ಲಯನ್ಸ್ ಕ್ಲಬ್ ಆಫ್ ಮಂಗಳೂರು ಬಲ್ಮಠ ದಲ್ಲಿ ಲಯನ್ಸ್ ರಿಜಿಯನ್ ಚೇರ್ ಪರ್ಸನ್ ಲಯನ್ ಗಾಯತ್ರಿ ರಾವ್ MJF ಅವರ ಅಧಿಕೃತ ಭೇಟಿ ಹಾಗೂ ಝೋನ್ ಸೋಷಿಯಲ್ ಲಯನ್ ಪ್ರೀತಿ ರೈ ಅವರ ಕಾರ್ಯಕ್ರಮ ನಡೆಯಿತು.

ಲಯನ್ಸ್ ರಿಜಿಯನ್ ಚೇರ್ ಪರ್ಸನ್ ಲಯನ್ ಗಾಯತ್ರಿ ರಾವ್ MJF ಹಾಗೂ ರೀಜನಿನ ಫಸ್ಟ್ ಮ್ಯಾನ್ ಲಯನ್ ಕೆದಿಗೆ ಅರವಿಂದ್ ರಾವ್ MJF ಮತ್ತು ಝೋನ್ ಚೇರ್ ಪರ್ಸನ್ ಲಯನ್ ಪ್ರೀತಿ ರೈ ಅವರು ಸೆಪ್ಟೆಂಬರ್ 23 ರಂದು ಸಂಜೆ 7.30ಕ್ಕೆ ಮಂಗಳೂರಿನ ಎಂಪೈರ್ ಮಾಲ್ನ ಕ್ರೆಡೈ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಅವರು ಲಯನ್ಸ್ ಕ್ಲಬ್ ಆಫ್ ಬಲ್ಮಠದ ಅಧ್ಯಕ್ಷ ಲಯನ್ ಅವಿಲ್ ಡಿಸೋಜಾ, ಕಾರ್ಯದರ್ಶಿ ಲಯನ್ ಪ್ರಸಿಲ್ಲಾ ಡಿಸೋಜಾ, ಖಜಾಂಚಿ ಲಯನ್ ಮೆಲ್ವಿನ್ ಮಸ್ಕರೇನಸ್ ಹಾಗೂ ಕ್ಲಬ್ನ ಎಲ್ಲಾ ಸದಸ್ಯರಿಂದ ಸೌಹಾರ್ದ ಪೂರ್ಣವಾಗಿ ಸ್ವಾಗತಿಸಲ್ಪಟ್ಟರು.

ಈ ದಿನ ಕ್ಲಬ್ನ ವಾರ್ಷಿಕ ಮಾಗಜೀನ್ ಬಿಡುಗಡೆಯಾಯಿತು. ಸಂಪಾದಕಿ ಲಯನ್ ಪ್ರೀತಿ ಕಾಮತ್ ಅವರು ಈ ಮೂಲಕ 3 ಲಕ್ಷ ರೂಪಾಯಿ ಸಂಗ್ರಹವಾಗಿದೆ ಎಂದು ಘೋಷಿಸಿದರು. ಇವು ಸಂಪೂರ್ಣವಾಗಿ ಸಮಾಜಮುಖಿ ಸೇವಾ ಚಟುವಟಿಕೆಗಳಿಗೆ ಬಳಸಲಾಗುತ್ತದೆ ಎಂಬ ಭರವಸೆ ನೀಡಿದರು.

ಈ 40 ವರ್ಷದ ಹಳೆಯ ಕ್ಲಬ್ಗೆ 2 ಹೊಸ ಸದಸ್ಯರನ್ನು ಸೇರಿಸಲಾಯಿತು. ಇದರೊಂದಿಗೆ ಕ್ಲಬ್ ಸದಸ್ಯರ ಸಂಖ್ಯೆ 44ಕ್ಕೆ ಏರಿತು. ಈ ದಿನ ವಿವಿಧ ಅರ್ಥ ಪೂರ್ಣ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.
RC ಲಯನ್ ಗಾಯತ್ರಿ ರಾವ್ ಹಾಗೂ ZC ಲಯನ್ ಪ್ರೀತಿ ರೈ ಅವರು ಸಮಾಗಮದಲ್ಲಿ ಹಾಜರಾಗಿದ್ದವರಿಗೆ ಪ್ರಾಸಂಗಿಕ ಸಂದೇಶಗಳನ್ನು ನೀಡಿದರು. ಕಾರ್ಯಕ್ರಮ ಸ್ನೇಹ ಭಾವನೆಯಲ್ಲಿ ಭೋಜನದೊಂದಿಗೆ ಮುಕ್ತಾಯವಾಯಿತು.




