ಉಡುಪಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ನಡೆದ ಲೋಕಾಯುಕ್ತದ ಭರ್ಜರಿ ದಾಳಿಯ ಭಾಗವಾಗಿ ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತ (ಡಿಸಿ) ಶ್ರೀನಿವಾಸ್ ಟಿ.ಎಂ. ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೂ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದು, ಕೋಟ್ಯಂತರ ಮೌಲ್ಯದ ಅಸಮತೋಲನ ಆಸ್ತಿ ಪತ್ತೆಯಾಗಿದೆ.

ಮಂಗಳೂರು ಲೋಕಾಯುಕ್ತ ವಿಭಾಗದ ಎಸ್ಪಿ ದಿನೇಶ್ ಕುಮಾರ್ ನೇತೃತ್ವದಲ್ಲಿ ಮಾರ್ಚ್ 11ರಿಂದ 12ರವರೆಗೆ ಎರಡು ದಿನಗಳ ಕಾಲ ಈ ಕಾರ್ಯಾಚರಣೆ ನಡೆದಿದ್ದು, ಅಧಿಕಾರಿಗೆ ಸಂಬಂಧಿಸಿದಂತೆ ಒಟ್ಟು 15 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ.
ದಾಳಿಯ ವೇಳೆ ಅಧಿಕಾರಿಗಳಿಗೆ 11 ನಿವೇಶನಗಳು, 6 ವಾಸದ ಮನೆಗಳು ಹಾಗೂ 31 ಎಕರೆ ಕೃಷಿ ಜಮೀನು ಸೇರಿದಂತೆ ಸುಮಾರು ರೂ.6,90,64,716 ಮೌಲ್ಯದ ಸ್ಥಿರಾಸ್ತಿಗಳು ಪತ್ತೆಯಾಗಿವೆ.
ಇದರ ಜೊತೆಗೆ ವಿವಿಧ ರೂಪದಲ್ಲಿ ಭಾರೀ ಪ್ರಮಾಣದ ಚರಾಸ್ತಿಯೂ ಪತ್ತೆಯಾಗಿದೆ.
• ರೂ.3,95,941 ನಗದು
• ರೂ.1,47,50,506 ಮೌಲ್ಯದ ಚಿನ್ನಾಭರಣ
• ರೂ.17,00,000 ಮೌಲ್ಯದ ವಾಹನಗಳು
• ರೂ.25,75,000 ಮೌಲ್ಯದ ಬ್ಯಾಂಕ್ ಠೇವಣಿ
• ರೂ.72,68,554 ಮೌಲ್ಯದ ಇತರೆ ವಸ್ತುಗಳು
ಈ ಮೂಲಕ ಒಟ್ಟು ರೂ.2,66,90,001 ಮೌಲ್ಯದ ಚರಾಸ್ತಿ ಪತ್ತೆಯಾಗಿದೆ.

ಸ್ಥಿರಾಸ್ತಿ ಹಾಗೂ ಚರಾಸ್ತಿಗಳನ್ನು ಸೇರಿಸಿ ಒಟ್ಟು ರೂ.8,69,54,717 ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಈ ಆಸ್ತಿಗಳ ಮೂಲ ಹಾಗೂ ಅಸಮತೋಲನ ಆಸ್ತಿ ಕುರಿತು ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

