ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪ ಕಳೆದ 8 ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ ಮದುವೆಯಾಗಲು ನಿರಾಕರಿಸಿದ್ದರಿಂದ ನೊಂದ ಯುವಕನೊಬ್ಬ ಯುವತಿಗೆ ಚೂರಿಯಿಂದ ಇರಿದು ಆಕೆಯ ಬಾಡಿಗೆ ಮನೆಯಲ್ಲೇ ನೇಣು ಬಿಗಿದುಕೊಂಡ ಘಟನೆ ಸಂಭವಿಸಿದೆ.
ಸಾವನ್ನಪ್ಪಿದ ಯುವಕನನ್ನು ಕೊಡ್ಮಣ್ ನಿವಾಸಿ ಸುಧೀರ್ (30) ಹಾಗೂ ಚೂರಿ ಇರಿತಕ್ಕೊಳಗಾದ ಯುವತಿಯನ್ನು ಫರಂಗಿಪೇಟೆ ನಿವಾಸಿ ದಿವ್ಯಾ ಯಾನೆ ದೀಕ್ಷಿತಾ (26) ಎಂದು ತಿಳಿದು ಬಂದಿದೆ.
ದಿವ್ಯಾ ಯಾನೆ ದೀಕ್ಷಿತಾ ಹಾಗೂ ಸುಧೀರ್ ಸುಮಾರು 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ಎಂದು ತಿಳಿಯಲಾಗಿದೆ. ಕಳೆದ ಕೆಲ ತಿಂಗಳುಗಳಿಂದ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿತ್ತು. ನಂತರ ಸುಧೀರ್ ಆಕೆ ಬಳಿ ಮಾತನಾಡಲು ಮುಂದಾದ, ದೀಕ್ಷಿತಾ ಮಾತನಾಡಲು ನಿರಾಕರಿಸಿದ್ದಳು ಎನ್ನಲಾಗಿದೆ.
ಅದೇ ಕಾರಣಕ್ಕೆ ಜಗಳ ನಡೆದು ಆಕೆ ಮದುವೆ ಆಗಲ್ಲ ಹೇಳಿದ ಕಾರಣ ದೀಕ್ಷಿತಾಳಿಗೆ ಚೂರಿ ಇರಿದಿದ್ದಾನೆ.ಆಕೆ ತಪ್ಪಿಸಿಕೊಂಡು ಓಡಿ ಹೋಗಿ ಬಿದ್ದಿದ್ದಾಳೆ.ಅದನ್ನು ನೋಡಿ ಆಕೆ ಮೃತಪಟ್ಟಿದ್ದಾಳೆ ಎಂದು ಭಾವಿಸಿ ಸುಧೀರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಘಟನೆ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

