ಸರಕಾರಿ ಶಾಲೆಯ ವಿದ್ಯಾರ್ಥಿಯೆಂಬ ಕೀಳರಿಮೆ ಬೇಡ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರತಿಭೆಯ ಆಗರ ಎಂದು ಸಂಸ್ಥೆಯ ಹಳೆಯ ವಿದ್ಯಾರ್ಥಿ ಹಾಗೂ ಭಾರತೀಯ ಭೂಸೇನೆಯ ಅಧಿಕಾರಿ ಜೂನಿಯರ್ ಕಮಿಷನೇಡ್ ಶ್ರೀ ವಸಂತ ಪೂಜಾರಿಯವರು ಸರಕಾರಿ ಪ್ರೌಢಶಾಲೆ ಮಣಿನಾಲ್ಕೂರಿನಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಗೈದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.

ಹಾಗೆಯೇ ದೇಶ ಸೇವೆಯೇ ಈಶ ಸೇವೆ , ದೇಶಭಕ್ತರಾಗಿ ಬಾಳಿ ಎಂದು ಕರೆಕೊಟ್ಟರು.

ಈ ಶುಭ ಸಮಾರಂಭದಲ್ಲಿ ವಿದ್ಯಾಭಿಮಾನಿಯೊಬ್ಬರು ಎಲ್ಲಾ ವಿದ್ಯಾರ್ಥಿಗಳಿಗೆ ರೂ18000 ಮೌಲ್ಯದ ಊಟದ ಬಟ್ಟಲನ್ನು ದೇಣಿಗೆ ನೀಡಿದರು. ತಮ್ಮ ಮಕ್ಕಳು ಈ ಸಂಸ್ಥೆಯಲ್ಲಿ ಕಲಿತ ಸವಿನೆನಪಿಗಾಗಿ ಊಟದ ಬಟ್ಟಲಿಡುವ ರೂ. 31000 ಮೌಲ್ಯದ ಸ್ಟಿಲ್ ಸ್ಟ್ಯಾಂಡನ್ನು ಶ್ರೀಯುತ ರಂಜಿತ್ ಕುಟುಂಬದವರು ನೀಡಿದರು.

ಹಾಗೆಯೇ ನಮ್ಮ ಸಂಸ್ಥೆಯ 2024 – 25ನೇ ಸಾಲಿನ ಎಸ್.ಎಸ್.ಎಲ್. ಸಿ ವಿದ್ಯಾರ್ಥಿಗಳು ಸಭಾ ಕಾರ್ಯಕ್ರಮಗಳಿಗೆ ಅಗತ್ಯವಿರುವ ರೂ14000 ಮೌಲ್ಯದ ಪೋಡಿಯಂನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಶ್ರೀ ಅಶೋಕ ಶೆಟ್ಟಿ ಕೋಡಿಮಾರು, ಕಾರ್ಯದರ್ಶಿ ಶ್ರೀ ಲೋಕೇಶರವರು ಸ್ವಾತಂತ್ರ್ಯ ದಿನಾಚರಣೆಯ ಶುಭ ಹಾರೈಸಿದರು. SDMC ವಿಶೇಷ ಆಹ್ವಾನಿತರಾದ ಶ್ರೀರಾಮಕೃಷ್ಣ ಮಯ್ಯ ,ಶ್ರೀ ಮಹಾಬಲ ಹೊಳ್ಳ, SDMC ಮಾಜಿ ಅಧ್ಯಕ್ಷರುಗಳಾದ ಶ್ರೀ ರಾಜೇಶ ಶೆಟ್ಟಿ ಮತ್ತು ಮೋಹನ ಟೈಲರ್
SDMC ಸದಸ್ಯರುಗಳಾದ ಶ್ರೀನಾರಾಯಣ ಕುಲಾಲ್, ಶ್ರೀ ಕೊರಗಪ್ಪ, ಶ್ರೀವೆಂಕಪ್ಪ ನಾಯ್ಕ, ಪ್ರಮೀಳಾ, ಹೇಮಲತಾ, ಸೆಕಿನಾ, ಲಕ್ಷ್ಮಿ, ಅಬ್ಬಾಸ್ ಅಂತರ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಶ್ರೀಮತಿವಸುಧಾರವರು ವಹಿಸಿದ್ದರು. ಸಂಸ್ಥೆಯ ಶಿಕ್ಷಕಿ ಪ್ರಿಯಾ ಎನ್ ಸ್ವಾಗತಿಸಿದರು.

ಹಿರಿಯ ಶಿಕ್ಷಕರಾದ ಶ್ರೀಕಾಂತ ಎಂ ಸ್ವಾತಂತ್ರ್ಯ ದಿನಾಚರಣೆಯ ವಿಶೇಷತೆಯ ಕುರಿತು ಮಾತನಾಡಿದರು. ಶಿಕ್ಷಕಿ ರಾಜೇಶ್ವರಿ ವಂದಿಸಿದರು. ಶಿಕ್ಷಕರಾದ ಉದಯಕುಮಾರ ಕಾರ್ಯಕ್ರಮ ನಿರೂಪಿಸಿದರು.

