ಧ್ವನಿ ಬೆಳಕು ಮಾಲಕರ ಸಂಘ, ಮಂಗಳೂರು ತಾಲೂಕು (ರಿ) ಇದರ ಕಾವೂರು ವಲಯದ ಆಶ್ರಯದಲ್ಲಿ ತೃತೀಯ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮ್ 2025 ಧ್ವನಿ ಬೆಳಕು ಮಾಲಕರ ಸಂಗಮ ಕಾರ್ಯಕ್ರಮ ಕಾವೂರು ಕೇಂದ್ರ ಮೈದಾನದಲ್ಲಿ ದಿನಾಂಕ- 13-9-2025,ಶನಿವಾರ,ಸಂಜೆ 7 ಗಂಟೆಗೆ ಸರಿಯಾಗಿ ಸಭಾ ಕಾರ್ಯಕ್ರಮ ನಡೆಯಿತು, ಈ ಕಾರ್ಯಕ್ರಮವನ್ನು ಮುಲ್ಕಿ ಮೂಡಬಿದ್ರಿ ಶಾಸಕರಾದಂತಹ ಶ್ರೀ ಉಮನಾಥ್ ಕೋಟ್ಯಾನ್ ಇವರು ಉದ್ಘಾಟಿಸಿ, ಮಾತನಾಡಿ, ಧ್ವನಿ ಬೆಳಕು ಮಾಲಕರ ಸಮಸ್ಯೆಯೂ ನನಗೆ ತಿಳಿದಿದೆ, ಇವರ ಜೀವನ ಕಷ್ಟದ ಜೀವನ, ನಿಮ್ಮ ಸಂಘಟನೆ ಇರುವುದರಿಂದ ನಿಮ್ಮ ಒಗ್ಗಟ್ಟು, ಎದ್ದು ಕಾಣುತ್ತಿದೆ, ಈಗಿನ ಪ್ರಸ್ತುತ ಸಮಸ್ಯೆಗಳಿಗೆ ಸಂಘಟನೆ ಇರುವುದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರು, ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ವೈ ಭರತ್ ಶೆಟ್ಟಿ ಮಾತನಾಡಿ ನಿಮ್ಮ ಸಮಸ್ಯೆಯನ್ನು ಸದನದಲ್ಲಿ ನಾವು ಧ್ವನಿಯೆತ್ತಿದ್ದೇವೆ, ನಿಮ್ಮ ಜೊತೆ ಯಾವಾಗಲೂ ನಾವು ಇರುತ್ತೇವೆ ಎಂದರು, ಧ್ವನಿ ಬೆಳಕು ಮಾಲಕರ ಸಂಘದ ಅಧ್ಯಕ್ಷರಾದ ಬೆನಟ್ ಡಿ ಸಿಲ್ವ ಮಾತನಾಡಿ ಕಾರ್ಯಕ್ರಮಕೆ ಶುಭ ಹಾರೈಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಜೇಶ್ ಅಮೀನ್ ಪೊರ್ಕೊಡಿ ಇವರು ವಹಿಸಿದ್ದರು, ಅತಿಥಿಗಳಾಗಿ ಶ್ರೀ ಲೊಯ್ ನೋರೋನೋ ಮಾಲಕರು ಸಿಂಪೋನಿ, ಮೂಸಬ್ಬ ಮಾಲಕರು ಸುಪ್ರೀಂ ಲೈಟ್ಸ್, ಶ್ರೀ ಕಿಶೋರ್ ಸುವರ್ಣ ಮೊಸರು ಕುಡಿಕೆ ಸಮಿತಿ ದಾನದತ್ತಿ ಪ್ರತಿಷ್ಠಾನ, ಸುಮಂತ್ ರಾವ್ ಕಾವೂರ್, ಲೋಕೇಶ್ ಭಂಡಾರಿ ಕಾವೂರು,ಚಂದ್ರಹಾಸ ಕೈಕಂಬ, ಜಗದೀಶ್ ಭಟ್, ಮಾಲಕರು F T R ಮ್ಯೂಸಿಕ್ ಸಿಸ್ಟಮ್,ಸುಕುಮಾರ್, ಸಂದೀಪ್ ಪೂಜಾರಿ, ನಿತ್ಯಾನಂದ ಮಂಗಳೂರು,ಇವರು ಭಾಗವಹಿಸಿದರು, ಈ ಕಾರ್ಯಕ್ರಮವನ್ನು ಪ್ರಿಯಾಹರೀಶ್ ನಿರೂಪಿಸಿ, ವಿಶ್ವನಾಥ ದೇವಾಡಿಗ ಸ್ವಾಗತಿಸಿ, ದಾಮೋದರ್ ಭಾಗವತ್, ಧನ್ಯವಾದವನ್ನು ಮಾಡಿದರು. ನಂತರ ಸುನೀತಾ, ಅಶ್ವಥ್ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ನಡೆಯಿತು ನಂತರ ಚಾ – ಪರ್ಕ ಕಲಾವಿದರಿಂದ ಎನ್ನನೇ ಕಥೆ ಎಂಬ ನಾಟಕ ತುಂಬಿದ ಕಲಾಭಿಮಾನಿಗಳೊಂದಿಗೆ ಯಶಸ್ವಿಯಾಗಿ ನಡೆಯಿತು.
