ಕಾಪು: ನವರಾತ್ರಿಯ ಪವಿತ್ರ ಸಂದರ್ಭ, ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದ ನೇತೃತ್ವದಲ್ಲಿ ಹಿರಿಯಡ್ಕದ ಶ್ರೀ ವೀರಭದ್ರ ದೇವಾಲಯದಲ್ಲಿ ಭಕ್ತಿಯಿಂದ ರಂಗೋಲಿ ಹಾಕಿ ದೀಪ ಬೆಳಗಿಸುವ ಮೂಲಕ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕಾಪು ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಅನುಸೂಯ ಶೆಟ್ಟಿ ನೇತೃತ್ವ ವಹಿಸಿದ್ದರು. ಗೌರವಾಧ್ಯಕ್ಷೆ ರೋಷನ್ ಬಳ್ಳಾಲ್, ಪ್ರಧಾನ ಕಾರ್ಯದರ್ಶಿ ದೀಪ ಶೆಟ್ಟಿ, ಸಾಮಾಜಿಕ ಜಾಲತಾಣ ಸಂಚಾಲಕಿ ಶಶಿಕಲಾ ಶೆಟ್ಟಿ, ಪ್ರಮುಖ ಪದಾಧಿಕಾರಿಗಳಾದ ರೋಹಿಣಿ ಶೆಟ್ಟಿ ,ಸವಿತಾ ಶೆಟ್ಟಿ, ಜಯಂತಿ ಆಚಾರಿ, ಶ್ಯಾಮಲಾ ಶೆಟ್ಟಿ, ವಿನೋದ ಮತ್ತು ಹಲವಾರು ಸಂಘಟಕರವರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಸಾಂಸ್ಕೃತಿಕವಾಗಿ ನವರಾತ್ರಿ ಆಚರಿಸುವ ಮೂಲಕ ಮಹಿಳೆಯರ ಸೃಜನಶೀಲತೆಯನ್ನು ಪ್ರಚೋದಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅದರಲ್ಲಿ ವಿವಿಧ ವರ್ಣಗಳ ರಂಗೋಲಿ ಮೂಲಕ ನವಚೈತನ್ಯ ಬಿಂಬಿಸಲಾಯಿತು.




