ಕುಂದಾಪುರ: 2025-26ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕುಂದಾಪುರದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಹೊಸ ಇತಿಹಾಸ ನಿರ್ಮಿಸಿದ್ದಾರೆ.
ವಿಜ್ಞಾನ ವಿಭಾಗದ ಕುಮಾರಿ ಮಾನ್ಯ ಅವರು 600ರಲ್ಲಿ 597 ಅಂಕಗಳನ್ನು ಗಳಿಸಿ, ಅನುಪ್ ಶೇಖರ್ ನಾಯ್ಕ ಅವರು 600ರಲ್ಲಿ 595 ಅಂಕಗಳನ್ನು ಪಡೆದು ರಾಜ್ಯದಲ್ಲಿಯೇ ಅತ್ಯುತ್ತಮ ರ್ಯಾಂಕ್ಗಳನ್ನು ಗಳಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಒಟ್ಟು 314 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 232 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 82 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಗಮನಾರ್ಹವಾಗಿದೆ. ಈ ಸಾಧನೆಯ ಮೂಲಕ ಕಾಲೇಜು ರಾಜ್ಯ ಮಟ್ಟದಲ್ಲಿ ತನ್ನ ಶೈಕ್ಷಣಿಕ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಇದಲ್ಲದೆ, ಬಾಲಗೌಡ ಬಸವರಾಜ್ ಮಂಗೋಜಿ (592), ಆಯುಷ್ ಶೆಣೈ (592), ಕಿಶನ್ ಕುಮಾರ್ ಗಿರೀಶ್ ಹೆಗ್ಡೆ (592), ಸನ್ಸಿತಾ ಎಸ್.ಎನ್ (592), ಸಾನ್ವಿ ಶೆಟ್ಟಿ (591), ತನ್ವಿ ಶೆಟ್ಟಿ (590), ತ್ರಿಶಾ (590) ಸೇರಿದಂತೆ ಒಟ್ಟು 9 ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಉನ್ನತ ರ್ಯಾಂಕ್ಗಳನ್ನು ಪಡೆದು ಗಮನ ಸೆಳೆದಿದ್ದಾರೆ.
ಈ ಅಪೂರ್ವ ಸಾಧನೆಗೆ ಎಂ.ಎಂ. ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಎಂ. ಮಹೇಶ್ ಹೆಗ್ಡೆ, ಶ್ರೀಮತಿ ದೀಪಾ ಎಂ. ಹೆಗ್ಡೆ, ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಗಳು ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಭವಿಷ್ಯದಲ್ಲಿಯೂ ಇಂತಹ ಸಾಧನೆಗಳನ್ನು ಮುಂದುವರಿಸಲೆಂದು ಶುಭಹಾರೈಸಿದ್ದಾರೆ.
