ಕೋಟ ಶ್ರೀನಿವಾಸ ಪೂಜಾರಿ ಅವರ ಇಪ್ಪತ್ತೈದು ಲಕ್ಷ ಅನುದಾನದಲ್ಲಿ ಪಿಲಾರು-ಪಲ್ಲ ಸಂಪರ್ಕದ ಕಚ್ಚಾ ರಸ್ತೆ ನಿರ್ಮಾಣವಾಗಲು ಹಿರಿಯರಾದ ಸುಬ್ರಾಯ ಗಟ್ಟಿಯವರ ತ್ಯಾಗ ಮನೋಭಾವವೇ ಪ್ರಮುಖ ಕಾರಣವಾಗಿದ್ದು,ಅವರು ತಮ್ಮ ಸ್ವಂತ ಸ್ಥಳವನ್ನ ಸಮಾಜಕ್ಕೆ ಬಿಟ್ಟು ಕೊಟ್ಟಿದ್ದರಿಂದ ಪಿಲಾರು-ಪಲ್ಲ ಸಂಪರ್ಕದ ಸುಸಜ್ಜಿತ ರಸ್ತೆ ನಿರ್ಮಾಣವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ತೊಕ್ಕೊಟ್ಟಿನ ಭಗತ್ ಸಿಂಗ್ ಪ್ರತಿಷ್ಠಾನದ ವತಿಯಿಂದ ಗುರುಪೂರ್ಣಿಮೆ ಪ್ರಯುಕ್ತ ನಿವೃತ್ತ ಶಿಕ್ಷಕರು ,ಪ್ರಗತಿ ಪರ ಕೃಷಿಕರಾದ ಸುಬ್ರಾಯ ಗಟ್ಟಿ ಪಿಲಾರು ಅವರಿಗೆ ಅವರ ಸ್ವಗೃಹದಲ್ಲಿ ಗುರುವಾರದಂದು ಗುರುವಂದನೆಯನ್ನ ಸಮರ್ಪಿಸಿ ಅವರು ಮಾತನಾಡಿದರು.ಬಹಳ ವರುಷಗಳ ಹಿಂದೆಯೇ ಪಿಲಾರು ಪ್ರದೇಶದ ಯುವಕರಿಗೆ ಮಾರ್ಗದರ್ಶನ ಮಾಡಲು ಸುಬ್ರಾಯ ಗಟ್ಟಿಯವರದ್ದೇ ನಾಯಕತ್ವ ಇತ್ತು.ಅವರಿಗೆ ತೊಂಭತ್ತೈದು ವರ್ಷವಾದರೂ ಇಂದಿಗೂ ಜೀವನೋತ್ಸಾಹದಲ್ಲಿದ್ದು ವಾಕ್,ಶ್ರವಣ,ಗ್ರಹಿಕಾ ಶಕ್ತಿಯನ್ನ ಹೊಂದಿದ್ದಾರೆ.
ಸಂಘ ಸಂಸ್ಥೆಗಳನ್ನ ಹುಟ್ಟು ಹಾಕೋದು ಮಾತ್ರವಲ್ಲ ಅದನ್ನ ಉಳಿಸಿ ಬೆಳೆಸುವ ಕಾರ್ಯ ನಡೆಸಬೇಕು.ಆ ನಿಟ್ಟಿನಲ್ಲಿ ಭಗತ್ ಸಿಂಗ್ ಪ್ರತಿಷ್ಠಾನವು ಉಳ್ಳಾಲ ಪ್ರದೇಶದಲ್ಲಿ ಇಂತಹ ಅರ್ಥಪೂರ್ಣ,ಸಮಾಜಮುಖಿ ಕಾರ್ಯಕ್ರಮಗಳನ್ನ ನಡೆಸುತ್ತಿರುವುದು ಪ್ರಶಂಸನೀಯವೆಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ ಹಿರಿಯರಾದ ಸುಬ್ರಾಯ ಗಟ್ಟಿ ಅವರು ಗುರುಗಳಾಗಿ, ಕೃಷಿಕರಾಗಿ 95 ವರುಷಗಳ ಕಾಲ ಅತ್ಯಂತ ಸರಳ,ಸಾರ್ಥಕ ಜೀವನವನ್ನ ಸಾಗಿಸಿದ್ದು ಅವರು ನಡೆದು ಬಂದ ದಾರಿ ಮುಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ.ಅವರು ಶತಾಯುಷಿಯಾಗಿ ಬಾಳುವುದರೊಂದಿಗೆ ಸಮಾಜಕ್ಕೆ ಅವರಿಂದ ಮತ್ತಷ್ಟು ಉತ್ತಮ ಸೇವೆ ಲಭಿಸುವಂತಾಗಲಿ.ಇಂತಹ ವ್ಯಕ್ತಿಗಳನ್ನ ಹುಡುಕಿ ಗುರುವಂದನೆ ಸಲ್ಲಿಸಿರುವ ಭಗತ್ ಸಿಂಗ್ ಪ್ರತಿಷ್ಟಾನದ ಗೌರವವೂ ಇಮ್ಮಡಿಗೊಂಡಿದೆ ಎಂದರು.
ಭಗತ್ ಸಿಂಗ್ ಪ್ರತಿಷ್ಠಾನದ ಗೌರವ ಅಧ್ಯಕ್ಷರಾದ ರಾಕೇಶ್ ಬೈಪಾಸ್,ಗುರುವಂದನಾ ಸಮಿತಿ ಸಂಚಾಲಕರಾದ ರಾಜೇಂದ್ರ ಸೇವಂತಿಗುಡ್ಡೆ, ಕೋಶಾಧಿಕಾರಿ ಹರೀಶ್ ಅಂಬ್ಲಮೊಗರು, ಪ್ರಮುಖ ರಾದ ಶರತ್ ಭಂಡಾರಿ, ಮೋಹನ್ ಸೇವಂತಿಗುಡ್ಡೆ , ದಾಮೋದರ ನಡಾರ್,ದೀಕ್ಷಿತ್ ನಿಸರ್ಗ, ಸುಧಾಕರ ಬಜಾಲ್, ಗಂಗಾಧರ ಅಂಬ್ಲಮೊಗರು, ಬೃಜೇಶ್ ನಾಯರ್, ಸುಬ್ರಾಯ ಗಟ್ಟಿಯವರ ಪತ್ನಿ ಪಾರ್ವತಿ ಗಟ್ಟಿ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟ್ಟು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೃಷ್ಣ ಪೊನ್ನೊತೋಡು ಸ್ವಾಗತಿಸಿ, ನಿರೂಪಿಸಿದರು. ಪ್ರ.ಕಾ ಗಣೇಶ್ ಕಾಪಿಕಾಡು ಸನ್ಮಾನ ಪತ್ರ ವಾಚಿಸಿದರು. ಪ್ರವೀಣ್ ಬಸ್ತಿ ವಂದಿಸಿದರು.

