ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳ (ಜಾ) ವತಿಯಿಂದ ಮಹತ್ವದ ಸಂಘಟನಾ ಸಭೆ ಮಂಗಳೂರಿನ ಪಕ್ಷದ ಕಚೇರಿಯಲ್ಲಿ ಜಿಲ್ಲಾ ಅಧ್ಯಕ್ಷ ಅಕ್ಷಿತ್ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಯನ್ನು ಗ್ರಾಮದಿಂದ ನಗರ ಮಟ್ಟದವರೆಗೆ ಬಲಪಡಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಯುವಕರನ್ನು ಸಂಘಟಿಸುವ ಮೂಲಕ ಪಕ್ಷದ ಶಕ್ತಿಯನ್ನು ವಿಸ್ತರಿಸಬೇಕು ಮತ್ತು ಸದಸ್ಯತ್ವ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರೆ ನೀಡಿದರು.

ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ H. D. Kumaraswamy ಅವರ ನೇತೃತ್ವದಲ್ಲಿ ಮುಂದಿನ ಸರ್ಕಾರ ರಚನೆಯಲ್ಲಿ ಯುವಕರ ಪಾತ್ರ ನಿರ್ಣಾಯಕವಾಗಿರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

🔸 ಭವ್ಯ ಸಮಾವೇಶಕ್ಕೆ ತೀರ್ಮಾನ
ಯುವ ಜನತಾದಳ ವತಿಯಿಂದ ಶೀಘ್ರದಲ್ಲೇ ಜಿಲ್ಲಾ ಮಟ್ಟದ ಭವ್ಯ ಸಮಾವೇಶವನ್ನು ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಮಾವೇಶದ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಪಕ್ಷದತ್ತ ಸೆಳೆಯುವುದು ಹಾಗೂ ಪಕ್ಷದ ತತ್ವಗಳನ್ನು ಜನರಿಗೆ ತಲುಪಿಸುವುದು ಉದ್ದೇಶವಾಗಿದೆ.

🔸 ಪದಾಧಿಕಾರಿಗಳ ಅಭಿಪ್ರಾಯ
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಪದಾಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಸಂಘಟನೆ ಬಲಪಡಿಸುವ ಕುರಿತು ಸಲಹೆಗಳನ್ನು ನೀಡಿದರು.

🔸 ಒಗ್ಗಟ್ಟಿನ ಸಂಕಲ್ಪ
ಸಭೆಯ ಅಂತ್ಯದಲ್ಲಿ ಎಲ್ಲಾ ಪದಾಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡಿ ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಬಲಪಡಿಸಲು ಸಮನ್ವಯದಿಂದ ಕಾರ್ಯನಿರ್ವಹಿಸುವ ಸಂಕಲ್ಪ ಕೈಗೊಂಡರು.
ಸಭೆಯಲ್ಲಿ ಮತ್ತೊಂದು ಮಹತ್ವದ ನಿರ್ಧಾರವಾಗಿ ಸುಳ್ಯ ತಾಲೂಕು ನಗರ ಯುವ ಅಧ್ಯಕ್ಷರಾಗಿ ರಾಕೇಶ್ ಕೆ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ರಾಕೇಶ್ ಕೆ ಅವರಿಗೆ ಆದೇಶ ಪತ್ರ ಹಸ್ತಾಂತರಿಸಿ ಅಭಿನಂದಿಸಿದರು. ಹೊಸದಾಗಿ ನೇಮಕಗೊಂಡ ರಾಕೇಶ್ ಕೆ ಅವರು ಪಕ್ಷ ಸಂಘಟನೆ ಬಲಪಡಿಸಲು ಸಮರ್ಪಕವಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು
ಸಭೆಯನ್ನು ಜಿಲ್ಲಾ ಯುವ ಮಹಾಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಚಿಮ್ಟಿಕಲ್ಲು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ಉತ್ತರ ವಿಧಾನಸಭಾ ಅಧ್ಯಕ್ಷ ಹಾಗೂ ಜಿಲ್ಲಾ ಸಂಘಟನಾ ಉಸ್ತುವಾರಿ ರತೀಶ್ ಕರ್ಕೆರ ವಂದಿಸಿದರು.
👉 ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿತೇಶ್ ರೈ, ಹಿರಿಯ ಉಪಾಧ್ಯಕ್ಷ ಮೊಹಮ್ಮದ್ ಅಸಿಫ್, ಮಂಗಳೂರು ದಕ್ಷಿಣ ಅಧ್ಯಕ್ಷ ಸತ್ತಾರ್ ಬಂದರು, ಪುತ್ತೂರು ಕ್ಷೇತ್ರ ಅಧ್ಯಕ್ಷ ಶಿವ ಸಾಲ್ಯಾನ್, ಕಡಬ ತಾಲೂಕು ಯುವ ಅಧ್ಯಕ್ಷ ಹರಿಪ್ರಸಾದ್ ಪದಾಧಿಕಾರಿಗಳಾದ ಭರತ, ಆದರ್ಶ ಪೂಜಾರಿ,ರಿನಿತ್ ಪೂಜಾರಿ ,ನಿಶಾಂತ್,ಸುಶಾಂತ್,ಪ್ರಣಾಮ್,ವಿನಿತ್ ಪೂಜಾರಿ.. , ಅಖಿಲ್, ರಾಜೇಶ್, ಅಭಿಷೇಕ್,ರಾಕೇಶ್ ಕೆ ಸುಳ್ಯ, ಪ್ರದೀಪ್, ದೀಪಕ್,ವಿಖ್ಯಾತ್ ಕಾರ್ತಿಕ್, ಪ್ರೀತಮ್ ಪೂಜಾರಿ,ತನ್ವಿತ್, ಲಿಖಿತ್ ಮುಂತಾದ ಹಲವರು ಉಪಸ್ಥಿತರಿದ್ದರು.






