ಉಳ್ಳಾಲ: – ತೊಕ್ಕೊಟ್ಟು ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ನಡೆದ ಮೊಸರುಕುಡಿಕೆ ಉತ್ಸವದ ಮೆರವಣಿಗೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಇಬ್ಬರು ಯುವಕರು ಬಂಧನಕ್ಕೊಳಗಾಗಿದ್ದಾರೆ.
ಅಸೈಗೋಳಿಯ ದೀಪಕ್ ಮತ್ತು ತೊಕ್ಕೊಟ್ಟು ನಿವಾಸಿ ಕಿರಣ್ ಬಂಧಿತ ಆರೋಪಿಗಳಾಗಿದ್ದು, ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ಗಳು 126(2), 132, 74, ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೆರವಣಿಗೆಯ ಟ್ಯಾಬ್ಲೋ ಹಾಗೂ ನಾಸಿಕ್ ಬ್ಯಾಂಡ್ ರಾತ್ರಿ ಸುಮಾರು 11:50ಕ್ಕೆ ಒಳಪೇಟೆ ಪ್ರದೇಶ ತಲುಪಿದ್ದು, ಯುವಕರ ಗುಂಪು ನೃತ್ಯ ಮಾಡುತ್ತಿದ್ದ ಕಾರಣ ಟ್ಯಾಬ್ಲೋಗಳ ಮುಂದೆ ಸಾಗುವಿಕೆ ವಿಳಂಬವಾಗಿತ್ತು. ಮಹಿಳಾ ಪೇದೆಗಳು ನಿಯಂತ್ರಣಕ್ಕೆ ಮುಂದಾದಾಗ, ದೀಪಕ್ ಅವರು ಅಸಭ್ಯವಾಗಿ ವರ್ತಿಸಿ, ಮಹಿಳಾ ಸಿಬ್ಬಂದಿಗೆ ಬೆದರಿಕೆ ಒಡ್ಡಿದ ಕಾರಣ ಪ್ರಕರಣ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳದಲ್ಲಿದ್ದ ಕಿರಣ್ ಕೂಡ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದು, ಇಬ್ಬರೂ ಪೊಲೀಸರ ವಶದಲ್ಲಿದ್ದಾರೆ. ಇವರ ವಿರುದ್ಧ ಮಾನಭಂಗ ಮತ್ತು ಸಾರ್ವಜನಿಕ ಸೇವಕರ ಕಾರ್ಯನಿರ್ವಹಣೆಗೆ ಅಡಚಣೆ ಮಾಡುವ ಹಿನ್ನಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಉಳ್ಳಾಲ ಪೊಲೀಸರು ತಿಳಿಸಿದ್ದಾರೆ.
