ಉಚ್ಚಿಲ: ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದ ಭವ್ಯ ಶೋಭಾ ಯಾತ್ರೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಸುನಂದ ಕೋಟ್ಯಾನ್ ನೇತೃತ್ವದಲ್ಲಿ ತಂಡದ ಸದಸ್ಯರು ಭಕ್ತಿಪೂರ್ವಕವಾಗಿ ಭಾಗವಹಿಸಿದರು.
ಈ ಪವಿತ್ರ ಯಾತ್ರೆಯಲ್ಲಿ ಶ್ರೀಮತಿ ಹರಿಣಾಕ್ಷಿ ಉಚ್ಚಿಲ, ಜ್ಞಾನವಿ ಉಚ್ಚಿಲ, ನಿರ್ಮಲ ಎಂ. ಎಂಡನ್, ಉಷಾ ಉಡುಪಿ, ಗುಣವತಿ ಬೆಳಪು, ಪುಷ್ಪಲತಾ ಉದ್ಯಾವರ, ಕುಶಲ, ಲಕ್ಷ್ಮಿ, ಶ್ವೇತಾ ಉದ್ಯಾವರ, ರಾಜೇಶ್ವರಿ ಉಚ್ಚಿಲ, ಕೇಸರಿ ಶೆಟ್ಟಿ ಉಚ್ಚಿಲ, ಸುನಂದ ಉಚ್ಚಿಲ, ರೋಹನ್ ಉಚ್ಚಿಲ ಹಾಗೂ ಕವನ್ ಉಚ್ಚಿಲ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಧಾರ್ಮಿಕ ಶ್ರದ್ಧೆ, ಸಂಸ್ಕೃತಿಯ ಸಂರಕ್ಷಣೆ ಹಾಗೂ ಸಮಾಜದ ಒಗ್ಗಟ್ಟು ಪುನರುಚ್ಚರಿಸಲಾಯಿತು. ಶೋಭಾಯಾತ್ರೆ ಊರಿನ ಭಕ್ತರಲ್ಲಿ ಉತ್ಸಾಹ ಮೂಡಿಸಿತು



