ಮಂಗಳೂರು:
ಬೆಂಗರೆಯ ಐತಿಹಾಸಿಕ ವೀರಭಾರತಿ ವ್ಯಾಯಾಮ ಶಾಲೆ, 1926ರಲ್ಲಿ ಸ್ಥಾಪಿತವಾಗಿ ಶತಮಾನೋತ್ಸವದ ದಾರಿಯಲ್ಲಿ ಕಾಲಿರಿಸಿರುವ ಹಿನ್ನೆಲೆಯಲ್ಲಿ, ವ್ಯಾಯಾಮ ಶಾಲೆಯ ಜೀರ್ಣೋದ್ಧಾರ ಹಾಗೂ ಶ್ರೀ ರಾಮಚಂದ್ರ–ಆಂಜನೇಯ ದೇವರ ಪ್ರತ್ಯೇಕ ಗರ್ಭಗುಡಿ ನಿರ್ಮಾಣ ಕಾರ್ಯಗಳಿಗೆ ಸಂಚಿಕೆ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 5 ರಂದು ಬೆಳಿಗ್ಗೆ 8.55ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ.
ವೇದಮೂರ್ತಿ ಶ್ರೀ ಶಿವಪ್ರಸಾದ್ ತಂತ್ರಿಗಳ ಮಾರ್ಗದರ್ಶನದಲ್ಲಿ ನಾಡೋಜ ಡಾ. ಜಿ. ಶಂಕರ್ ಅವರ ದಿವ್ಯ ಹಸ್ತದಿಂದ ಶಿಲಾನ್ಯಾಸ ನೆರವೇರಲಿದೆ ಎಂದು ಜೀರ್ಣೋದ್ಧಾರ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಮೋಹನ್ ಬೆಂಗ್ರೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶಿಲಾನ್ಯಾಸ ಸಮಾರಂಭ – ಅತಿಥಿವರ್ಯರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಜಿತ್ ಜಿ. ಸುವರ್ಣ, ಅಧ್ಯಕ್ಷರು, ಮೊಗವೀರ ವ್ಯವಸ್ಥಾಪಕ ಶಿಕ್ಷಣ ಮಂಡಳಿ, ಮುಂಬೈ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಭಾಗವಹಿಸುವವರು:
• ಶ್ರೀ ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ
• ಶ್ರೀ ಐವನ್ ಡಿ’ಸೋಜಾ, ಸದಸ್ಯರು, ರಾಜ್ಯ ವಿಧಾನ ಪರಿಷತ್
• ಶ್ರೀ ಶಶಿಕುಮಾರ್ ಬೆಂಗ್ರೆ (ಬಾಲು), ಮಾಜಿ ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ
• ಶ್ರೀ ಮಹಾವಿಷ್ಣು ಶೇಷಶಯನ ಭಜನಾ ಮಂದಿರ, ಬೆಂಗ್ರೆ – ಮಾಜಿ ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ
• ವೀರ ಹನುಮಾನ್ ವ್ಯಾಯಾಮ ಶಾಲೆ, ಬೆಂಗ್ರೆ – ಪ್ರತಿನಿಧಿಗಳು
• ಶ್ರೀ ಸಂಜಯ್ ಸುವರ್ಣ, ಅಧ್ಯಕ್ಷರು, ಬೆಂಗರೆ ಮಹಾಜನ ಸಭಾ
• ಶ್ರೀ ಅನಿಲ್ ಕುಮಾರ್, ಅಧ್ಯಕ್ಷರು, ಕರ್ನಾಟಕ ಪರ್ಸಿನ್ ಬೋಟ್ ಮೀನುಗಾರರ ಸಂಘ
• ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಹಕಾರಿ ಸಂಘ – ಅಧ್ಯಕ್ಷರು
• ಶ್ರೀ ವರದರಾಜ ಬಂಗೇರ, ಅಧ್ಯಕ್ಷರು, ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘ
• ಶ್ರೀ ಚೇತನ್ ಬೆಂಗ್ರೆ, ಅಧ್ಯಕ್ಷರು, ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘ
ಜೀರ್ಣೋದ್ಧಾರ ವೆಚ್ಚ – ಭಕ್ತರ ಸಹಕಾರಕ್ಕೆ ವಿನಂತಿ
ವ್ಯಾಯಾಮ ಶಾಲೆಯ ಜೀರ್ಣೋದ್ಧಾರ ಮತ್ತು ಗರ್ಭಗುಡಿ ನಿರ್ಮಾಣಕ್ಕೆ ಸುಮಾರೆ ₹1 ಕೋಟಿ 50 ಲಕ್ಷ ವೆಚ್ಚವಿದ್ದು, ಭಕ್ತರು–ದಾನಿಗಳು ತನು–ಮನ–ಧನವನ್ನರ್ಪಿಸಿ ದೇವಾಲಯದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕೆಂದು ಸಮಿತಿ ವಿನಂತಿಸಿದೆ.
ಶತಮಾನೋತ್ಸವ – ಏಪ್ರಿಲ್ನಲ್ಲಿ ಭವ್ಯ ಆಚರಣೆ
ಶತಮಾನೋತ್ಸವ ಆಚರಣೆ ಏಪ್ರಿಲ್ ತಿಂಗಳಲ್ಲಿ ನಡೆಯಲಿದ್ದು, ದೇವರ ಪ್ರತಿಷ್ಠಾಪನೆ ಜೊತೆಗೆ:
• ವೈದಿಕ–ಧಾರ್ಮಿಕ ವಿಧಿವಿಧಾನಗಳು
• ಭಕ್ತರ ಸಭೆಗಳು
• ಕ್ರೀಡಾ–ಸಾಂಸ್ಕೃತಿಕ ಕಾರ್ಯಕ್ರಮಗಳು
ವ್ಯಾಪಕವಾಗಿ ಆಯೋಜಿಸಲಾಗುವುದು ಎಂದು ತಿಳಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಚೇತನ್ ಬೆಂಗ್ರೆ, ಅಧ್ಯಕ್ಷರು, ಜೀರ್ಣೋದ್ಧಾರ ಶತಮಾನೋತ್ಸವ ಸಮಿತಿ; ಆನಂದ ಅಮೀನ್, ಅಧ್ಯಕ್ಷರು, ವೀರಭಾರತಿ ವ್ಯಾಯಾಮ ಶಾಲೆ; ಲಕ್ಷ್ಮಣ್ ಬೆಂಗ್ರೆ ಮತ್ತು ಹರಿಶ್ಚಂದ್ರ ಬೆಂಗ್ರೆ ಉಪಸ್ಥಿತರಿದ್ದರು.

