ಮಂಗಳೂರು: ಅಖಿಲ ಭಾರತ ತುಳು ಒಕ್ಕೂಟದ ಮಹಾಸಭೆಯು ಸಪ್ಟೆಂಬರ್ 21 ಆದಿತ್ಯವಾರ ಕಾವೂರು ಗಾಂಧಿನಗರದಲ್ಲಿರುವ ಮುಗ್ರೋಡಿ ಎನ್ಕ್ಲೇವ್ನ ಒಕ್ಕೂಟದ ಕಛೇರಿ ಸಭಾಂಗಣದಲ್ಲಿ ಬೆಳಿಗ್ಗೆ 10.30ರಿಂದ ಅಧ್ಯಕ್ಷ ಎ.ಸಿ. ಭಂಡಾರಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವುದು ಎಂದು ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಯಿತು.
ಅಖಿಲ ಭಾರತ ತುಳು ಒಕ್ಕೂಟ ದೇಶ ವಿದೇಶಗಳಲ್ಲಿ 48 ತುಳು ಸೇವಾ ಸಂಘ ಸಂಸ್ಥೆಗಳು ಇದರ ಸದಸ್ಯರಾಗಿ ತಮ್ಮ ತಮ್ಮ ಕ್ಷೇತ್ರದಲ್ಲಿ ನಿರಂತರ ತುಳು ಸಂಬಂಧಿ ಚಟುವಟಿಕೆಗಳನ್ನು ನಡೆಸುತ್ತಾ ತುಳು ಭಾಷೆ, ಸಂಸ್ಕೃತಿ, ಸಂಪ್ರದಾಯ, ಅಭಿವೃದ್ಧಿಯನ್ನು ಬೆಳೆಸುವಲ್ಲಿ ತಮ್ಮನ್ನು ತೊಡಗಿಸಿ ಯಶಸ್ವಿಗೊಳಿಸಿದ್ದಾರೆ.
ಮಹಾಸಭೆಯಲ್ಲಿ ಮುಖ್ಯವಾಗಿ ತುಳು ಭಾಷೆಗೆ ಮಾನ್ಯತೆ, ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಖಿಲ ಭಾರತ ತುಳು ಒಕ್ಕೂಟ ಜಂಟಿಯಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳು ಭಾಷೆ ಶಾಲಾ ಕಾಲೇಜಿನ ಸಂಖ್ಯೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಚರ್ಚಿಸಿ, ಸೂಕ್ತ ರೂಪುರೇಷೆ ಹಾಗೂ ನಿರ್ಧಾರವನ್ನು ತೆಗೆದುಕೊಳ್ಳಲಿದೆ.
ಅಖಿಲ ಭಾರತ ತುಳು ಒಕ್ಕೂಟ ಹಾಗೂ ಇದರ ಸದಸ್ಯ ಕೂಟಗಳು 25-26 ಸಾಲಿನಲ್ಲಿ ಹಮ್ಮಿಕೊಳ್ಳಲಿರುವ ಕಾರ್ಯಕ್ರಮ ಸಮಾರಂಭಗಳ ವಿಚಾರ ವಿನಿಮಯ ಹಾಗೂ ಅನುಮೋದನೆಯನ್ನು ಮಹಾಸಭೆಯಲ್ಲಿ ಪಡೆಯಲಿದೆ.
ಒಕ್ಕೂಟ ಪ್ರಮುಖರಾದ ಧರ್ಮಪಾಲ ದೇವಾಡಿಗ ಮುಂಬೈ, ಶಶಿಧರ ಶೆಟ್ಟಿ ಬರೋಡ, ಇಂದ್ರಾಳಿ ಜಯಕರ ಶೆಟ್ಟಿ, ದಿನೇಶ್ ಹೆಗ್ಡೆ ಬಿ. ಬೆಂಗಳೂರು, ಪ್ರವೀಣ್ ಶೆಟ್ಟಿ ಪುಣೆ, ಕದ್ರಿ ನವನೀತ್ ಶೆಟ್ಟಿ , ಯೋಗೀಶ್ ಶೆಟ್ಟಿ ಜೆಪ್ಪು , ಪಿ.ಎ.ಪೂಜಾರಿ, ವಿಜಯಲಕ್ಷ್ಮಿ ಬಿ .ಶೆಟ್ಟಿ, ಗಂಗಾಧರ ಕಿದಿಯೂರು ಉಡುಪಿ, ಗಣೇಶ್ ಮಲ್ಲಿ , ಸುಧಾಕರ ಆಳ್ವ , ಜಯಂತಿ ಬಂಗೇರ, ಚಂದ್ರಶೇಖರ್ ಸುವರ್ಣ, ಸುಖಲಾಕ್ಷಿ ಸುವರ್ಣ ಮಂಗಳೂರು , ಶಮೀನ ಆಳ್ವ ಮುಲ್ಕಿ ಮತ್ತು ಎಲ್ಲಾ 48 ಸಂಘಟನೆಯ ಪ್ರತಿನಿಧಿಗಳು ಮಹಾಸಭೆಯಲ್ಲಿ ಭಾಗವಹಿಸಲಿರುವರು ಎಂದು ಒಕ್ಕೂಟದ ಮಾಧ್ಯಮ ವಕ್ತಾರ ಮುಲ್ಕಿ ಕರುಣಾಕರ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
