ಮಂಗಳೂರು : ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಇಂದು ಮಂಗಳಾದೇವಿ ಬಳಿಯ “ಕಾಂತಿ ಚರ್ಚ್ ಹಾಲ್ ನಲ್ಲಿ ಇಂದು ನಡೆಯಿತು.ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ಪಾಂಡೇಶ್ವರ ಉಪ ಪೋಲಿಸ್ ನೀರಿಕ್ಷಕರಾದ ಮಾರುತಿ.ಪಿ ಯವರು ನೆರವೇರಿಸಿದರು.
ಬಳಿಕ ಮಾತನಾಡಿದ ಡಾ.ಅರುಣ್ ಉಳ್ಳಾಲ್ ರವರು ತುಳುನಾಡ ಸಂಸ್ಕೃತಿ, ಸಂಸ್ಕಾರವನ್ನು ಹೊತ್ತು ಆಟಿ ತಿಂಗಳು ಮತ್ತೆ ಬಂದಿದೆ.ಆಟಿ ತಿಂಗಳು ಎಂದರೆ ಸುಮಾರು ಜುಲೈ ತಿಂಗಳಿನಲ್ಲಿ ಬರುವ ಕರ್ಕಾಟಕ ಸಂಕ್ರಮಣದ ಮರುದಿನದಂದು ಶುರುವಾಗಿ ಮುಂದಿನ ಸಿಂಹ ಸಂಕ್ರಮಣದ ವರೆಗೆ. ತುಳು ನಾಡಿನ ಜನರಿಗೆ ಪ್ರತಿಯೊಂದು ತಿಂಗಳು ವಿಶಿಷ್ಟವೇ ವಿಶೇಷವೇ. ಆಟಿ ತಿಂಗಳು ಕೂಡ ಒಂದು ರೀತಿಯಲ್ಲಿ ಪವಿತ್ರವೇ. ಯಾಕೆಂದರೆ ಹಬ್ಬಗಳು ಆರಂಭವಾಗುವುದು ಆಟಿ ತಿಂಗಳ ಆಟಿ ಅಮಾವಾಸ್ಯೆಯಿಂದಲೇ.ಆರ್ಟಿ ತಿಂಗಳಲ್ಲಿ ಕಷ್ಟದ ತಿಂಗಳಾದರೂ ಅದು ಇಷ್ಟದ ತಿಂಗಳು. ಹಿಂದಿನ ಕಾಲದಲ್ಲಿ ಆಟಿ ಅಂದರೆ ಒಂದೇ ಸವನೆ ಮಳೆ ಸುರಿಯುತ್ತಿತ್ತು .ಹಾಗಾಗಿ ಆಟಿ ತಿಂಗಳು ಹೇಗಿರುತ್ತದೋ ಎಂಬ ಭಯ ಜನರನ್ನು ಮೊದಲೇ ಕಾಡುತ್ತಿತ್ತು.ಸುರಿಯುವ ಮಳೆ ನಿಲ್ಲುತ್ತದೋ ಇಲ್ಲವೋ, ಏನೇನೋ ಹಾನಿಯಾಗುತ್ತದೋ, ಬೆಳೆಗಳೆಲ್ಲ ನಾಶವಾಗುತ್ತದೋ ಎಂಬ ಭಯವಿತ್ತು.ಆದರೆ ಕಾಲ ಬದಲಾದಂತೆ ಆಟಿ ತಿಂಗಳ ಸ್ವರೂಪ ಕೂಡ ಬದಲಾಗಿದೆ. ಹಿಂದೆ ಆಟಿಯಲ್ಲಿ ಸುರಿಯುತ್ತಿದ್ದಷ್ಟು ಮಳೆ ಇಂದಿಲ್ಲ.ಹಿಂದೆ ಆಟಿ ತಿಂಗಳಲ್ಲಿ ಜನರಿಗೆ ತುಂಬಾ ಕಷ್ಟ ಇತ್ತು. ಈಗ ಆ ಕಷ್ಟ ಭಯ ಕಡಿಮೆ ಆಗಿದೆ ಎಂದು ಹೇಳಬಹುದು.ಆಟಿ ಅಶುಭ ಎಂಬ ಕಲ್ಪನೆಯಿಂದ.ಆಟಿ ತಿಂಗಳಲ್ಲಿ ಯಾವುದೇ ಹಬ್ಬ ಹರಿದಿನಗಳು, ಶುಭ ಸಮಾರಂಭಗಳು ನಡೆಯದಿದ್ದರೂ ತುಳುವ ನಾಡಿನ ಜನ ಆಚರಿಸುವ ಪದ್ಧತಿಗಳು ಮಾತ್ರ ವಿಶಿಷ್ಟವಾಗಿವೆ.
