ದಿನಾಂಕ 22-06-2025 ರಂದು ಬೆಳಗ್ಗೆ 11 ಗಂಟೆಗೆ ಉಡುಪಿ ಅಕ್ಷಯ ಟವರ್ ನಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರ ಅಧ್ಯಕ್ಷತೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು .

ತುಳುನಾಡ ರಕ್ಷಣಾ ವೇದಿಕೆ ಕೇಂದ್ರಿಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರಿಗೆ ಸಸಿ ನೀಡಿ ತಾವು ಉಡುಪಿ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳಿಗೆ ನೀಡಿ ಅವರು ತಮ್ಮ ತಮ್ಮ ಪ್ರದೇಶದಲ್ಲಿ ಸಸಿ ನೆಟ್ಟು ಅದನ್ನು ಬೆಳೆಸುವ ಪ್ರಯತ್ನ ಮಾಡಬೇಕೆಂದರು. ಆರೋಗ್ಯ ರಕ್ಷಣೆಗೆ ಮರಗಳು ಬೆಳೆಸುವುದು ಅತಿ ಮುಖ್ಯವಾಗಿದೆ. ಇಂತಹ ಕಾರ್ಯಕ್ರಮಗಳು ಹಮ್ಮಿ ಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಗೆ ನಮ್ಮ ಕೊಡುಗೆ ನೀಡಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು. ಕಾರ್ಯಕರ್ತರಿಗೆ ಸಸಿ ನೀಡಲು ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ
ಜಯ ಪೂಜಾರಿ ಲಕ್ಷ್ಮಿ ನಗರ ರವರು ನೂರಾರು ಸಸಿಯ ವ್ಯವಸ್ಥೆ ಮಾಡಿದರು. ಮಹಿಳಾ ಜಿಲ್ಲಾಧ್ಯಕ್ಷೆ ಸುನಂದ ಕೋಟ್ಯಾನ್ , ಜಿಲ್ಲಾ ಹಿರಿಯ ಉಪಾಧ್ಯಕ್ಷ ಜಯರಾಮ್ ಪೂಜಾರಿ, ಉಪಾಧ್ಯಕ್ಷ ಉಮೇಶ್ ಶೆಟ್ಟಿ ಹಾವಂಜೆ, ಬ್ರಹ್ಮಾವರ ತಾಲೂಕು ಅಧ್ಯಕ್ಷ ಸತೀಶ್ ಪೂಜಾರಿ ಕೀಳಿಂಜೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾವಂಜೆ, ಕಾರ್ಮಿಕ ಘಟಕ ಜಿಲ್ಲಾ ಉಪಾಧ್ಯಕ್ಷ ಕುಶಲ್ ಅಮೀನ್ ಬೆಂಗ್ರೆ , ಸುಭಾಷ್ ಸುಧನ್ , ಕಾಪು ತಾಲೂಕು ಅಧ್ಯಕ್ಷ ನಿತಿನ್ ಶೆಟ್ಟಿ ಬೈರಂಪಲ್ಲಿ , ಕಾಪು ಮಹಿಳಾಧ್ಯಕ್ಷೆ ಅನುಸೂಯ ಶೆಟ್ಟಿ , ಜಿಲ್ಲಾ ಜೊತೆ ಕಾರ್ಯದರ್ಶಿ ಪ್ರೀತಮ್ ಡಿಕೋಸ್ಥಾ , ಶರ್ಮಿಳ, ಜ್ಯೋತಿ ಬನ್ನಂಜೆ, ಮಮತಾ, ವಿನೋದ, ಗುಲಾಬಿ ಶೆಟ್ಟಿ ,ಸಂಗೀತ ,ಅಶ್ವಿನಿ , ರಜನಿ, ಲಕ್ಷ್ಮಿ ಆದಿಉಡುಪಿ, ಮಾಜಿ ಪಂಚಾಯತ್ ಸದಸ್ಯೆ ಆಶಾ ,ರಾಜು ಕಟಪಾಡಿ, ರಮೇಶ್ ಆಚಾರ್ಯ, ನಾಗರಾಜು, ಪ್ರಶಾಂತ್ ನಾಯಕ, ಶಾಮಲಾ, ರಾಯಪ್ಪ , ನಾರಾಯಣ, ಪ್ರಜ್ವಲ್ , ಜಯಶ್ರೀ ಕಟಪಾಡಿ , ಶಶಿಕಲಾ , ಪೂಜಾಶ್ರೀ , ಪೂರ್ಣಿಮಾ , ಜಯಶ್ರೀ, ದೀಪಕ್ , ಕೃಷ್ಣನಂದ ನಾಯಕ್ ಬೈರಂಪಲ್ಲಿ , ಪ್ರದೀಪ್ ಬ್ರಹ್ಮಾವರ ,ಅಬ್ದುಲ್ ಅಕೀಂ , ಮಿಸ್ಬಾ , ಗೀತಾ, ಸುಲೋಚನ, ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು



