ಮಂಗಳೂರು : ಪ್ರಾಚೀನ ಭಾರತೀಯ ನೃತ್ಯಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಈ ಕೆಲಸ ಇನ್ನಷ್ಟು ನಡೆಯಬೇಕೆಂದು ಎಂದು ಶಾರದಾ ಸಮುಹ ಸಂಸ್ಥೆ ಯ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್ ಅಭಿಪ್ರಾಯಪಟ್ಟರು.

ಮಂಗಳೂರು ನಗರದ ಪುರಭವನದಲ್ಲಿ ನೃತ್ಯ ಸುಧಾ ಮಂಗಳೂರು ಉಡುಪಿ ನೃತ್ಯ ಸಂಸ್ಥೆಯ 21ನೇ ವರ್ಷದ ನೃತ್ಯ ಸುಧಾರ್ಪಣಂ 2026 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು

ನೃತ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ನೃತ್ಯಕಲೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಅವಿಭಾಜ್ಯ ಅಂಗವಾಗಿದ್ದು, ಇಂತಹ ಕಾರ್ಯಕ್ರಮಗಳು ಮುಂದಿನ ತಲೆಮಾರಿಗೆ ಕಲೆಯ ಮಹತ್ವವನ್ನು ಅರಿಯುವಂತೆ ಮಾಡುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನೃತ್ಯಗುರು ವಿದ್ವಾನ್ ಯು.ಕೆ. ಪ್ರವೀಣ್ ರಾವ್, ನೃತ್ಯ ಗುರು ವಿದುಷಿ ಪ್ರತಿಮಾ ಶ್ರೀಧರ್ ಸಂಸ್ಥೆ ಯ ಅಧ್ಯಕ್ಷ ಡಾ ಸುಧಿಂದ್ರ ರಾವ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಧುಸೂದನ ಅಲೆವೂರಯ ಅವರಿಗೆ ನೃತ್ಯ ಸುಧಾ ಸನ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು. . ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಸಾದ್ ರಾವ್, ನೃತ್ಯ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸಲು ಇಂತಹ ಗೌರವಗಳು ಮತ್ತಷ್ಟು ಪ್ರೇರಣೆಯನ್ನು ನೀಡುತ್ತವೆ ಎಂದರು.

ಸಂಸ್ಥೆಯ ನಿರ್ದೇಶಕಿ ಸೌಮ್ಯ ಸುಧಿಂದ್ರ ರಾವ್ ಸ್ವಾಗತಿಸಿದರು ಆರ್ಪಿತ ಶೆಟ್ಟಿ ನಿರೂಪಿಸಿದರು ನಿಧಿ ಡಿ ಶೆಟ್ಟಿ ವಂದಿಸಿದರು ನೃತ್ಯ ಸುಧಾ ಸಂಸ್ಥೆಯ ಕಲಾವಿದರಿಂದ ವಿವಿಧ ನೃತ್ಯ ಪ್ರದರ್ಶನ ನಡೆಯಿತು


ಕಾರ್ಯಕ್ರಮದಲ್ಲಿ ಸಂಸ್ಕೃತಿ ಪ್ರೇಮಿಗಳು, ಕಲಾವಿದರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ನೃತ್ಯೋತ್ಸವ 2026ರ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಸಂಘದ ವತಿಯಿಂದ ಧನ್ಯವಾದಗಳನ್ನು ತಿಳಿಸಲಾಯಿತು.

