79 ನೇ ಸ್ವಾತಂತ್ರೋತ್ಸವದ ಶುಭ ಸಂದರ್ಭದಲ್ಲಿ ಬಜ್ಪೆ ಪಟ್ಟಣ ಪಂಚಾಯತಿನ 4ನೇ ವಾರ್ಡಿನ ಕಿನ್ನಿಪದವು ಝರಾ ಸೆಂಟರ್ ಮುಂದುಗಡೆ “ಗಾಂಧಿ ಪಾರ್ಕ್”
ಹೆಸರಿನಲ್ಲಿ ಉದ್ಯಾನವನವನ್ನು ಬಜ್ಪೆ ಲೆಜೆಂಡ್ಸ್ ಟ್ರಸ್ಟ್ (ರಿ) ಇವರ ನಿರ್ವಹಣೆಯೊಂದಿಗೆ ಮುಡಾ ಆಯುಕ್ತರಾದ ಮೊಹಮದ್ ನಜೀರ್ ರವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಈ ಉದ್ಯಾನವನಕ್ಕೆ ಮುಡಾದಿಂದ ಬೇಕಾಗುವ ಮೂಲ ಸೌಕರ್ಯಕ್ಕೆ ಸಹಾಯ ಮಾಡುವು
ದಾಗಿ ತಿಳಿಸಿದರು .ವಾರ್ಡಿನ ಮಾಜಿ ಸದಸ್ಯರು,ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕರು ಮತ್ತು ಈ ಉದ್ಯಾನವನದ ಮೂಲ ಕಾರಣೀಕರ್ತರಾದ ಸಿರಾಜ್ ಬಜ್ಪೆ ಮಾತನ್ನಾಡಿ,ಪಾಲು ಬಿದ್ದ ಈ ಪಾರ್ಕಿನ ಅಭಿವೃದ್ದಿಗಾಗಿ,ಈ ಭಾಗದ ಜನರ ಬೇಡಿಕೆಗೆ ಅನುಗುಣವಾಗಿ ನಿರ್ವಹಣೆ ಮಾಡಲು ಮುಂದೆ ಬಂದಿರುವ ಬಜ್ಪೆ ಲೆಜೆಂಡ್ಸ್ ಟ್ರಸ್ಟ್ (ರಿ )ರವರ ಅಧ್ಯಕ್ಷರು ಮತ್ತು ಸರ್ವ ಸದಸ್ಯರನ್ನು ಅಭಿನಂದಿಸಿದರು.ಈ ಸಂದರ್ಭದಲ್ಲಿ ಬಜ್ಪೆ ಲೆಜೆಂಡ್ಸ್ ಟ್ರಸ್ಟ್ ನ ಅಧ್ಯಕ್ಷರಾದ ಮೊಹಮದ್ ಶಾಫಿ,ಪ್ರಧಾನ
ಕಾರ್ಯದರ್ಶಿಯಾದ ಅಖ್ತರ್ ಬ್ರೈಟ್,
ಅನಿವಾಸಿ ಭಾರತೀಯ ಉದ್ಯಮಿ ಹೈದರ್ ಅಲಿ ಯುನೈಟೆಡ್
ಹಿರಿಯರಾದ ಮೊನಕ, ಬಜ್ಪೆ ಲೆಜೆಂಡ್ಸ್ ಟ್ರಸ್ಟ್ ನ ಸದಸ್ಯರಾದ ಅಲ್ತಾಫ್ ,ಹಕೀಮ್ ಪ್ಯಾರಾ ,ಖಾದರ್ ಷರೀಫ್ ,ಇಂತಿಯಾಜ್ ಗೋಲ್ಡನ್ ,ಬಿ.ಪಿ.ಆಸೀಫ್,ಅಶ್ರಫ್ ,ರಿಯಾಜ್ ಮತ್ತು ಊರ ನಾಗರಿಕರು ಉಪಸ್ಥಿತರಿದ್ದರು .
