ಮಂಗಳೂರು, ಸೆಪ್ಟೆಂಬರ್ 16: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಹೊನ್ನಕಟ್ಟೆ – ಕಾನಾ ರೈಲ್ವೆ ಮೇಲ್ಸೇತುವೆಯಲ್ಲಿ ಕಾಂಕ್ರೀಟೀಕರಣ ಕಾರ್ಯ ಪ್ರಾರಂಭವಾಗುತ್ತಿರುವುದರಿಂದ, ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 16ರವರೆಗೆ, ಒಟ್ಟು 30 ದಿನಗಳ ಕಾಲ ಸೇತುವೆ ಮೇಲೆ ಎಲ್ಲಾ ರೀತಿಯ ವಾಹನ ಸಂಚಾರ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಬದಲಿ ಮಾರ್ಗವಿವರ:
➡️ ಮಂಗಳೂರು → ಎಂ.ಆರ್.ಪಿ.ಎಲ್ (MRPL) ಕಡೆಗೆ ಹೋಗುವ ವಾಹನಗಳು:
- ಹೊಸಬೆಟ್ಟು – ಸುರತ್ಕಲ್ ಜಂಕ್ಷನ್ ಮಾರ್ಗವಾಗಿ ಸಾಗಬೇಕು.
➡️ MRPL → ಮಂಗಳೂರು ಕಡೆಗೆ ಬರುವ ವಾಹನಗಳು:
- MRPL – ಸುರತ್ಕಲ್ ಜಂಕ್ಷನ್ – ಎನ್.ಹೆಚ್ 66 ಸರ್ವಿಸ್ ರಸ್ತೆ – ಗೋವಿಂದಾಸ್ ಮೂಲಕ ಸಾಗಬೇಕು.
ಸುರತ್ಕಲ್–ಗೋವಿಂದದಾಸ್ ಮಾರ್ಗದಲ್ಲಿ ಹೆಚ್ಚುವರಿ ನಿಯಂತ್ರಣೆ:
- ಸರ್ವಿಸ್ ರಸ್ತೆಯಲ್ಲಿ ನಿಲುಗಡೆ ಸಂಪೂರ್ಣ ನಿರ್ಬಂಧ.
- ಗೋವಿಂದದಾಸ್ → ಸುರತ್ಕಲ್ ದಿಕ್ಕಿನಲ್ಲಿ ಮಾತ್ರ ಒಂದು ದಿಕ್ಕಿನ ಸಂಚಾರಕ್ಕೆ ಅನುಮತಿ
- ದಟ್ಟಣೆಯ ಸಮಯದಲ್ಲಿ (ಬೆಳಿಗ್ಗೆ 8 ರಿಂದ 9, ಸಂಜೆ 4 ರಿಂದ 6):
MRPL, HPSL, BASF ಮುಂತಾದ ಕೈಗಾರಿಕಾ ಸಂಸ್ಥೆಗಳ ವಾಹನಗಳ ಸಂಚಾರ ನಿಷೇಧ.
ಸಾರ್ವಜನಿಕರಿಗೆ ಮನವಿ:
ಮಹಾನಗರಪಾಲಿಕೆ ಆಯುಕ್ತರು ಸಾರ್ವಜನಿಕರು ಹಾಗೂ ವಾಹನ ಚಾಲಕರಿಗೆ ಈ ತಾತ್ಕಾಲಿಕ ಬದಲಾವಣೆಗಳನ್ನು ಗಮನಿಸಿ ಸಹಕರಿಸಲು ಕೋರಿದ್ದಾರೆ. ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ, ಮುಂಬರುವ ದಿನಗಳಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಲಾಗಿದೆ.
