ನಮ್ಮ ಕರ್ನಾಟಕ ಸೇನೆಯ ರಾಜ್ಯಮಟ್ಟದ ಸಭೆಯಲ್ಲಿ ಸುಜಯ್ ಪೂಜಾರಿ ಅವರಿಗೆ ನಾಲ್ಕು ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ
ಬೆಂಗಳೂರು, ಅಕ್ಟೋಬರ್ 11, 2026: ನಮ್ಮ ಕರ್ನಾಟಕ ಸೇನೆಯ ರಾಜ್ಯಮಟ್ಟದ ಸಭೆಯು ಭಾನುವಾರ ಬೆಂಗಳೂರಿನ ಗಾಂಧಿನಗರದಲ್ಲಿರುವ ಸ್ಯಾಂಕ್ಟಮ್ ಹೋಟೆಲ್ನಲ್ಲಿ ನಡೆಯಿತು. ಈ ಸಭೆಯು ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀ ಎಂ. ಬಸವರಾಜ್ ಪಡುಕೋಟೆ ಅವರ ಜನ್ಮದಿನದ ವಿಶೇಷ ಸಂದರ್ಭದಲ್ಲಿ ಜರುಗಿತು.
ಈ ರಾಜ್ಯಮಟ್ಟದ ಸಭೆಯಲ್ಲಿ ಸಂಘಟನೆಯ ರಾಜ್ಯ ಪದಾಧಿಕಾರಿಗಳು, ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಹಾಗೂ ತಾಲೂಕು ಅಧ್ಯಕ್ಷರ ಸಮ್ಮುಖದಲ್ಲಿ, ನಮ್ಮ ಕರ್ನಾಟಕ ಸೇನೆಯ ಉಡುಪಿ ಜಿಲ್ಲಾಧ್ಯಕ್ಷರಾದ ಶ್ರೀ ಸುಜಯ್ ಪೂಜಾರಿ ಅವರಿಗೆ ಹೆಚ್ಚುವರಿಯಾಗಿ ನಾಲ್ಕು ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿಯನ್ನು ವಹಿಸಿ ಆಯ್ಕೆ ಮಾಡಲಾಯಿತು.
ಸುಜಯ್ ಪೂಜಾರಿ ಅವರು ಇನ್ನು ಮುಂದೆ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಕಾರವಾರ ಜಿಲ್ಲೆಗಳ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಂಘಟನೆಯ ಬಲವರ್ಧನೆ, ಹೊಸ ಪದಾಧಿಕಾರಿಗಳ ನೇಮಕ, ಸದಸ್ಯತ್ವ ಅಭಿಯಾನ ಹಾಗೂ ಕನ್ನಡ ನಾಡು, ನುಡಿ, ನೆಲ, ಜಲದ ರಕ್ಷಣೆಯ ನಿಟ್ಟಿನಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ.
ಈ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಟ್ಟ ನನ್ನ ಆತ್ಮೀಯ ರಾಜ್ಯಾಧ್ಯಕ್ಷರಾದ ಶ್ರೀ ಎಂ. ಬಸವರಾಜ್ ಪಡುಕೋಟೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದ
Trending
- ಕರ್ನಾಟಕದ ನೂತನ ರಾಜ್ಯಪಾಲೆಯಾಗಿ ಡಾ. ಸುಧಾ ಯಾದವ್ ನೇಮಕ ಮಾಜಿ ಸಂಸದೆ, ಶಿಕ್ಷಣ ತಜ್ಞೆ ಡಾ. ಸುಧಾ ಯಾದವ್ಗೆ ಮಹತ್ವದ ಜವಾಬ್ದಾರಿ; ಕರ್ನಾಟಕದ ಎರಡನೇ ಮಹಿಳಾ ರಾಜ್ಯಪಾಲೆ
- ನಮ್ಮ ಕರ್ನಾಟಕ ಸೇನೆಯ ಸುಜಯ್ ಪೂಜಾರಿ ಅವರಿಗೆ ನಾಲ್ಕು ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ
- ತುಳುನಾಡ ರಕ್ಷಣಾ ವೇದಿಕೆಯ ದುಬೈ ಘಟಕದ ಅಧ್ಯಕ್ಷ, ತುಳು ಕಲಾವಿದ ಅಶೋಕ್ ಬೈಲೂರು ಅವರಿಗೆ ಸನ್ಮಾನ ತುಳು ಭಾಷೆ, ಕಲೆ ಮತ್ತು ಸಂಸ್ಕೃತಿಯ ಉಳಿವಿನಲ್ಲಿ ಕಲಾವಿದರ ಪಾತ್ರ ಮಹತ್ವದ್ದು – ಫ್ರ್ಯಾಂಕಿ ಡಿಸೋಜ ಕೊಳಲಗಿರಿ
- ಜನಪರ ಸೇವೆಗೆ ಫ್ರ್ಯಾಂಕಿ ಡಿಸೋಜ ಅವರ ಕೊಡುಗೆ ಶ್ಲಾಘನೀಯ: ಯೋಗೀಶ್ ಶೆಟ್ಟಿ ಜೆಪ್ಪು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಅಧ್ಯಕ್ಷರ ಹುಟ್ಟುಹಬ್ಬ ಆಚರಣೆ; ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಂದ ಶುಭಾಶಯ
- ಮುಲ್ಕಿ ಕೇಂದ್ರ ಶಾಫಿ ಜುಮಾ ಮಸೀದಿ ಮತ್ತು ಮಸ್ಜಿದ್ ನ್ನೂರ್, ಕಾರ್ನಾಡ್ ಇದರ ಅಧ್ಯಕ್ಷರಾಗಿ ಮೂಲ್ಕಿ ಇಕ್ಬಾಲ್ ಅಹ್ಮದ್ ಇಬ್ರಾಹೀಮ್ ಆಯ್ಕೆ
- Yogish Shetty Jeppu Leads Karnataka Delegation at National Convention Calls for Organised Fight to Protect Consumer Rights – Delivers an Effective Speech on the National Platform
- ತಂದೆಯ ಅನುಮಾನಾಸ್ಪದ ಸಾವು ಪ್ರಕರಣ: ಎರಡು ತಿಂಗಳ ಬಳಿಕ ಸಮಾಧಿಯಿಂದ ದೇಹದ ಅವಶೇಷ ಹೊರತೆಗೆದು ಪರೀಕ್ಷೆ ಆಸ್ತಿ ವರ್ಗಾವಣೆ, ಕಿರುಕುಳ ಹಾಗೂ ಹತ್ಯೆಯ ಆರೋಪ; ಸಾವಿನ ಸತ್ಯಾಂಶ ಪತ್ತೆಗೆ ಪೊಲೀಸರ ತನಿಖೆ ಚುರುಕು
- ಹಿರಿಯ ನಟ ನಾನಾ ಪಾಟೇಕರ್ ನಿಧನ ಹೃದಯ ಸ್ತಂಭನದಿಂದ 75ನೇ ವಯಸ್ಸಿನಲ್ಲಿ ಅಂತ್ಯ – ಭಾರತೀಯ ಚಿತ್ರರಂಗಕ್ಕೆ ಅಪಾರ ನಷ್ಟ

