ಇತ್ತೀಚೆಗೆ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ವತಿಯಿಂದ ಬಜ್ಪೆ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಬಜ್ಪೆ ನಾಗರಿಕರ ಹಿತ ರಕ್ಷಣೆಯ ಬಗ್ಗೆ ನಡೆಸಿ, ಬಜ್ಪೆ ಪೇಟೆಯ ಸರ್ವಾಂಗೀಣ ಅಭಿವೃದ್ದಿ, ಬೆಳೆಯುತ್ತಿರುವ ಬಜ್ಪೆ ಪಟ್ಟಣ ಪಂಚಾಯತ್ನೊಳಗೊಂಡಂತೆ,
ಸಮೀಪದ 4 ಗ್ರಾಮ
ಪಂಚಾಯತ್ ಸೇರಿಸಿಕೊಂಡು, ಬಜ್ಪೆ ಪ್ರಾಥಮಿಕ ಅರೋಗ್ಯ ಕೇಂದ್ರವನ್ನು ,
ಸಮುದಾಯ ಅರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸುವುದರ ಬಗ್ಗೆ ರಾಜಕೀಯ ಪಕ್ಷಗಳು, ನಮಗೆ ಇದುವರೆಗೆ ಆಶ್ವಾಸನೆ ಕೊಟ್ಟದು ಸಾಕು, ನಾವು ಇನ್ನೂ ತಡಮಾಡದೆ ಹಿತ ರಕ್ಷಣಾ ವೇದಿಕೆಯ ಮುಂದಾಳತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ತೀರ್ಮಾನಿಸಲಾಯಿತು.
ಬಜ್ಪೆ ಪೇಟೆಯಲ್ಲಿ ಸುಸಜ್ಜಿತ ಬಸ್ಸು ನಿಲ್ದಾಣ ನಿರ್ಮಿಸುವಲ್ಲಿ ಮನವಿ ಕೊಡುವುದಾಗಿ ತೀರ್ಮಾನಿಸಿ, ನೆನಗುದ್ದಿಗೆ ಬಿದ್ದ ಇಂದಿರಾ ಕ್ಯಾಂಟೀನ್ ಅದಷ್ಟು ಬೇಗ ಉದ್ಘಾಟನೆ ಮಾಡಿಸಿ,ಸಾರ್ವಜನಿಕರಿಗೆ ಅನುಕೂಲಮಾಡಿಕೊಡುವ ವಿಷಯದಲ್ಲಿ ಪ್ರಯತ್ನಿಸಲು ತಿರ್ಮಾಣಕೈಗೊಳ್ಳಲಾಯಿತು.
ಬಜ್ಪೆ ಪೇಟೆಯ ಪ್ರತಿಯೊಂದು ಅಭಿವೃದ್ಧಿಯಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಸಂಪೂರ್ಣವಾಗಿ ಸೇರಿಕೊಂಡು, ಸಂಬಂಧ ಪಟ್ಟ ಸಚಿವರು, ಅಧಿಕಾರಿಗಳು ಬೇಟಿಯಾಗುವುದಾಗಿ ನಿರ್ಣಯಿಸಲಾಯಿತು.
ವಿಶೇಷವಾಗಿ ತಮ್ಮ ಗ್ರಾಮದ ಸ್ವಂತ ಭೂಮಿಯನ್ನು ಕೊಟ್ಟು ತ್ಯಾಗ ಮಾಡಿದ ಬಜ್ಪೆ ಪ್ರದೇಶಕ್ಕೆ MRPL ಮತ್ತು MSEZ ನಿಂದ ಇದುವರೆಗೆ ಹೇಳಿಕೊಳ್ಳುವಂಥ ಯಾವುದೇ ಕೆಲಸ ಕಾರ್ಯ ಆಗದಿರುವುದರ ಬಗ್ಗೆ ಸಭೆಯಲ್ಲಿ ನಾಯಕರುಗಳು ಆಕ್ರೋಶ ವ್ಯಕ್ತಪಡಿಸಿದರು.
ಬಜ್ಪೆ ಪ್ರದೇಶಯನ್ನು ಸುಂದರ ಬಜ್ಪೆಯಾನ್ನಾಗಿ ನಿರ್ಮಾಣ ಮಾಡಬೇಕೆಂದು ಬಜ್ಪೆ ನಾಗರಿಕರ ವೇದಿಕೆಯ ಕನಸಾಗಿದ್ದು, ಇದಕ್ಕೆ ಬಜ್ಪೆಯ ನಾಗರಿಕರ ಸಂಪೂರ್ಣ ಬೆಂಬಲ ಪಡೆದು ಕೆಲಸ ಮಾಡುವುದಾಗಿ ಸರ್ವರ ಅಭಿಪ್ರಾಯ ಕ್ರೂಡೀಕರಿಸಲಾಯಿತು. ಈ ಸಂದರ್ಭದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕಾರದ ಸಿರಾಜ್ ಬಜ್ಪೆ, ಸಹ ಸಂಚಾಲಕರಾದ ಇಸ್ಮಾಯಿಲ್ ಎಂಜಿನಿಯರ್, ದಲಿತ ಸಂಘದ ರಾಜ್ಯ ಸಂಚಾಲಕರಾದ ದೇವದಾಸ್, ಜಿಲ್ಲಾ INTUC ಪ್ರಧಾನ ಕಾರ್ಯದರ್ಶಿ ನಿಸಾರ್ ಕರಾವಳಿ, ಕಾಂಗ್ರೆಸ್ ಮುಖಂಡರಾದ ದೀಪಕ್ ಪೆರ್ಮುದೆ, ವಕೀಲರಾದ ವಿನೋದರ ಪೂಜಾರಿ, ಹಿರಿಯ ನಾಯಕರುಗಳಾದ ರಾಬರ್ಟ್ ರೇಗೊ, ಮಾದವ ಅಮೀನ್, ಮೊನಕ, ಸಲೀಮ್ ಹಾಜಿ, ಥೋಮಸ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ವಿಜಯ ಗೋಪಾಲ ಸುವರ್ಣ, ಮಾಲತಿ, ಶಾಂತ ಕಂದಾವರ, ಗ್ರಾಮ ಪಂಚಾಯತ್ ಮಾಜಿ ಸದಸ್ಯರುಗಳು
ಕುಡುಬಿ ಸಮಾಜದ ನಾಯಕರು, ದಲಿತ ಸಂಘ, ಕೊರಗ ಸಮಾಜ, SDPI ನಾಯಕರುಗಳು, ಸಾಮಾಜಿಕ ಕಾರ್ಯಕರ್ತರು, ಊರ ನಾಗರಿಕರು ಮುಂತಾದವರು ಉಪಸ್ಥಿತರಿದ್ದರು .
