ಮಂಗಳೂರು: ಶಿಯಾನ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಪಿಲಿಪಂಜ” ತುಳು ಚಲನಚಿತ್ರದ ಎರಡನೇ ಹಾಡಾದ ಫ್ರೆಂಡ್ಷಿಪ್ ಸಾಂಗ್, ಭಾನುವಾರ ಮಂಗಳೂರಿನ ಭಾರತ್ ಮಾಲ್ನಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಂಡಿತು. ಪ್ರತೀಕ್ ಯು. ಪೂಜಾರಿ ಕಾವೂರು ಅವರ ನಿರ್ಮಾಣದ ಈ ಚಿತ್ರಕ್ಕೆ ಭರತ್ ಶೆಟ್ಟಿ ಕಥೆ, ಪರಿಕಲ್ಪನೆ ಹಾಗೂ ನಿರ್ದೇಶನ ನೀಡುತ್ತಿದ್ದಾರೆ.
ಬಿಡುಗಡೆ ಸಮಾರಂಭಕ್ಕೆ ತುಳು ಚಿತ್ರರಂಗ ಮತ್ತು ಸಮಾಜದ ಗಣ್ಯರು ಹಾಜರಿದ್ದು, ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತುಂಬಿದರು. ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್. ಧನರಾಜ್, ತುಳುನಾಡ ರಕ್ಷಣಾ ವೇದಿಕೆಯ ಸಂಸ್ಥಾಪಕ ಯೋಗೀಶ್ ಶೆಟ್ಟಿ ಜಪ್ಪು, ನಿರ್ದೇಶಕ ರಝಾಕ್ ಪುತ್ತೂರು, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ದೀಪಕ್ ಪೂಜಾರಿ, ವೀಣಾ ಮಂಗಳ, ಕ್ಯಾಮ್ಕೋ ಮಾಜಿ ಅಧ್ಯಕ್ಷ ಪ್ರಮೋದ್ ರೈ, ಪ್ರೇಮ್ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಚಿತ್ರದ ನಿರ್ಮಾಪಕ ಪ್ರತೀಕ್ ಯು. ಪೂಜಾರಿ, ಸಹ-ನಿರ್ಮಾಪಕಿ ಬಿಂದಿಯಾ ಪ್ರತೀಕ್, ನಿರ್ದೇಶಕ ಭರತ್ ಶೆಟ್ಟಿ, ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ರಮೇಶ್ ರೈ ಕುಕ್ಕುವಳ್ಳಿ, ಸಂಗೀತ ನಿರ್ದೇಶಕ ಎಲ್.ವಿ.ಯಸ್, ಗಾಯಕ-ನಟ ರಕ್ಷಣ್ ಮಾಡೂರು, ಗಾಯಕ ಸಂದೇಶ್ ನೀರ್ಮಾರ್ಗ, ನೃತ್ಯ ನಿರ್ದೇಶಕ ರಾಜೇಶ್ ಕಣ್ಣೂರು, ನಟಿ ದಿಶಾ ರಾಣಿ, ಸಹ ನಿರ್ದೇಶಕ ಅಕ್ಷತ್ ವಿಟ್ಲ ಹಾಗೂ ಸುರೇಶ್ ಬಲ್ಮಠ ಮತ್ತಿತರರು ಕಾರ್ಯಕ್ರಮಕ್ಕೆ ಹಾಜರಾಗಿ ಚಿತ್ರದ ಹಾಡು ಬಿಡುಗಡೆಗೆ ಸಾಕ್ಷಿಯಾದರು.
ಸ್ನೇಹದ ಮನೋಭಾವವನ್ನು ಬಿಂಬಿಸುವ ಈ ಹೊಸ ಫ್ರೆಂಡ್ಷಿಪ್ ಸಾಂಗ್, ಮುಂಬರುವ “ಪಿಲಿಪಂಜ” ಚಿತ್ರದ ಮೇಲೆ ಅಭಿಮಾನಿಗಳ ಕಾತರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
