ನಮ್ಮ ಹೆಲ್ಪ್ ಲೈನ್ ಸೇವಾ ತಂಡದ ಮುಖಾಂತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಈ ಯೋಜನೆ . ಈ ಪುಣ್ಯ ಕಾರ್ಯದಲ್ಲಿ ತಂಡದ ಸಹಕಾರ ಶ್ಲಾಘನೀಯ. ಸರಕಾರಿ ಪ್ರೌಢ ಶಾಲೆ ಕೆಂಜಾರು ಇಲ್ಲಿ ಮಕ್ಕಳಿಗೆ ಇಂದು ಪುಸ್ತಕ ವಿತರಣೆ ಮಾಡಿರುತ್ತೇವೆ.
ಇನ್ನು ಮುಂದೆಯೂ ನಮ್ಮ ತಂಡದಿಂದ ಇದೇ ರೀತಿಯಾದ ಅನೇಕ ರೀತಿಯ ಸಮಾಜಮುಖಿ ಕೆಲಸಗಳು ನಡೆಯಬೇಕು. ಜನ ಸೇವೆಯೇ ನಮ್ಮ ಗುರಿಯಾಗಬೇಕು.🙏
ಈ ಸಮಾರಂಭದಲ್ಲಿ ಹೆಲ್ಪ್ ಲೈನ್ ಸೇವಾ ತಂಡದ ಸ್ಥಾಪಕರಾದ ಮಹೇಶ್ ಅಮಿನ್, ಸದಸ್ಯರುಗಳಾದ ಶ್ರೀ ಕೃಷ್ಣ ಕುಳಾಯಿ , ಶ್ರೀ ಜಯಂತ್ ಕೊಳಂಬೆ, ಶ್ರೀಮತಿ ವಿನುತಾ ಕೊಡಿಯಾಲ್ ಗುತ್ತು, ಕು. ಪ್ರಜ್ಞಾ ಅಮಿನ್, ಶ್ರೀ ನಿರಂಜನ್, ಗುರುರಾಜ್, ಸತೀಶ್,
ಶ್ರೀಮತಿ ಪ್ರಮೀಳಾ, ಶ್ರೀಮತಿ ಸರಸ್ವತಿ, ಶ್ರೀಮತಿ ಡೀಲಕ್ಷಿ , ಕಾರ್ಯಕ್ರಮದ ಮುಖ್ಯ ಕೇಂದ್ರ ಬಿಂದುಗಳಾದ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಶ್ರೀಮತಿ ಉಮಾಕ್ಷಿ ಎಸ್. ಎಂ ಇವರು ಬಂದಂತಹ ಅಥಿತಿಗಳನ್ನು ಸ್ವಾಗತಿಸಿದರು, ಅಧ್ಯಕ್ಷತೆ ಶ್ರೀಮತಿ ವಿನೋದಾ, ಶ್ರೀಮತಿ ಮಮತಾ ವಿ ಅಮಿನ್ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು, ಶ್ರೀಮತಿ ಫೈರೋಜಾ ಬೇಗಂ ಇವರು ಧನ್ಯವಾದ ಅರ್ಪಿಸಿದರು.
