ಉಳ್ಳಾಲ, ದ.ಕ. | ದಕ್ಷಿಣ ಕನ್ನಡದ ಉಳ್ಳಾಲ ಸಮೀಪ ಕೇರಳದಿಂದ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಕೆಂಪುಕಲ್ಲುಗಳು ಪೊಲೀಸರಿಗೆ ಸಿಕ್ಕಿಬಿದ್ದಿವೆ. ಉಳ್ಳಾಲ ಮತ್ತು ಕೊಣಾಜೆ ಠಾಣೆಗಳ ಪೊಲೀಸರು ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಮೂರು ಲಾರಿಗಳನ್ನು ವಶಪಡಿಸಿಕೊಂಡಿದ್ದು, ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಾಗಿ ಲಾರಿ ಚಾಲಕ ಇಟ್ಬಾಲ್ (ಮೋಂಟೆಪದವು), ಲಾರಿ ಮಾಲಕ ಶಫೀಕ್, ಅಮ್ಮೆಂಬಳ ನಿವಾಸಿ ಚಾಲಕ ಝನುದ್ದೀನ್ ಹಾಗೂ ಮನೋಜ್ ಕುಮಾರ್ ಗುರುತಿಸಲಾಗಿದೆ. ಈ ಬಂಧನಗಳು ಬೃಹತ್ ಅಕ್ರಮ ಖನಿಜ ಸಾಗಾಟ ಜಾಲವನ್ನು ಬಹಿರಂಗಪಡಿಸಿರುವಂತಾಗಿದೆ.
ತಲಪಾಡಿಯಲ್ಲಿ ಉಳ್ಳಾಲ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಒಂದು ಲಾರಿ ಹಾಗೂ ಅದರಲ್ಲಿ ಸಾಗಿಸಲಾಗುತ್ತಿದ್ದ ಕೆಂಪುಕಲ್ಲು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ, ತೌಡುಗೋಳಿ ಬಳಿ ಕೊಣಾಜೆ ಠಾಣೆ ಪೊಲೀಸರು ಎರಡು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಮಂಜನಾಡಿ ಜಂಕ್ಷನ್ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್ಟೆಬಲ್ ಮುಹಮ್ಮದ್ ಗೌಸ್ ನೀಡಿದ ಮಾಹಿತಿ ಮೇರೆಗೆ, ದಾಳಿ ನಡೆಸಿದ ಕೊಣಾಜೆ ಪೊಲೀಸರು ಲಾರಿಯಲ್ಲಿ ಸುಮಾರು 250 ಕೆಂಪುಕಲ್ಲುಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಸಾಗಿಸಲಾಗುತ್ತಿದ್ದಿರುವುದನ್ನು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಚಾಲಕ ಮೈನುದ್ದೀನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಇನ್ನು ತೌಡುಗೋಳಿಯಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ, ಟಿಪ್ಪರ್ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಇನ್ನೊಂದು 250 ಕೆಂಪುಕಲ್ಲುಗಳ ವಶಪಡಿಸಿದ್ದು ಅಕ್ರಮ ಸಾಗಟ ಧಂದೆ ಬಯಲಾಗಿದೆ. ಲಾರಿ ಚಾಲಕ ಮನೋಜ್ ಕುಮಾರ್ ಪರವಾನಿಗೆ ಹಾಗೂ ರಾಜಧಾನ ಪಾವತಿ ದಾಖಲೆ ಇಲ್ಲದೇ ಕಲ್ಲುಗಳನ್ನು ಕೇರಳದ ಬಾವಲಿಗುರಿಯಿಂದ ಕಲಿ.ಂಜ ಕಡೆಗೆ ಸಾಗಿಸುತ್ತಿದ್ದರೆಂದು ತಿಳಿದು ಬಂದಿದೆ.
ಎಲ್ಲಾ ಲಾರಿಗಳನ್ನು ಹಾಗೂ ಕಲ್ಲುಗಳನ್ನು ವಶಪಡಿಸಿಕೊಂಡು, ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜಾರಿಗೆ ತಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯೊಳಗಿನ ಅಕ್ರಮ ಕಲ್ಲು ಸಾಗಾಟದ ಜಾಲದ ಮೂಲ ನಾಶ ಮಾಡಲು ಈ ಕಾರ್ಯಾಚರಣೆ ಬಹುಮುಖ್ಯ ಪ್ರಯತ್ನವಾಗಿ ಹೊರಹೊಮ್ಮಿದೆ.



