ಬೆಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ತುಳು ಭಾಷಾ ಕಲಿಕೆಯ ಎರಡು ಪುಸ್ತಕಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್.ತಂಗಡಗಿ ಅವರು ಬಿಡುಗಡೆ ಮಾಡಿದರು.
ಇಂಗ್ಲೀಷ್ ಭಾಷಿಗರಿಗಾಗಿ ಕೆ.ಟಿ.ಗಟ್ಟಿ ಅವರ ‘ಲರ್ನ್ ತುಳು ನ್ಯಾಚುರಲಿ’ ಕೃತಿ ಹಾಗೂ ಕನ್ನಡ ಭಾಷಿಗರಿಗಾಗಿ ಡಾ.ಯು.ಪಿ.ಉಪಾಧ್ಯಾಯರ ‘ತುಳು ಕೈಪಿಡಿ’ ಕೃತಿಗಳ ಪರಿಷ್ಕೃತ ಮುದ್ರಣವನ್ನು ತುಳು ಅಕಾಡೆಮಿ ಹೊರತಂದಿದೆ.
ತುಳು ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆಯಾದ ಹಿನ್ನೆಲೆಯಲ್ಲಿ ತುಳು ಕಲಿಕೆಯ ಪುಸ್ತಕಗಳ ಬಗ್ಗೆ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಈ ಕೃತಿಗಳನ್ನು ಪ್ರಕಟಿಸಿರುವ ಬಗ್ಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಸಚಿವರಿಗೆ ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ನಡೆದ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾಜಿ ಸಚಿವೆ ಡಾ. ಜಯಮಾಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಮಂಜುಶ್ರೀ ಎನ್, ಇಲಾಖೆಯ ನಿರ್ದೇಶಕಿ ಡಾ.ಕೆ.ಎಂ ವಸುಂಧರ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್ , ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಭಾಗವಹಿಸಿದ್ದರು.
Trending
- ತುಳು ಭಾಷಾ ಕಲಿಕಾ ಪುಸ್ತಕ ಬಿಡುಗಡೆ
- ಉಡುಪಿ ಜಿಲ್ಲೆಯಲ್ಲಿ ಉದ್ಯಮಿಗಳಿಗೆ ಬೆದರಿಕೆ ಕರೆ! ಹೆಮಂತ್ ಪೂಜಾರಿ ಹೆಸರಿನಲ್ಲಿ ₹5 ಕೋಟಿ ಸುಲಿಗೆಗೆ ಬೇಡಿಕೆ
- ಎಲ್ಲರ ಪ್ರೀತಿ, ಆಶೀರ್ವಾದದಿಂದ ಮತ್ತೆ ನಿಮ್ಮೊಂದಿಗೆ ಬೆರೆಯುವಂತಾಗಿದೆ: ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್
- ವೈದ್ಯರ ಕ್ಲಿನಿಕ್ಗೆ ಬೆಂಕಿ ಹಚ್ಚಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮಕ್ಕೆ ಯೋಗಿಶ್ ಶೆಟ್ಟಿ ಜಪ್ಪು ಆಗ್ರಹ
- ಗ್ರಾಹಕರ ಹಕ್ಕುಗಳ ರಕ್ಷಣೆಗೆ ರಾಜ್ಯ ಸರ್ಕಾರ ವಿಶೇಷ ಆದ್ಯತೆ ನೀಡಲಿ: ಯೋಗಿಶ್ ಶೆಟ್ಟಿ ಜಪ್ಪು ಆಗ್ರಹ ಹಾಲ್ಮಾರ್ಕಿಂಗ್, ಗುಣಮಟ್ಟದ ಉತ್ಪನ್ನಗಳ ಮಾರಾಟ ಮತ್ತು ಗ್ರಾಹಕ ಜಾಗೃತಿಗೆ ಒಂಬತ್ತು ಪ್ರಮುಖ ಬೇಡಿಕೆಗಳೊಂದಿಗೆ ಮುಖ್ಯಮಂತ್ರಿಗಳಿಗೆ ಮನವಿ
- ಕರ್ನಾಟಕದ ನೂತನ ರಾಜ್ಯಪಾಲೆಯಾಗಿ ಡಾ. ಸುಧಾ ಯಾದವ್ ನೇಮಕ ಮಾಜಿ ಸಂಸದೆ, ಶಿಕ್ಷಣ ತಜ್ಞೆ ಡಾ. ಸುಧಾ ಯಾದವ್ಗೆ ಮಹತ್ವದ ಜವಾಬ್ದಾರಿ; ಕರ್ನಾಟಕದ ಎರಡನೇ ಮಹಿಳಾ ರಾಜ್ಯಪಾಲೆ
- ನಮ್ಮ ಕರ್ನಾಟಕ ಸೇನೆಯ ಸುಜಯ್ ಪೂಜಾರಿ ಅವರಿಗೆ ನಾಲ್ಕು ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ
- ತುಳುನಾಡ ರಕ್ಷಣಾ ವೇದಿಕೆಯ ದುಬೈ ಘಟಕದ ಅಧ್ಯಕ್ಷ, ತುಳು ಕಲಾವಿದ ಅಶೋಕ್ ಬೈಲೂರು ಅವರಿಗೆ ಸನ್ಮಾನ ತುಳು ಭಾಷೆ, ಕಲೆ ಮತ್ತು ಸಂಸ್ಕೃತಿಯ ಉಳಿವಿನಲ್ಲಿ ಕಲಾವಿದರ ಪಾತ್ರ ಮಹತ್ವದ್ದು – ಫ್ರ್ಯಾಂಕಿ ಡಿಸೋಜ ಕೊಳಲಗಿರಿ