ಆಟಿದ ತಿನಸ್ಆಟಿ ತಿಂಗಳಲ್ಲಿ ಹಳ್ಳಿಯ ರೈತರ ಮನೆಯ ಅಡುಗೆ ಮನೆಯಲ್ಲಿ ವಿವಿಧ ಖಾದ್ಯಗಳು ತಯಾರಾಗುತ್ತವೆ. ಮಳೆಗಾಲಕ್ಕೋಸ್ಕರ ಮನೆಯ ಆಟ್ಟದಲ್ಲಿ ಸಂಗ್ರಹಿಸಿಟ್ಟಿದ್ದ ದವಸ ಧಾನ್ಯಗಳೆಲ್ಲ ಖಾಲಿಯಾಗಿ ಆಹಾರದ ಕೊರತೆ ಕಾಣಿಸಿಕೊಳ್ಳುತ್ತಿತ್ತು. ಆದುದರಿಂದ ರೈತ ಜನರು ಪ್ರಕೃತಿಯ ಮೊರೆ ಹೋಗಿ ಪ್ರಕೃತಿಯಲ್ಲಿ ಸಿಗುವಂತಹ ಸಸ್ಯದ ಚಿಗುರು,ಗೆಡ್ಡೆ ಗೆಣಸು,ಫಲವಸ್ತು ಸೊಪ್ಪುಗಳನ್ನು ತಂದು ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಸೇವಿಸುವ ಪದ್ಧತಿ ಇತ್ತು.ಅದನ್ನು ಇಂದೂ ಕೂಡ ನಾವು ಆಟಿದ ತಿನಸ್ ಎಂಬ ಹೆಸರಿನಲ್ಲಿ ತಯಾರಿಸಿ ತಿನ್ನುವುದರ ಮೂಲಕ * ಆಟಿಡೊಂಜಿದಿನ* ಅಥವಾ ಆಟಿದ ಕೂಟ ಅಂತ ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದೇವೆ. ಇದರ ಹಿಂದಿರುವ ಉದ್ದೇಶ ಹಿಂದಿನ ಕಾಲದಲ್ಲಿನ ಜನರು ಕಷ್ಟದ ಜೀವನದಲ್ಲೂ ಸಹ ಹೇಗೆ ಸುಸಂಸ್ಕೃತರಾಗಿ ಬದುಕುತ್ತಿದ್ದರು ಎಂಬುವುದನ್ನು ನಾವು ತಿಳಿಯಬೇಕು,ನಮ್ಮ ಮಕ್ಕಳಿಗೂ ಅರಿವು ಮೂಡಿಸಬೇಕು ಎಂಬುವುದು
ಹಲಸು ಮತ್ತು ಗೆಣಸಿನಿಂದ ತಯಾರಿಸಿದ ಹಪ್ಪಳ,ಹಲಸಿನ ಬೀಜ ಬೇಯಿಸಿ ಒಣಗಿಸಿ ಮಾಡಿದ * *ಸಾಂತಣಿ * ಸುಟ್ಟ ಹುಣಸೆ ಬೀಜ (ಪುಲ್ಕೊಟೆ) ಗೆಣಸು ಬೇಯಿಸಿ ಸಣ್ಣ ಸಣ್ಣ ಕೊಯ್ದು,ಒಣಗಿಸಿ ಇಟ್ಟ “ಗೆಣಸಿನ ಹೋಳು”ಇವುಗಳೆಲ್ಲ ಜೋರು ಮಳೆ ಸುರಿಯುವಾಗ, ಚಳಿಯಾಗುವಾಗ ಬಾಯಿಗೆ ಹಾಕಿಟ್ಟು,ರುಚಿ ಸ್ವಾಧಿಸುವ ಖುಶಿ ಈಗಿನ ಯಾವ ಚಾಕಲೇಟ್ ಗಳಿಂದಲೂ ಸಿಗಲು ಸಾಧ್ಯವಿಲ್ಲ.
