ದಿನಾಂಕ ಜೂನ್ 18-2025ರಂದು ಪ್ರವೀಣ ಎಂಬ 29 ವರ್ಷ ಪ್ರಾಯದ ಯುವಕನಿಗೆ ಬೆಳಿಗ್ಗೆ ಏಳು ಗಂಟೆಯಿಂದ ಫ್ಯಾಕ್ಟರಿಗೆ ಹೋದಾಗ ಅಲ್ಲಿನ
ಹೆಚ್ ಎ ಆರ್ ಚಂದ್ರಶೇಖರ್ ಎಂಬವರು ಪ್ರವೀಣನನ್ನು ಗೇಟಿನ ಒಳಗೆ ಬಾರದಂತೆ ತಡೆದು ಏರುದನಿಯಿಂದ ಬೆದರಿಸಿ ಬೈಕ್ ಅನ್ನು ತಡೆದು ನಿಲ್ಲಿಸಿ ಫ್ಯಾಕ್ಟರಿ ಮಾಲೀಕ ಸಂಪತ್ ಶೆಟ್ಟಿ ಬರುವವರೆಗೆ ನಿನ್ನನ್ನು ಒಳಗೆ ಬಿಡಬಾರದು ಎಂದು ಹೇಳಿದ್ದಾರೆ ಎಂದು ಗದರಿಸಿ ಅವನ ಬೈಕ್ ಮತ್ತು ಬೈಕ್ ಕೀಯನ್ನು ಕಸಿದುಕೊಂಡು ನಂತರ ಬೆಳಿಗ್ಗೆ 9.30 ಗಂಟೆಗೆ ಮಾಲೀಕರಾದ ಸಂಪತ್ ಶೆಟ್ಟಿ ರವರು ಬಂದು ಆತನನ್ನು ಉದ್ದೇಶಿಸಿ ಬೋಳಿ ಮಗನೆ ನಿನಗೆ ಬೂಟ್ ಕಾಲಲ್ಲಿ ಒದೆಯುತ್ತೇನೆ ಎಂದು ಬೆದರಿಸಿ 9 30 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಒಂಟಿಕಾಲಲ್ಲಿ ನಿಲ್ಲು ಇಲ್ಲ ಅಂದ್ರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಎಂದು ನಿಲ್ಲಿಸಿ ಅಮಾನವೀಯ ಕೃತ್ಯವನ್ನು ಈ ಕೃಷ್ಣಪ್ರಸಾದ್ ಕ್ಯಾಶ್ ಇಂಡಸ್ಟ್ರಿಯ ಮಾಲಿಕ ಸಂಪತ್ ಶೆಟ್ಟಿ, ಮತ್ತು ಚಂದ್ರಶೇಖರ್ ಎಸಗಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ( ಬಿಎನ್ಎಸ್)
2023 ಯುಎಸ್ 126. (2)352,351,(2)3,(5) ರಂತೆ ಪ್ರಕರಣದಾಲಾಗಿದೆ ಈ ಕೃಷ್ಣಪ್ರಸಾದ್ ಕ್ಯಾಶೂಇಂಡಸ್ಟ್ರೀಸ್ ಮಾಲಿಕ ಸಂಪತ್ ಶೆಟ್ಟಿ ಯನ್ನು ಮತ್ತು ಚಂದ್ರಶೇಖರ್ ರನ್ನು ಈ ಕೂಡಲೇ ಬಂಧಿಸುವಂತೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರರವರು ಒತ್ತಾಯ ಹಾಗೂ ಈ ಅಮಾನವೀಯ ಕೃತ್ಯ ಎಸಗಿದ ಈ ಕಾರ್ಖಾನೆಯನ್ನು ಸರಕಾರ ಕೂಡಲೇ ಮುಟ್ಟುಗೋಲು. ಹಾಕಿಕೊಳ್ಳಬೇಕು ಮತ್ತು ಇದುವರೆಗೆ ಈ ಒಂದು ಫ್ಯಾಕ್ಟರಿಯಲ್ಲಿ ದೌರ್ಜನ್ಯಕ್ಕೊಳಗಾದ ಎಲ್ಲಾ ಕಾರ್ಮಿಕರಿಗೆ ಸಂಪೂರ್ಣ ಪರಿಹಾರವನ್ನು ಫ್ಯಾಕ್ಟರಿ ಮಾಲಕನಿಂದ ವಸೂಲಿ ಮಾಡುವಂತೆ ಹಾಗೂ ಕಾರ್ಮಿಕ ಇಲಾಖೆಯು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ತಪ್ಪಿದಲ್ಲಿ ಮುಂದೆ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರ ನೇತೃತ್ವದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದೆಂದು ಜಯ ಪೂಜಾರಿ ಲಕ್ಷ್ಮಿನಗರ ಆಗ್ರಹಿಸಿದ್ದಾರೆ.
Trending
- ಡಿಸೆಂಬರ್ 5 ರಂದು ಬೆಳಿಗ್ಗೆ 8.55ಕ್ಕೆ ಶಿಲಾನ್ಯಾಸ ಕಾರ್ಯಕ್ರಮ
- ಯಕ್ಷಗಾನ ತಾಳಮದ್ದಳೆ ಸಪ್ತಾಹ ಸಮಾರೋಪ – ಯಕ್ಷಾಂಗಣ ಪ್ರಶಸ್ತಿ ಪ್ರದಾನ
- “ಎಂಸಿಎಫ್ ಹೆಸರು ಉಳಿಸಿ” ಅಭಿಯಾನ – ಐತಿಹಾಸಿಕ ಮೊದಲ ಸಭೆ ಮಂಗಳೂರಿನಲ್ಲಿ ಯಶಸ್ವಿ
- ಕಾಪು : ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಭೀಕರ ಅಪಘಾತ – ನಾಲ್ವರು ಸ್ಥಳಾಂತರಿಸುವ ವೇಳೆ ಮೃತ್ಯು
- ತೀಯಾ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಅಗತ್ಯ – ಸದಾಶಿವ ಉಳ್ಳಾಲ್
- ಡಿ.ಕೆ. ಟ್ರಾನ್ಸ್ಪೋರ್ಟ್ & ಲಾಜಿಸ್ಟಿಕ್ ಸರ್ವೀಸಸ್ – ಹೊಸ ಕಚೇರಿ ಉದ್ಘಾಟನೆ
- ಪಿಲಿಪಂಜ” ತುಳು ಚಲನಚಿತ್ರದ ಎರಡನೇ ಹಾಡಾದ ಫ್ರೆಂಡ್ಷಿಪ್ ಸಾಂಗ್, ಭಾನುವಾರ ಮಂಗಳೂರಿನ ಭಾರತ್ ಮಾಲ್ನಲ್ಲಿ ಅದ್ಧೂರಿಯಾಗಿ ಬಿಡುಗಡೆ
- ಉಡುಪಿ: ಪ್ರಧಾನಿ ನರೇಂದ್ರ ಮೋದಿ ಭವ್ಯ ರೋಡ್ ಶೋ – ಜನಸಾಗರದ ನಡುವೆ ಭಾವಪೂರ್ಣ ಸ್ವಾಗತ

