್ಳಬಹುದಾದ ತುಳು ಸಂಬAಧಿ ಕಾರ್ಯಕ್ರಮಗಳ ರೂಪುರೇಖೆ ತಯಾರಿಸಿ ನಿರ್ಣಯ ಕೈಗೊಳ್ಳಬೇಕಾಗಿದೆ. ಒಕ್ಕೂಟ ಕಳೆದ 30 ವರ್ಷಗಳಲ್ಲಿ ದೇಶವಿದೇಶಗಳಲ್ಲಿ ತುಳು ಸಮ್ಮೇಳನ ಸಮಾರಂಭಗಳನ್ನು ನಡೆಸಿ ತುಳು ಅಭಿವೃದ್ಧಿಯಲ್ಲಿ ತನ್ನದೇ ಆದ ಕೊಡುಗೆ ನೀಡಿದೆ.
ಉಳ್ಳಾಲದ ನರಿಂಗಾನದಲ್ಲಿ ತುಳು ಗ್ರಾಮ ಚಿಂತನೆ: ಅಖಿಲ ಭಾರತ ತುಳು ಒಕ್ಕೂಟಕ್ಕೆ ಉಳ್ಳಾಲದ ನರಿಂಗಾನದಲ್ಲಿ ತುಳು ಗ್ರಾಮ ನಿರ್ಮಿಸುವರೇ ಒಂದು ಎಕರೆ ಜಾಗ ಕಾದಿರಿಸಲಾಗಿದ್ದು, ಶೀಘ್ರದಲ್ಲೇ ಇನ್ನಿತರ ಆದೇಶಗಳು ದೊರಕಲಿದ್ದು, ಇಲ್ಲಿ ತುಳುಗ್ರಾಮ ನಿರ್ಮಿಸುವರೇ ಸರ್ವ ತುಳುವರ ಚಿಂತನೆ, ಮಾರ್ಗದರ್ಶನ ಪಡೆಯುವುದಾಗಿ ಎ.ಸಿ. ಭಂಡಾರಿ ತಿಳಿಸಿದ್ದಾರೆ ಎಂದು ಒಕ್ಕೂಟದ ಮಾಧ್ಯಮ ವಕ್ತಾರ ಮುಲ್ಕಿ ಕರುಣಾಕರ ಶೆಟ್ಟಿ ತಿಳಿಸಿದ್ದಾರೆ.
ವೇದಿಕೆಯಲ್ಲಿ ಉಪಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಕೋಶಾಧಿಕಾರಿ ವಿಜಯಲಕ್ಷಿ ಬಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಗಣೇಶ್ ಮಲ್ಲಿ ಎಲ್ಲೆದಡಿ ಉಪಸ್ಥಿತರಿದ್ದರು. ಮಹಾಸಭೆಯಲ್ಲಿ ದೇಶ ವಿದೇಶದ ಪ್ರತಿನಿಧಿಗಳು ಭಾಗವಹಿಸಿದ್ದು, ಪ್ರಧಾನ ಕಾರ್ಯದರ್ಶಿ ಪಿ..ಎ. ಪೂಜಾರಿ ವರದಿ ಮಂಡಿಸಿದರು. ಜೊತೆಕಾರ್ಯದರ್ಶಿ ಶ್ರೀಮತಿ ಶಮೀನ ಆಳ್ವ ಧನ್ಯವಾದ ಗೆದ್ದರು.
(ಮುಲ್ಕಿ ಕರುಣಾಕರ ಶೆಟ್ಟಿ)
9880425265




