ಮಂಗಳೂರು : ಮಂಗಳೂರು ನಗರದ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿ ಸುನೀಲ್ ಎಂಬಾತನನ್ನು ಬರ್ಕೆ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಸೆಪ್ಟೆಂಬರ್ 1ರಂದು ಸಂಜೆ 4 ಗಂಟೆ ಸಮಯದಲ್ಲಿ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಬರ್ಕೆ ಠಾಣೆಯ ಉಪನಿರೀಕ್ಷಕ ವಿನಾಯಕ ರವರ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಮಂಗಳೂರಿನ ಸುಲ್ತಾನ್ ಬತ್ತೇರಿಯಲ್ಲಿ KA-19 HJ1184 ಸಂಖ್ಯೆಯ ಬಿಳಿ ಸ್ಕೂಟರ್ನಲ್ಲಿ ಸಂಚರಿಸುತ್ತಿದ್ದ ಸುನೀಲ್ ಎಂಬಾತನು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಬಂಧಿಸಲಾಯಿತು.
ಬಂಧಿತನಿಂದ ಒಟ್ಟು 1 ಕಿಲೋ 394 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ಇದು ವಾಣಿಜ್ಯ ಪ್ರಮಾಣದ ಮಾದಕ ವಸ್ತುವಾಗಿ ಗುರುತಿಸಲಾಗಿದೆ. ಆರೋಪಿಯು ಯಾವುದೇ ಪರವಾನಿಗೆ ಇಲ್ಲದೇ, NDPS (Narcotic Drugs and Psychotropic Substances Act) ಕಾಯ್ದೆ ಉಲ್ಲಂಘಿಸಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ವಶದಲ್ಲಿರುವ ಸೊತ್ತುಗಳ ವಿವರ:
25 ಗ್ರಾಂ ತೂಕದ ಗಾಂಜಾ ಪ್ಯಾಕೆಟ್ – 3
431 ಗ್ರಾಂ ತೂಕದ ಗಾಂಜಾ
888 ಗ್ರಾಂ ತೂಕದ ಗಾಂಜಾ
ಖಾಕಿ ಬಣ್ಣದ ಗಮ್ ಟೆಪ್ನಿಂದ ಸುತ್ತಿದ ಪ್ಯಾಕೆಟ್ – 1
ಡಿಜಿಟಲ್ ತೂಕ ಮಾಪಕ ಯಂತ್ರ – 1
ಪಾರದರ್ಶಕ ಜಿಪ್ ಲಾಕ್ ಕವರ್ಗಳು – 6
ನಗದು ರೂ. 500/-
ನೀಲಿ ಬಣ್ಣದ ಪರ್ಸ್ – 1
KA-19 HJ1184 ನಂಬರ್ನ ಬಿಳಿ ಬಣ್ಣದ ಸ್ಕೂಟರ್ – 1
ಆರೋಪಿ ಸುನೀಲ್ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿಸಲಾಗಿದೆ.

