ಮಂಗಳೂರು : ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಸದಸ್ಯ ಟೈಮ್ಸ್ ಆಫ್ ಕುಡ್ಲದ ಪ್ರಧಾನ ಸಂಪಾದಕ ಶಶಿ ಬಂಡಿಮಾರ್ ಕಳೆದ ಬುಧವಾರ ನಿಧನ ರಾದ ಹಿನ್ನೆಲೆಯಲ್ಲಿ ಸೋಮವಾರ ಪತ್ರಿಕಾ ಭವನದಲ್ಲಿ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ,ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾಭವನ ಟ್ರಸ್ಟ್ ವತಿಯಿಂದ ಸಂತಾಪ ಸೂಚಕ ಸಭೆ ನಡೆಯಿತು.ಟೈಮ್ಸ್ ಆಫ್ ಕುಡ್ಲತುಳು ಪತ್ರಿಕೆಯ ಸಂಪಾದಕ, ನಮ್ಮ ಸಂಘದ ಸಕ್ರಿಯ ಸದಸ್ಯರಾ ಗಿದ್ದು,ತುಳು ಭಾಷೆ ಸಂಸ್ಕೃತಿಯ ಕುರಿತಾಗಿ ತನ್ನ ಪತ್ರಿಕೆಯ ಮೂಲಕ ಶಶಿ ಬಂಡಿಮಾರ್ ಜಾಗೃತಿ ಮೂಡಿಸಿದವರು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ನುಡಿನಮನ ಸಲ್ಲಿಸಿದರು.
ಯುವ ಉತ್ಸಾಹಿ ಉದ್ಯಮಿ ಪರಿಶ್ರಮದಿಂದ ತುಳು ಪತ್ರಿಕೆಯನ್ನು ನಡೆಸಿಕೊಂಡು ಬಂದವರು ಎಲ್ಲರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದ ಪತ್ರ ಕರ್ತ ಶಶಿ ಬಂಡಿಮಾರ್ ನಮ್ಮನ್ನಗಲಿದ್ದಾರೆ ಎಂದು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸಂತಾಪ ಸೂಚಿಸಿದ್ದಾರೆ.
ತುಳು ಪತ್ರಿಕೆ ನಡೆಸುತ್ತಾ, ತುಳು ಭಾಷೆಗೆ ಸೂಕ್ತ ಸ್ಥಾನಮಾನ ರಾಜ್ಯ ದಲ್ಲಿ ದೊರೆಯಬೇಕು, ಎಂಟನೆ ಪರಿಚ್ಛೇದ ದಲ್ಲಿಸೇರಬೇಕು ಎನ್ನುವ ಪ್ರಯತ್ನಕ್ಕೆ ಪೂರಕವಾಗಿ ಪತ್ರಿಕೆಯ ಮೂಲಕ ದಾಖಲೆಗಳ ಸಂಗ್ರಹದ ಮೂಲಕ ಪ್ರಯತ್ನ ಪಟ್ಟ ಶಶಿ ಬಂಡಿಮಾರ್ ನಮ್ಮನ್ನಗಲಿದ್ದಾರೆ ಎಂದು ತುಳುನಾಡು ರಕ್ಷಣಾ ವೇದಿಕೆಯ ಸಂಸ್ಥಾಪಕ ಯೋಗೀಶ್ ಶೆಟ್ಟಿ ಜಪ್ಪು ಸಂತಾಪ ಸೂಚಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ,ಕೋಶಾಧಿಕಾರಿಪುಷ್ಪರಾಜ್ .ಬಿ.ಎನ್, ಸದಸ್ಯ ಯಶೋಧರ ಕೋಟ್ಯಾನ್ ನುಡಿನಮನ ಸಲ್ಲಿಸಿದರು.ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ನುಡಿನಮನ ಸಲ್ಲಿಸಿ ವಂದಿಸಿದರು.
ಪತ್ರಿಕಾ ಭವನಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ, ಕಾರ್ಯ ಕಾರಿ ಸಮಿತಿ ಸದಸ್ಯರಾದ ರಾಜೇಶ್ ದಡ್ಡಂಗಡಿ ಹಾಗೂ ಇತರ ಸದಸ್ಯರು ಮತ್ತು ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ ಪತ್ರಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು,