ಮುಂಬೈ, ಸೆಪ್ಟೆಂಬರ್ 2: ಜಯ ಸುವರ್ಣ ಸಂಸ್ಮರಣೆಯ ಅಂಗವಾಗಿ ಪ್ರದಾನವಾಗುವ ‘ಜಯ ಸಿ ಸುವರ್ಣ ಜನಸೇವಾ ಪುರಸ್ಕಾರ ಶಿವಗಿರಿ ಸನ್ಮಾನ ಪ್ರಶಸ್ತಿ ಗೆ’ಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿ, ಸೆಪ್ಟೆಂಬರ್ 7 ರಂದು (ಭಾನುವಾರ) ಮುಂಬೈಯ ಗೋರೆಗಾಂವ್ ಪೂರ್ವದ ಜಯಲೀಲಾ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯುವ 171ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ, ಗಣ್ಯರ ಸಮ್ಮುಖದಲ್ಲಿ ಪ್ರದಾನವಾಗಲಿದೆ. ಈ ಸಮಾರಂಭವನ್ನು ಜಯ ಸಿ ಸುವರ್ಣ ಅಭಿಮಾನಿಗಳು ಮತ್ತು ಮುಂಬಯಿ ಬಿಲ್ಲವರು ಸಂಯುಕ್ತವಾಗಿ ಆಯೋಜಿಸಿದ್ದಾರೆ.
ಐಕಳ ಹರೀಶ್ ಶೆಟ್ಟಿ ಅವರು ವಿಶ್ವಮಟ್ಟದಲ್ಲಿ ಸಮಾಜಸೇವೆಯ ಮೂಲಕ ಖ್ಯಾತಿ ಪಡೆದವರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ನೂರಕ್ಕೂ ಅಧಿಕ ಗೌರವಗಳು, ಸನ್ಮಾನಗಳು ಹಾಗೂ ಪುರಸ್ಕಾರಗಳನ್ನು ಪಡೆದಿರುವ ಶೆಟ್ಟಿ ಅವರು, ತಮ್ಮ ಸಂಘಟನಾ ಕೌಶಲ್ಯ ಹಾಗೂ ಜನಪರ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಮಹತ್ವಪೂರ್ಣ ಸ್ಥಾನ ಪಡೆಯುತ್ತಿದ್ದಾರೆ.
ಅವರ ಈ ಸೇವಾಭಾವನೆಗೆ ಗೌರವವಾಗಿ ಈ ಬಾರಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
