ಮಂಗಳೂರು, ಮೇ 12(ಕ.ವಾ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟೆ ಮತ್ತು ಕನ್ನಡ ಸಂಘ ವಿಶ್ವವಿದ್ಯಾನಿಲಯ ಕಾಲೇಜು ಇವರ ಸಹಕಾರದೊಂದಿಗೆ ಭಗವಾನ್ ಬುದ್ಧ ಜಯಂತಿ ಸೋಮವಾರ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ವಿ.ವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಜಯವಂತ ನಾಯಕ ಉದ್ಘಾಟಿಸಿ ಮಾತನಾಡಿದರು. ಬುದ್ಧ ಕೇವಲ ವ್ಯಕ್ತಿಯಲ್ಲ ಅವರು ಮಹಾನ್ ಬೆಳಕು.ಶ್ರಮ ವಹಿಸುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಬುದ್ಧನಾಗಬಹುದು. ಕಾಮ, ಕ್ರೋಧ, ಮದ, ಮತ್ಸರ ಇವುಗಳಿಂದ ದೂರವಿದ್ದು, ಬುದ್ಧನ ವಿಚಾರಧಾರೆಗಳನ್ನು ಅರಿತುಕೊಂಡಾಗ ಶಾಂತಿ ನೆಲೆಯೂರುತ್ತದೆ. ಬುದ್ಧನ ಸಂದೇಶಗಳನ್ನು ಎಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಉಪನ್ಯಾಸ ನೀಡಿದ ಮಂಗಳಗಂಗೋತ್ರಿ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಬಿತಾ ಮಾತನಾಡಿ, ಗೌತಮ ಬುದ್ಧನು ವೈಭೋಗದ ಜೀವನದಿಂದ ಮುಕ್ತಿ ಪಡೆಯಲು ಬಯಸುತ್ತಾನೆ. ಯಾವಾಗಲೂ ಜನರಿಗೆ ಅಹಿಂಸೆಯ ಅರ್ಥವನ್ನು ಕಲಿಸಲು ಪ್ರಯತ್ನಿಸಿದವರು. ಜಗತ್ತಿನಲ್ಲಿ ಎಷ್ಟು ಶ್ರೀಮಂತನಾಗಿದ್ದರೂ ಜೀವನದಲ್ಲಿ ದುಃಖವಿಲ್ಲದವನು ಯಾರು ಇಲ್ಲ ಎಂದು ಗೌತಮ ಬುದ್ಧ ಹೇಳುತ್ತಾರೆ. ಹಾಗಾಗಿ ದುಃಖದಿಂದ ಹೊರಬರುವ ಮಾರ್ಗವನ್ನು ಕಂಡುಹಿಡಿಯುತ್ತಾರೆ. ಬುದ್ಧನ ಪ್ರಕಾರ ಮನುಷ್ಯನ ಅತಿಯಾದ ಆಸೆಗಳೇ ದುಃಖಕ್ಕೆ ಮೂಲ ಕಾರಣ. ಒಬ್ಬ ವ್ಯಕ್ತಿಯು ತನಗೆ ಅಗತ್ಯಕ್ಕಿಂತ ಹೆಚ್ಚಿನದನ್ನು ಬಯಸಬಾರದು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿ, ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಾಧವ. ಕೆ ವಂದಿಸಿದರು.
Trending
- ಮದರಸೆಗೆ ನುಗ್ಗಿ ಉಸ್ತಾದ್ ಮೇಲೆ ಹಲ್ಲೆ; ದಂಪತಿ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲು
- ಆದರ್ಶ ಆಸ್ಪತ್ರೆಯ ರಕ್ತಸಂಗ್ರಹ ಘಟಕ ಸಂಪೂರ್ಣ ಕಾನೂನುಬದ್ಧ; ಜಿಲ್ಲಾ ಆಸ್ಪತ್ರೆಯ ರಕ್ತನಿಧಿಯಿಂದ ನಿಯಮಾನುಸಾರವೇ ರಕ್ತ ಪೂರೈಕೆ – ಆಧಾರರಹಿತ ವದಂತಿಗಳಿಗೆ ಕಿವಿಗೊಡಬೇಡಿ: ಆಸ್ಪತ್ರೆ ಆಡಳಿತ
- ಕೃಷ್ಣಾಪುರ ಉಸ್ತಾದ್ ಮೇಲಿನ ಹಲ್ಲೆ ಖಂಡನೀಯ; ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಿ: ಇಕ್ಬಲ್ ಮೂಲ್ಕಿ ಆಗ್ರಹ
- ಜುಲೈ 12ರಂದು ಸುಳ್ಯದಲ್ಲಿ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಪ್ರಮುಖ ಪದಾಧಿಕಾರಿಗಳ ಸಭೆ
- ಪುತ್ತೂರು ಆಘಾತ ಸುದ್ದಿ: ಕಂಬಳ ಲೋಕದ ಖ್ಯಾತ ವೀಕ್ಷಕ ವಿವರಣೆಗಾರ ನಿರಂಜನ್ ರೈ ಮಠಂತಬೆಟ್ಟು ಹೃದಯಾಘಾತದಿಂದ ನಿಧನ
- ಹಿರಿಯಡ್ಕ ರೆಸಾರ್ಟ್ನಲ್ಲಿ ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ; 26 ಮಂದಿ ವಶಕ್ಕೆ
- ಗ್ರಾಮ ಪಂಚಾಯತ್ ಚುನಾವಣೆಗೆ ವೇಗ; ರಾಜ್ಯ ಚುನಾವಣಾ ಆಯೋಗದಿಂದ ಮಹತ್ವದ ಸಿದ್ಧತೆ, ಕೆಲವೇ ತಿಂಗಳಲ್ಲಿ ಚುನಾವಣೆ ?
- ಹೆಬ್ರಿ ತಾಲೂಕಿನಲ್ಲಿ ಸಿಬ್ಬಂದಿ ಕೊರತೆ ತೀವ್ರ: ಖಾಲಿ ಹುದ್ದೆಗಳ ಭರ್ತಿಗೆ ಜಿಲ್ಲಾಧಿಕಾರಿಗಳಿಗೆ ಜೆಡಿಎಸ್ ಮನವಿ
