ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಅಡ್ಯಾರ್ ಶಾಖೆಯ ಚತುರ್ಥ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅವರ ಅಧ್ಯಕ್ಷತೆಯಲ್ಲಿ ಅಡ್ಯಾರ್ ಶಾಖೆಯಲ್ಲಿ ನಡೆಯಿತು.
ಸಂಘದ ಗ್ರಾಹಕರಾದ ಶ್ರೀ ಜಯಶೀಲ ಅಡ್ಯಂತಾಯ, ಶ್ರೀ ಉಮೇಶ್ ಶೆಟ್ಟಿ ಹಾಗೂ ಶ್ರೀ ಹರೀಶ್ ಅಡ್ಯಾರ್ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸದಸ್ಯರಾದ ಶ್ರೀ ಉಮೇಶ್ ಶೆಟ್ಟಿ ಅವರು ಮಾತನಾಡಿ, “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅವರ ನೇತೃತ್ವದಲ್ಲಿ ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆಯನ್ನು ನೀಡುತ್ತಾ ಬರುತ್ತಿದೆ” ಎಂದರು.
ಸಂಘದ ಸದಸ್ಯರಾದ ಶ್ರೀ ಜಯಶೀಲ ಅಡ್ಯಂತಾಯ ಅವರು ಮಾತನಾಡಿ, “ಸಂಘವು 35 ಶಾಖೆಗಳನ್ನು ಹೊಂದಿದ್ದು, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಹಾಗೂ ಇನ್ನೂ ಮುಂದಕ್ಕೆ ಹೆಚ್ಚಿನ ಶಾಖೆಗಳನ್ನು ಹೊಂದಲಿ” ಎಂದು ಶುಭ ಹಾರೈಸಿದರು.
ಸದಸ್ಯರಾದ ಶ್ರೀ ಹರೀಶ್ ಅಡ್ಯಾರ್ ಅವರು ಮಾತನಾಡಿ, “ಅಡ್ಯಾರ್ ಶಾಖೆಯು ಗ್ರಾಹಕರಿಗೆ ಉತ್ತಮ ಶಾಖೆಯಾಗಿ, ಉತ್ತಮ ಸೇವೆಯನ್ನು ನೀಡುತ್ತಿದೆ” ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅವರು ಮಾತನಾಡಿ, “ನಮ್ಮ ಸಂಸ್ಥೆಯಲ್ಲಿ ಹೆಚ್ಚಿನ ಸಿಬ್ಬಂದಿಗಳು ಮಹಿಳೆಯರಾಗಿದ್ದು, ಗ್ರಾಹಕರ ಸಹಕಾರದಿಂದ ಈ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರಲು ಸಾಧ್ಯವಾಗಿದೆ. ಸಂಘದ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಚಿನ್ನಾಭರಣ ಸಾಲದ ಸೇವೆಯನ್ನು ಹೆಚ್ಚಾಗಿ ನೀಡುತ್ತಿದೆ.
ಸಂಘವು ಕೇವಲ ಬ್ಯಾಂಕಿಂಗ್ ಮಾತ್ರವಲ್ಲದೆ, ವಿವಿಧ ಸಾಮಾಜಿಕ ಕಾರ್ಯಕ್ರಮಗಳಲ್ಲಿಯೂ ತೊಡಗಿಸಿಕೊಂಡಿದೆ. ಜೊತೆಗೆ ಸದಸ್ಯರ ಆರೋಗ್ಯದ ಕಾಳಜಿಯಿಂದ ನಿರಂತರವಾಗಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತಾ ಬರುತ್ತಿದೆ. ಸಂಘದ ಸದಸ್ಯರಿಗೆ ಸ್ಪರ್ಧಾತ್ಮಕ ದರದಲ್ಲಿ ವಿಮಾ ಸೌಲಭ್ಯಗಳನ್ನು ನೀಡುತ್ತಿದೆ.
ಅಡ್ಯಾರ್ ಶಾಖೆಯ ಚತುರ್ಥ ವಾರ್ಷಿಕೋತ್ಸವ ಪ್ರಯುಕ್ತ 500 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿದರ ಶೇ. 10 ಹಾಗೂ 1000 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿದರ ಶೇ. 10.50 ಅನ್ನು ನೀಡಲಾಗುತ್ತಿದೆ. ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂಗೆ ಗರಿಷ್ಠ ಮೌಲ್ಯ ರೂ. 12,000/- ವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲವನ್ನು ಸದಸ್ಯರಿಗೆ ನೀಡಲಾಗುವುದು” ಎಂದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ., ನಿರ್ದೇಶಕರಾದ ಶ್ರೀ ಗೋಪಾಲ್ ಎಂ., ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಉಪಸ್ಥಿತರಿದ್ದರು.
ಶಾಖೆಯ ಸಿಬ್ಬಂದಿಯಾದ ಕುಮಾರಿ ನವ್ಯ ಅವರು ಸ್ವಾಗತಿಸಿದರು. ಶ್ರೀಮತಿ ಅಶ್ವಿನಿ ಅವರು ವಂದಿಸಿದರು. ಶಾಖೆಯ ಶಾಖಾಧಿಕಾರಿಯಾದ ಶ್ರೀಮತಿ ಕವಿತಾ ಅವರು ಕಾರ್ಯಕ್ರಮ ನಿರೂಪಿಸಿದರು.
Trending
- ಕಾಪುವಿನಲ್ಲಿ ಭಯ-ಭಕ್ತಿಯ ಸಂಭ್ರಮ: ದ್ವೈವಾರ್ಷಿಕ ಪಿಲಿಕೋಲ ಭವ್ಯವಾಗಿ ಸಂಪನ್ನ
- ಲಿಫ್ಟ್ ದುರಂತಕ್ಕೆ ಯುವಕ ಬಲಿರಕ್ಷಣೆ ವೇಳೆ ಏಕಾಏಕಿ ಚಲಿಸಿದ ಲಿಫ್ಟ್; ಉರ್ವ ಠಾಣೆಯಲ್ಲಿ ಪ್ರಕರಣ ದಾಖಲು
- ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.)ಅಡ್ಯಾರ್ ಶಾಖೆಯ ಚತುರ್ಥ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆ
- ಕುಂದಾಪುರ : ಕ್ರಿಕೆಟ್ ಬೆಟ್ಟಿಂಗ್ ಆರೋಪಿ ಭರತ್ ಜಯರಾಮ್ ದಾಸನಿಗೆ ಗಡಿಪಾರು ಆದೇಶ
- ಜೆಡಿಎಸ್ ದ.ಕ ಜಿಲ್ಲಾದ್ಯಕ್ಷ ಜಾಕೆ ಮಾಧವ ಗೌಡ ನೇತೃತ್ವದಲ್ಲಿ ಮಾಜಿ ಪ್ರಧಾನಿ ಶ್ರೀ ಎಚ್. ಡಿ. ದೇವೇಗೌಡರ 94ನೇ ಜನ್ಮದಿನ ಅಂಗವಾಗಿ ರಕ್ತದಾನ ಶಿಬಿರ ಮತ್ತು ವಿವಿಧ ಸೇವಾ ಕಾರ್ಯಕ್ರಮ
- ಉಡುಪಿ ಜೆಡಿಎಸ್ ಮಹಿಳಾ ವಿಭಾಗದ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಅನಸೂಯ ಶೆಟ್ಟಿ ನೇಮಕ
- ಮಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ‘ಲ್ಯಾನ್ಸಿ ಕನ್ಸ್ಟ್ರಕ್ಷನ್ಸ್’ ಸಂಸ್ಥೆಯ ಸ್ಥಾಪಕ ಲ್ಯಾನ್ಸಿ ಜೋಸೆಫ್ ಮಸ್ಕರೇನಸ್ (77) ನಿಧನ
- V. D. Satheesan ಕೇರಳದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಹೈಕಮಾಂಡ್ ಆಯ್ಕೆ

