ಮಿಲ್ಲತ್ ನಗರ ಬಂಡಿಕೊಟ್ಯ ಪ್ರದೇಶಕ್ಕೆ ಉಳ್ಳಾಲ ನಗರ ಸಭೆವತಿಯಿಂದ ಪೈಫ್ ಲೈನ್ ನಿಂದ ಸರಬರಾಜು ಆಗುವ ಕುಡಿಯುವ ನೀರು. ಪೆಟ್ರೋಲ್ ಬಣ್ಣಕ್ಕೆ ತಿರುಗಿದೆ. ಇದರ ಕುರಿತು ದಿನಾಂಕ 27-08-2024 ರಂದು ಪತ್ರ ಸಂಖ್ಯೆ 002024(81)ರಲ್ಲಿ ಉಳ್ಳಾಲ ನಗರ ಸಭೆಯ ಪೌರಾಯುಕ್ತರಿಗೆ ಮನವಿ ಲಿಖಿತ ಮುಖಾಂತರ ನೀಡಿದ್ದೇನೆ. ಈಗಾಗಲೇ 4 ತಿಂಗಳು ಆದರೂ ಯಾವುದೇ ರೀತಿಯ ಪರಿಹಾರವನ್ನು ಕಂಡೆತ್ತುವಲ್ಲಿ ಉಳ್ಳಾಲ ನಗರಸಭೆಯ ಅಧಿಕಾರಿಗಳು ವಿಫಲರಾಗಿದ್ದಾರೆ.ಉಳ್ಳಾಲ ನಗರ ಸಭೆ ಅಧಿಕಾರಿಗಳು ಬಹಳ ಬೇಜವಾಬ್ದಾರಿತನ ತೋರಿದ್ದಾರೆ. ಮುಂದಿನ ದಿನಗಳಲ್ಲಿ ನನ್ನ ವಾರ್ಡಿಗೆ ಶುದ್ಧವಾದ ಕುಡಿಯುವ ನೀರನ್ನು ಪೂರೈಸದಿದ್ದರೆ ಉಳ್ಳಾಲ ನಗರ ಸಭೆಯ ಮುಂಭಾಗದಲ್ಲಿ ನನ್ನ ವಾರ್ಡಿನ ನಾಗರಿಕರನ್ನು ಸೇರಿಸಿ ಹಾಹೋ ರಾತ್ರಿ ಧರಣಿಯನ್ನು ಮಾಡುತ್ತೇವೆ.ಉಳ್ಳಾಲ ನಗರ ಸಭೆ ಅಧ್ಯಕ್ಷರು ಹಾಗೂ ಉಳ್ಳಾಲ್ ಸಭೆ ಅಧಿಕಾರಿಗಳು ಈ ