ಬಜ್ಪೆ: ಶಾಂತಿ ನಗರದ ಜರ್ಗುಮ್ ಫೌಂಡೇಶನ್ನ ಸುಮಾರು 9 ಸದಸ್ಯರು ಪವಿತ್ರ ಉಮ್ರಾ ಯಾತ್ರೆಗೆ ತೆರಳಲಿದ್ದು, ಅವರನ್ನು ಗುರುತಿಸಿ ಟೀಮ್ ಕರಾವಳಿ ಬಜ್ಪೆಯ ಸ್ಥಾಪಕಾಧ್ಯಕ್ಷ ನಿಸಾರ್ ಕರಾವಳಿ ಹಾಗೂ ಅವರ ತಂಡದ ಸದಸ್ಯರು ಸೇರಿ ಆತ್ಮೀಯವಾಗಿ ಸನ್ಮಾನಿಸಿ ಬಿಳ್ಕೊಟ್ಟರು.
ಈ ಸಂದರ್ಭದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸಿರಾಜ್ ಬಜ್ಪೆ, SDPI ಮುಖಂಡ ಇಸ್ಮಾಯಿಲ್ ಇಂಜಿನಿಯರ್, ಧರ್ಮಗುರುಗಳು, ಹಿರಿಯರಾದ ಮೊನಕ ಹಾಜಿ ಮತ್ತು ಸಲೀಮ್ ಹಾಜಿ, ಉದ್ಯಮಿ ಇಫ್ತಿಕಾರ್ ಹಾಜಿ, ಕೊಯಕಾ, ಹಫೀಜ್ ಕೊಳಂಬೆ, ಉದ್ಯಮಿ ಜಬ್ಬಾರ್ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯಾತ್ರಾರ್ಥಿಗಳಿಗೆ ಶುಭಾಶಯಗಳನ್ನು ಕೋರಿ, ಅವರ ಯಾತ್ರೆ ಯಶಸ್ವಿಯಾಗಿ ನೆರವೇರಲೆಂದು ಪ್ರಾರ್ಥಿಸಲಾಯಿತು.
