ಮಂಗಳೂರಿನ ಬಂಟ್ಸ್ ಹಾಸ್ಟೇಲ್ ನ ಓಂಕಾರ ನಗರದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಮಂಗಳೂರು ಇವರ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭವು ಭಕ್ತಿ-ಭಾವಪೂರ್ಣ ವಾತಾವರಣದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, “ಗಣೇಶ ಚತುರ್ಥಿಗೆ ಐತಿಹಾಸಿಕ ಹಿನ್ನೆಲೆ ಇದೆ. ಗಣೇಶನಲ್ಲಿ ಪರಕೀಯರನ್ನು ದೂರ ಮಾಡುವ ಶಕ್ತಿ ಇದೆ. ಆದ್ದರಿಂದ ಗಣೇಶೋತ್ಸವವನ್ನು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವನ್ನಾಗಿಸದೆ, ನಗರ ಸ್ವಚ್ಛತೆಯ ಸಂಕಲ್ಪದೊಂದಿಗೆ ಆಚರಿಸಬೇಕು. ಪರಿಸರ ಕಾಳಜಿ ಇರಲಿ,” ಎಂದರು.

ಧ್ವಜಾರೋಹಣವನ್ನು ಲೆ.ಕ. ರಮಾನಾಥ ಶೆಟ್ಟಿ ಮತ್ತು ಕ್ಷಮಾ ರಮಾನಾಥ ಶೆಟ್ಟಿ ನೆರವೇರಿಸಿದರು. ತೆನೆ ವಿತರಣೆ ಕಾರ್ಯವನ್ನು ಡಾ. ಮಹಾಬಲ ರೈ ಮತ್ತು ಮಲ್ಲಿಕಾ ಎಂ. ರೈ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ವಹಿಸಿದ್ದರು. ಸಮಾರಂಭದಲ್ಲಿ ಹಲವಾರು ಬಂಟರ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು. ಪುತ್ತೂರು, ಬಂಟ್ವಾಳ, ಬಜಪೆ, ಜಪ್ಪಿನಮೊಗರು ಮತ್ತು ಕುಳವಾರು-ಕೆಲೆಂಜಾರು ಬಂಟರ ಸಂಘಗಳ ಮುಖಂಡರು ಉಪಸ್ಥಿತರಿದ್ದರು.

ಈ ಸಂದರ್ಭ ಕಾಪು ಶ್ರೀ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಾಸುದೇವ ಶೆಟ್ಟಿಯನ್ನು ಸನ್ಮಾನಿಸಲಾಯಿತು.

ಸ್ವಾಗತ ಭಾಷಣವನ್ನು ಅಜಿತ್ ಕುಮಾರ್ ಮಾಲಾಡಿ ಮಾಡಿದ್ದು, ವಂದನೆಯನ್ನು ಅಶ್ವತ್ಥಾಮ ಹೆಗ್ಡೆ ಅಲ್ತಾರು ಸಲ್ಲಿಸಿದರು. ಕಾರ್ಯಕ್ರಮವನ್ನು ಭಾಗ್ಯರಾಜ್ ಶೆಟ್ಟಿ ನಿರ್ವಹಿಸಿದರು.

ಲೆ.ಕ. ರಮಾನಾಥ ಶೆಟ್ಟಿ ಮತ್ತು ಕ್ಷಮಾ ರಮಾನಾಥ ಶೆಟ್ಟಿ ಧ್ವಜಾರೋಹಣ ಗೈದರು. ಡಾ ಮಹಾಬಲ ರೈ ಮತ್ತು ಮಲ್ಲಿಕಾ ಎಂ ರೈ ತೆನೆ ವಿತರಿಸಿದರು.
