ಮಂಗಳೂರಿನಲ್ಲಿ ಸ್ಪೆಷಲ್ ಆಕ್ಷನ್ ಪೋರ್ಸ್ ಕಾರ್ಯಪಡೆ ಕಚೇರಿಯನ್ನು ಇಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ರವರು ಉದ್ಘಾಟಿಸಿದರು.
ದಕ ಜಿಲ್ಲೆಯ ಜನ ಸುಂಸ್ಕೃತರು, ಇಲ್ಲಿನ ಜನರ ಮನಸ್ಥಿತಿ ಸಂಸ್ಕೃತಿ ಬೇರೆ ಇದೆ ಕಲೆ ಸಾಹಿತ್ಯ ಉಳಿದಿದ್ದರೆ ಅದು ದಕ ಜಿಲ್ಲೆಯಿಂದ ಜಗತ್ತಿನ ಬೇರೆ ಬೇರೆ ಕಡೆಗೆ ಹೋದ ಇಲ್ಲಿನ ಜನ ತಮ್ಮ ಛಾಪು ಮೂಡಿಸಿದವರು ಇಲ್ಲಿ ಸರ್ಕಾರಿ ಶೈಕ್ಷಣಿಕ ವ್ಯವಸ್ಥೆ ಗಳು ಬರುವ ಮುಂಚೆಯೇ ಖಾಸಗಿ ಮೆಡಿಕಲ್ ಕಾಲೇಜುಗಳು ಇತ್ತು ಇಲ್ಲಿ ಮತೀಯ ಭಾವನೆ,ದ್ವೇಷದ ವಾತಾವರಣವನ್ನು ಹತ್ತಿಕ್ಕಲು ತೀರ್ಮಾನ ಮಾಡುತ್ತಿದೆ ಎಂದರು.
ಈ ಹಿಂದಿನ ಕಮೀಷನರ್ ಪೊಲೀಸ್ ಗೆ ಹೇಳಿದ್ದೆ ಇರುವ ಸಿಬ್ಬಂದಿ ಯಲ್ಲಿ ಟಾಸ್ಕ್ ಫೋರ್ಸ್ ತಯಾರು ಮಾಡೋಕೆ ಹೇಳಿದ್ದು ಆಗ ಕಮೀಷನರ್ ಆಗಿದ್ದವರು ಕುಲದೀಪ್ ಕುಮಾರ್ ಜೈನ್ ರವರು ಮಟ್ಟಿಗೆ ಈ ಸಂಘರ್ಷವನ್ನು ತಡೆದಿದ್ದರು ಆದರೆ ಇತ್ತೇಚೆಗೆ ಕೊಲೆ ಆದಾಗ ಭೇಟಿ ನೀಡಿದಾಗ ವಿಶೇಷ ಕಾರ್ಯಪಡೆ ಮಾಡೋಕೆ ತೀರ್ಮಾನ ಮಾಡಿದ್ದೆ
ಆ ಸಂಧರ್ಭದಲ್ಲಿ ಎಸ್ ಎ ಎಫ್ ಮಾಡುವ ಬಗ್ಗೆ ಘೋಷಣೆ ಮಾಡಿದ್ದೆ ಒಂದು ವಾರದೊಳಗೆ ರೂಪು ರೇಷೆಯನ್ನು ಮಾಡಿ ಈ ಫೋರ್ಸ್ ತಯಾರು ಮಾಡಲಾಗಿದೆ ಎಂದು ಹೇಳಿದರು.
ನಕ್ಸಲ್ ಫೋರ್ಸ್ ಕಡಿಮೆ ಮಾಡಿ ಈ ಕಾರ್ಯಪಡೆಗೆ ನಿಯೋಜನೆ ಮಾಡಲಾಗಿದ್ದು ಇದು ಕೋಮು ದ್ವೇಷ ನಿಗ್ರಹಕ್ಕೆ ಸ್ಥಾಪನೆಯಾದ ಭಾರತದ ಮೊದಲ ಕಾರ್ಯಪಡೆಯಾಗಿದೆ. ಯಾರೇ ಮತೀಯ ದ್ವೇಷ ಹರಡಿಸಿದರೂ ಹತ್ತಿಕ್ಕುವ ಕೆಲಸವನ್ನು ಈ ಕಾರ್ಯಪಡೆ ಮಾಡಲಿದೆ ಈ ಪ್ರದೇಶವನ್ನು ಶಾಂತಿಯಲ್ಲಿಡೋದೇ ಈ ಕಾರ್ಯಪಡೆಯ ಕೆಲಸ ಇಷ್ಟು ದಿನ ಶಾಂತವಾಗಿ ಪೊಲೀಸರು ವರ್ತನೆ ಮಾಡಿದ್ದರು ಆದರೆ ಅದು ಕೆಲವರ ಕಿವಿಗೆ ಹೋಗಿಲ್ಲ ಹಾಗಾಗಿ ಫೋರ್ಸ್ ನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಹೇಳಿದರು. ಜನರಿಗೆ ಒಂದು ಪ್ರಾರ್ಥನೆ ಮಾಡುತ್ತೇನೆ ಈ ಎಸ್ ಎ ಎಫ್ ಗೆ ಕೆಲಸ ಕೊಡಬೇಡಿ,ನೀವಾಗಿಯೇ ಸುಮ್ಮಿನಿದ್ದರೆ ಈ ಫೋರ್ಸ್ ಗೆ ಕೆಲಸ ಇರಲ್ಲ
ಆದರೆ ನಮ್ಮ ಮಾತನ್ನು ಕೇಳದಿದ್ದರೆ ಈ ಫೋರ್ಸ್ ಗೆ ಕೆಲಸ ಜಾಸ್ತಿ ಆಗುತ್ತದೆ ಎಂದರು.
ಈ ಕಾರ್ಯಪಡೆ ಗೆ ಅನೇಕರು ಟೀಕೆ ಮಾಡಬಹುದು ಆದರೆ ಸಮಾಜ ಈ ಕಾರ್ಯ ಪಡೆಯನ್ನು ಒಪ್ಪಿಕೊಳ್ಳುತ್ತದೆ ದಕ ಜಿಲ್ಲೆಯಲ್ಲಿ ಶಾಂತಿ ಇದ್ರೆ ಕರ್ನಾಟಕದಲ್ಲಿ ಶಾಂತಿ ಇರುತ್ತದೆ ಈ ಕಾರ್ಯಪಡೆಯ ಕೆಲಸಕ್ಕೆ ದಕ ಜಿಲ್ಲೆಯ ಜನ ಸಹಕಾರ ನೀಡಬೇಕು ಯಾರೂ ಇದೇ ಧರ್ಮದಲ್ಲಿ ಹುಟ್ಟಬೇಕು ಅರ್ಜಿ ಹಾಕಿಲ್ಲ ಇದನ್ನೇ ದೊಡ್ಡದು ಮಾಡಿ ವಿಭಜನೆ ಮಾಡೋದು ಸರಿಯಲ್ಲ ಈ ಕಾರ್ಯಪಡೆ ಯನ್ನು ಅಗತ್ಯ ಬಿದ್ದರೆ ಇಡೀ ರಾಜ್ಯದಲ್ಲಿ ಮಾಡುತ್ತೇವೆ ದಕ ,ಉಡುಪಿ, ಶಿವಮೊಗ್ಗ ದಲ್ಲಿ ಈ ಕಾರ್ಯಪಡೆ ಯ ಅಗತ್ಯ ತುಂಬಾ ಇದೆ ಬೇರೆ ಜಿಲ್ಲೆಗಳಲ್ಲಿ ಅಲ್ಲಿಯ ವಾತವರಣಗಳೇ ಬೇರೆ ಇದೆ ಸಂಘಸಂಸ್ಥೆಗಳು, ಜನರು,ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ಹೇಳಿದರು.
ಬಳಿಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ದಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ಪೆಷಲ್ ಆಕ್ಷನ್ ಫೋರ್ಸ್ ಎಂಬುವುದು ಸರ್ಕಾರದ ಮಹತ್ವದ ಹೆಜ್ಜೆಯಾಗಿದೆ,ಈ ವಿಶೇಷ ಕಾರ್ಯಪಡೆ ಕೋಮು ದ್ವೇಷ ನಿಯಂತ್ರಣಕ್ಕೆ ದೊಡ್ಡ ಕೊಡುಗೆ ನೀಡಲಿದೆ ದಕ ಮತ್ತು ಉಡುಪಿ ಜಿಲ್ಲೆಗೆ ಇರುವ ಒಂದೇ ಒಂದು ಕಪ್ಪು ಚುಕ್ಕೆ ಅಂದ್ರೆ ಕೋಮು ದ್ವೇಷ ದಕ್ಷಿಣ ಕನ್ನಡದಲ್ಲಿ ಸರ್ವ ಜನಾಂಗದ ಜನ ಇದ್ದಾರೆ ಆದರೆ ಶಾಂತಿಯ ಕೊರತೆ ಇದೆ ಧರ್ಮ ಧರ್ಮಗಳ ನಡುವೆ ದ್ವೇಷ ದ ವಾತವರಣ ಹೆಚ್ಚಾಗುತ್ತಿದೆ ಕೋಮು ರಕ್ಷಣೆ ಯನ್ನು ಇಟ್ಟುಕೊಂಡು ಅವರ ಅನೈತಿಕ ಕೆಲಸಕ್ಕೆ ರಕ್ಷಣೆ ತೆಗೆದುಕೊಳ್ಳುತ್ತಿದ್ದಾರೆ,ಕಾನೂನಿನ ಕ್ರಮ ಕಟ್ಟುನಿಟ್ಟಾಗಿ ಆಗದಿದ್ದರೆ ಏನು ಮಾಡಿದರೂ ವ್ಯರ್ಥವೇ,ಈ ಕಾರ್ಯ ಪಡೆಯ ಪ್ರಭಾವ ಈಗಲೇ ದಕ ಜಿಲ್ಲೆಯಲ್ಲಿ ಬೀರಿದೆ,ಈಗಾಲೇ ಕೆಲವರಿಗೆ ಅದರ ಸಮಸ್ಯೆ ಉಂಟಾಗಿದೆ 98% ರಷ್ಟು ಜನ ಈ ಕಾರ್ಯಪಡೆ ಗೆ ಬೆಂಬಲ ನೀಡಿದ್ದಾರೆ,ದ್ವೇಷ ಭಾಷಣ,ಹಿಂಸಾಚಾರ ಕ್ಕೆ ಪ್ರಚೋದನೆ ನೀಡುವವರಿಗೆ ಇನ್ನು ರಕ್ಷಣೆ ಇಲ್ಲ ಇದರ ಹಿಂದೆ ರಾಜಕೀಯ ದುರುದ್ದೇಶ ಇಲ್ಲ,ಪೊಲೀಸರಿಗೆ ಅವರ ಕೆಲಸ ಮಾಡೋಕೆ ಅನುವು ಮಾಡಿಕೊಡಬೇಕು,ಕೋಮು ದ್ವೇಷಕ್ಕೆ ಇತೀಶ್ರೀ ಹಾಡೋಕೆ ದಿಟ್ಟ ಹೆಜ್ಜೆ ಇಡಲಾಗಿದೆ,ಯಾರ ಮೇಲೂ ದ್ವೇಷ ಸಾಧಿಸೋಕೆ ಈ ಕಾರ್ಯಪಡೆ ಯ ರಚನೆ ಆಗಿಲ್ಲ ಈ ಕಾರ್ಯಪಡೆ ಗೆ ಎಲ್ಲರ ಸಹಕಾರ ಬೇಕು,ಅತೀ ಶೀಘ್ರದಲ್ಲೇ ಎಲ್ಲರನ್ನೂ ಕರೆದು ಶಾಂತಿ ಸಭೆಯನ್ನು ಮಾಡುತ್ತೇವೆ ದಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.