ಇನ್ನೂ ಹಲಸಿನ ಬೀಜ ಹಾಕಿದ ಕೆಸುವಿನ ಪಲ್ಯ,ಅರಶಿನ ಎಲೆ ಕಡುಬು,ತಗಟೆ ಸೊಪ್ಪು ಹಲಸಿನ ಬೀಜದ ಸುಕ್ಕ, ಹಲಸಿನ ಹಣ್ಣಿನ ಕಡುಬು,ಕೆಸುವಿನ ಪತ್ರೋಡೆ, ಉಪ್ಪಿನ ಹಲಸಿನ ತೊಳೆ ಅಂದರೆ ಉಪ್ಪಡಚ್ಚಿಲ್ ,ಉಪ್ಪಿನಲ್ಲಿ ಹಾಕಿಟ್ಟ ಮಾವಿನಕಾಯಿ ಗೊಜ್ಜು, ಹಲಜಿನ ಬೀಜದ ಜಾಮ್ನೀರು ಕುಕ್ಕು ಚಟ್ನಿ, ಹಲಸಿನ ಎಲೆ ಹಾಗೂ ಕೇದಗೆ ಎಲೆಯಲ್ಲಿ ಮಾಡುವ ಮೂಡೆ,ಪದೆಂಗಿ ಕಣಿಲೆ ಗಸಿ,ಕಣಿಲೆ ಸುಕ್ಕ,ಅಮಟೆ ಬಜ್ಜಿ,ಹುರುಳಿ ಸಾರು,ನೆಲ್ಲಿ-ಪೇರಳೆ-ಶುಂಠಿ ತಂಬುಳಿತೇವು ಪದ್ಪೆ ಗಸಿ, ತಿಮೆರೆ ಚಟ್ನಿ ಕೆಸುವಿನ ಚಟ್ನಿ, ಚೇಟ್ಲ,ಗುಜ್ಜೆ ಕಡುಬು,ಗುಜ್ಜೆ ಕೇಕ್ಮುಂತಾದ ಆಹಾರ ಪದಾರ್ಥಗಳನ್ನು ಆಟಿ ತಿಂಗಳಲ್ಲಿ ಮಾತ್ರ ನೋಡಬಹುದಾಗಿದೆ ಹಾಗೂ ತಿನ್ನಬಹುದಾಗಿದೆ.
ಪ್ರಕೃತಿಯಲ್ಲಿ ಸಿಗುವ ವಿವಿಧ ರೀತಿಯ ಇಂತಹ ವಸ್ತುಗಳಲ್ಲಿ ಔಷಧೀಯ ಗುಣಗಳು ಹೇರಳವಾಗಿ ಇರುತ್ತವೆ ಎನ್ನುವುದು ನಂಬಿಕೆಯಾಗಿದೆ.ಇಂತಹ ವಸ್ತುಗಳನ್ನು ಸೇವಿಸುವುದರಿಂದ ಆಟಿ ತಿಂಗಳಲ್ಲಿ ಬೀಕರ ಮಳೆಯಿಂದಾಗಿ, ಸೂರ್ಯನ ಬಿಸಿಲು ಬೀಳದೆ,ಕಾಡುವ ರೋಗಗಳನ್ನು ಉಪಶಮನ ಮಾಡುವುದು ಈ ರೀತಿಯ ಆಹಾರ ಸೇವಿಸುವುದರ ಹಿಂದಿನ ಉದ್ದೇಶವಾಗಿರಬಹುದು ಎಂದು ಆಟಿ ತಿಂಗಳ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಕೃತಿ ಚಿನಾಟಕರಾದ ಡಾ.ಅರುಣ್ ಉಳ್ಳಾಲ್ ರವರು ವಿವರಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರು ಉಪಸ್ಥಿತರಿದ್ದರು.ಬಳಿಕ ಆಟಿ ತಿಂಗಳ ಮಾಹಿತಿಯನ್ನು ನಿಖರವಾಗಿ ನೀಡಿದ ಅರುಣ್ ಉಳ್ಳಾಲ್ ರವರನ್ನು ಹಾಗೂ ರಾಜ್ಯಾಧ್ಯಕ್ಷರಾದ ನಾರಾಯಣ ಬಿ.ಎ ರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಟೈಲರ್ ಅಸೋಸಿಯೇಷನ್ ನ ಸದಸ್ಯರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮ ದ ನಿರೂಪಣೆ ಯನ್ನು ರೋಹಿತ್ ತೊಕ್ಕೊಟು,ಧನ್ಯವಾದ ಸಮಾರ್ಪಣೆಯನ್ನು ನಳಿನಿ ಸದಾಶಿವ ರವರು ನೆರೆವೇರೆಸಿದರು.ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷರು ಜಯಂತ್ ಉರ್ಲಾಂಡಿ,KSTA ರಾಜ್ಯ ಹಿರಿಯ ಸದಸ್ಯ ರಮೇಶ್ ಮಾಡೂರು ಹಾಗೂ ಇನ್ನಿತರರು ಉಪಸ್ಥಿತರಿದ್ದರು


