ಮಂಗಳೂರು ನಗರದ ಹೃದಯಭಾಗದಲ್ಲಿ ಹೊಸತನದ ಸೊಗಡಿನಿಂದ ಆರಂಭಗೊಂಡಿರುವ “MFC CHAI Bank” ಸಂಸ್ಥೆಯ ಭವ್ಯ ಉದ್ಘಾಟನಾ ಸಮಾರಂಭವು ಗಣ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನೆರವೇರಿತು. ಸಮಾಜದ ವಿವಿಧ ಕ್ಷೇತ್ರಗಳ ಮುಖಂಡರು, ರಾಜಕೀಯ ನಾಯಕರು ಹಾಗೂ ಸಿನಿ ಕ್ಷೇತ್ರದ ಗಣ್ಯರು ಭಾಗವಹಿಸಿ ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ Ivan D’Souza ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, “ಇಂತಹ ಹೊಸ ಉದ್ಯಮಗಳು ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ನಗರದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತವೆ. MFC CHAI Bank ಉತ್ತಮ ಗುಣಮಟ್ಟದ ಸೇವೆಯ ಮೂಲಕ ಜನಮನ ಗೆಲ್ಲಲಿ” ಎಂದು ಶುಭ ಹಾರೈಸಿದರು.


ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ Satish Kumpala ಮಾತನಾಡಿ, ಸ್ಥಳೀಯ ವ್ಯಾಪಾರ ವಲಯದಲ್ಲಿ ಇಂತಹ ನವೀನ ಪ್ರಯತ್ನಗಳು ಸ್ವಾಗತಾರ್ಹ ಎಂದು ಅಭಿಪ್ರಾಯಪಟ್ಟರು.

ತುಳುನಾಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ Yogish Shetty Jappu ಸಂಸ್ಥೆಯ ಮುಂದಿನ ಬೆಳವಣಿಗೆಗೆ ಹಾರೈಕೆ ಸಲ್ಲಿಸಿದರು.
ಮಾಜಿ ಮೇಯರ್ಗಳಾದ Divakar Pande ಹಾಗೂ Ashraf, ಮಾಜಿ ಕಾರ್ಪೋರೇಟರ್ Latif Kandakk, ದಾಸ್ ಪ್ರೋಮೋಶನ್ ಮಾಲೀಕರಾದ Anil Das, ಕಾಂಗ್ರೆಸ್ ಮುಖಂಡ Suvail Kandakk. Sharan Chilimbi ಉಪಸ್ಥಿತರಿದ್ದು ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಶುಭಕೋರಿದರು.

ಈ ಸಂದರ್ಭದಲ್ಲಿ ಕೇರಳದ ರೀಲ್ ಸ್ಟಾರ್ಗಳಾದ Arpana ಸೇರಿದಂತೆ ಹಲಾವರು ವಿಶೇಷ ಆಕರ್ಷಣೆಯಾಗಿದ್ದರು.
ಸಂಸ್ಥೆಯ ಮಾಲೀಕರಾದ Siddique ಮಾತನಾಡಿ, “ಗ್ರಾಹಕರಿಗೆ ವಿಭಿನ್ನ ರುಚಿಯ ಚಹಾ ಹಾಗೂ ಸ್ನೇಹಪರ ಸೇವೆಯನ್ನು ಒದಗಿಸುವುದು ನಮ್ಮ ಉದ್ದೇಶ. MFC CHAI Bank ಕೇವಲ ಚಹಾ ಅಂಗಡಿಯಷ್ಟೇ ಅಲ್ಲ, ಸ್ನೇಹಿತರು ಸೇರಿ ಸಮಯ ಕಳೆಯುವ ಹಿತವಾದ ಸ್ಥಳವಾಗಲಿದೆ” ಎಂದು ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಹಲವಾರು ಗಣ್ಯರು, ವ್ಯಾಪಾರಿಗಳು ಹಾಗೂ ಸ್ಥಳೀಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಹೊಸ ಸಂಸ್ಥೆ ನಗರದ ವ್ಯಾಪಾರ ವಲಯದಲ್ಲಿ ಹೊಸ ಚೈತನ್ಯವನ್ನು ಮೂಡಿಸಲಿದೆ ಎಂಬ ವಿಶ್ವಾಸ ವ್ಯಕ್ತವಾಯಿತು.





