ದಿನಾಂಕ 01-06- 2025 ರಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆ ಉಡುಪಿ ಬಸ್ ನಿಲ್ದಾಣ ಬಳಿಯ ಅಕ್ಷಯ ಟವರ್ ನಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ವಹಿಸಿದ್ದರು. ಉದ್ಘಾಟನೆಯನ್ನು ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಚಲನಚಿತ್ರ ನಿರ್ದೇಶಕ ಸುಧಾಕರ್ ಬನ್ನಂಜೆ ಆಗಮಿಸಿದರು. ಸುಧಾಕರ್ ಬನ್ನಂಜೆ ಮಾತನಾಡುತ್ತಾ ತುಳು ಪಂಚ ದ್ರಾವಿಡ ಭಾಷೆಯಲ್ಲಿ ಭಾಷೆಯಾಗಿದ್ದು ತಮಿಳು ಭಾಷೆಯು ತುಳು ಭಾಷೆಯಿಂದ ಉಗಮವಾದದ್ದು ಮತ್ತು ತುಳು ಭಾಷೆ ಸಾಹಿತ್ಯ ಮತ್ತು ತುಳುನಾಡಿನ ಸಾಮಾಜಿಕ ಹಿತಾಸಕ್ತಿಗಾಗಿ ಹೋರಾಡುತ್ತಿರುವ ತುಳುನಾಡ ರಕ್ಷಣಾ ವೇದಿಕೆಯ ಕಾರ್ಯವನ್ನು ಕೊಂಡಾಡಿದರು.

ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಗಂಟ್ ಕಲ್ವೆರ್ ಚಲನಚಿತ್ರ ನಿರ್ದೇಶಕ ಸುಧಾಕರ್ ಬನ್ನಂಜೆ ರವರನ್ನು ಗೌರವಿಸಿ ಸನ್ಮಾನಿಸಲಾಯಿತು

ವೇದಿಕೆಯಲ್ಲಿ ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿ ನಗರ , ಹಿರಿಯ ಉಪಾಧ್ಯಕ್ಷ ಜಯರಾಮ್ ಪಾತ್ರಿ , ಉಪಾಧ್ಯಕ್ಷ ಉಮೇಶ್ ಶೆಟ್ಟಿ ಹಾವಂಜೆ, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಸುನಿಲ್ ಫೆರ್ನಾಂಡಿಸ್, ಬ್ರಹ್ಮಾವರ ತಾಲೂಕು ಗೌರವಾಧ್ಯಕ್ಷ ಸುರೇಂದ್ರ ಪೂಜಾರಿ, ಕಾಪು ಮಹಿಳಾ ಅಧ್ಯಕ್ಷೆ ಅನುಸೂಯ ಶೆಟ್ಟಿ , ಜಿಲ್ಲಾ ಮಹಿಳಾ ಕೋಶ ಅಧಿಕಾರಿ ಸುನಂದ ಕೋಟ್ಯಾನ್ ಆಸೀನರಾಗಿದ್ದರು .

ಸಭೆಯಲ್ಲಿ ಮಹಿಳಾ ಅಧ್ಯಕ್ಷರನ್ನಾಗಿ ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಸಮಾಜ ಸೇವಕಿಯಾಗಿ ದುಡಿಯುತ್ತಿರುವ ಸುನಂದ ಕೋಟ್ಯಾನ್ ರವರನ್ನು ಆಯ್ಕೆ ಮಾಡಲಾಯಿತು. ಹಾಗೂ ತುಳುನಾಡ ರಕ್ಷಣಾ ವೇದಿಕೆ ಸಂಘಟನೆಯ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸಿದ್ದಾಗಿ ಆಯ್ಕೆಯಾದ ಮಹಿಳಾ ಅಧ್ಯಕ್ಷೇ ಸುನಂದ ಕೋಟ್ಯಾನ್ ರವರು ಸೇರಿರುವ ಪದಾಧಿಕಾರಿಗಳಿಗೆ ಕಾರ್ಯಕರ್ತರಿಗೆ ಭರವಸೆಯ ಮಾತುಗಳನ್ನಾಡಿ ಮುಂದಿನ ದಿನಗಳಲ್ಲಿ ಮಹಿಳಾ ಘಟಕವನ್ನು ಬಲಿಷ್ಠವಾಗಿ ಕಟ್ಟಲು ಅಹರ್ನಿಶಿ ದುಡಿಯುವುದಾಗಿ ತಿಳಿಸಿದರು.
ಉಡುಪಿ ಜಿಲ್ಲಾ ನೂತನ ಪ್ರಧಾನ ಕಾರ್ಯದರ್ಶಿ ಯಾಗಿ ಸುರೇಂದ್ರ ಪೂಜಾರಿ ಹಾವಂಜೆ ರವರನ್ನು ಆಯ್ಕೆ ಮಾಡಲಾಯಿತು.

ಸುರೇಂದ್ರ ಪೂಜಾರಿ ರವರು ಹಾವಂಜೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಬಳಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಜನರ ಸೇವೆಗಾಗಿ ದುಡಿಯುವವರಾಗಿರುತ್ತಾರೆ. ಅವರನ್ನು ನೂತನ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.

ಜಿಲ್ಲಾ ಜೊತೆ ಕಾರ್ಯದರ್ಶಿಯಾಗಿ ಪ್ರೀತಮ್ ಡಿಸೋಜಾ ರವನ್ನು ಆಯ್ಕೆ ಮಾಡಲಾಯಿತು. ಇನ್ನೋರ್ವ ಜೊತೆ ಕಾರ್ಯದರ್ಶಿಯಾಗಿ ಪ್ರಸ್ತುತ ಸುಭಾಷ್ ಸುಧನ್ ರವರು ಸೇವೆ ಸಲ್ಲಿಸುತ್ತಿದ್ದಾರೆ. ಸಭೆಯಲ್ಲಿ ಉಡುಪಿ ಜಿಲ್ಲಾ ಕಾರ್ಮಿಕ ಉಪಾಧ್ಯಕ್ಷ ಕುಶಲ್ ಅಮೀನ್ ಬೇಂಗ್ರೆ, ಕಾರ್ಮಿಕ ಘಟಕ ಪ್ರಧಾನ ಕಾರ್ಯದರ್ಶಿ ಅವಿನಾಶ್ ಶೆಟ್ಟಿ , ರೋಷನ್ ಬಂಗೇರ , ಹರಿಣಾಕ್ಷಿ ಉಚ್ಚಿಲ ,ಭಾಸ್ಕರ್ ಉಪ್ಪುರು , ಶ್ರೀನಿಧಿ , ಮಮತಾ , ರಂಜಿತಾ ಶೆಟ್ಟಿ , ಸವಿತಾ ಶೆಟ್ಟಿ , ಸಂಗೀತ , ಧನವತಿ , ಅಶ್ವಿನಿ, ಮೈನಾ ಶೆಟ್ಟಿ , ಶಶಿಕಲ ಶೆಟ್ಟಿ , ರಜನಿ ರಾಜೀವಿ ಶಿರ್ವ , ಶಕುಂತಲ ಶೆಟ್ಟಿ ಮತ್ತಿತರರು ಉಪಸಿತರಿದ್ದರು . ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ರವರು ನೂತನ ಜವಾಬ್ದಾರಿಯುತ ಸ್ಥಾನ ಅಲಂಕರಿಸುತ್ತಿರುವ ಪದಾಧಿಕಾರಿಗಳನ್ನು ತುಳುನಾಡ ಧ್ವಜ ಮತ್ತು ಸಾಲು ಹಾಕಿ ಪುಷ್ಪ ನೀಡಿ ಗೌರವಿಸಿದರು.

