ಮಂಗಳೂರು ಮರೋಳಿಯ ಲಾಲ್ ಬಹಾದುರ್ ಶಾಸ್ತ್ರಿ ಲೇಔಟ್ ನ ಸುದರ್ಶನ್ ಬಿ.ರೈ ಹಾಗೂ ಸುಶ್ಮಿತಾ ಎಸ್. ರೈ ಅವರ ಪುತ್ರನಾಗಿರುವ ಸುರಾಗ್ ಎಸ್. ರೈ ತಂದೆ ಯೊಂದಿಗೆ ಮೊಬೈಲ್ ನಲ್ಲಿ ರೀಲ್ಸ್ ನೋಡಿ ಆಕರ್ಷಿತ ನಾಗಿ ತಾನು ಮೋಟೋ ಕ್ರಾಸ್ ಡರ್ಟ್ ಬೈಕ್ ರೇಸ್ ನಲ್ಲಿ ಪಾಲ್ಗೊಂಡು ಮಡಂತ್ಯಾರು ಬಳ್ಳಮಂಜ ಮೊಸರುಕುಡಿಕೆಯಲ್ಲಿಮೋಟೋ ಕ್ರಾಸ್ ಡರ್ಟ್ ಬೈಕ್ ರೇಸ್ ನಲ್ಲಿ ಹವಾ ಎಬ್ಬಿಸಿದ ಸುರಾಗ್ ಬೈಕ್ ರೇಸ್ ನೋಡಿ ಜನರು ಶಹಬ್ಬಾಸ್ ಗಿರಿ ಮೆಚ್ಚುಗೆ ವ್ಯಕ್ತಪಡಿಸಿದರು.


ಈ ಸಾಹಸ ಮೆಚ್ಚಿ ದಿನಾಂಕ 21-08-2025 ರಂದು ಸಂಜೆ 4.30 ಕ್ಕೆ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಕಚೇರಿಯಲ್ಲಿ 6 ವರ್ಷದ ಬಾಲಕ ಸುರಗ್ ಎಸ್ ರೈ ಗೆ ತುಳುನಾಡ ರಕ್ಷಣಾ ವೇದಿಕೆ ಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಶಾಲು ಹೊದಿಸಿ ಮಾಲೇ, ಫಲ ಪುಷ್ಪ ಮತ್ತು ಟ್ರೋಫಿ ನೀಡಿ ಸನ್ಮಾನಿಸಲಾಯಿತು. ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಕೇಂದ್ರೀಯ ಮಂಡಳಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಮಾತನಾಡಿದರು. ತುಳುನಾಡ ರಕ್ಷಣಾ ವೇದಿಕೆ ಮುಖಂಡರುಗಳಾದ ಕ್ಲೀಟಸ್ ಲೋಬೊ, ಮುನೀರ್ ಮುಕ್ಕಚೇರಿ, ಜೋಸೆಫ್ ಲೋಬೊ, ಸುಧಾಕರ್ ಆಳ್ವ, ಫೇರಿ ಡಿಸೋಜ, ಮಮತಾ ಗಟ್ಟಿ, ಮಂಗಳ ರಾವ್, ಕೋಚ್ ಕಿರಣ್ ಪೂಜಾರಿ, ಸುದರ್ಶನ್.ಬಿ .ರೈ , ಸುಶ್ಮಿತಾ ರೈ , ಗೈಟನ್ ಮತ್ತಿತರರು ಉಪಸ್ಥಿತರಿದ್ದರು.



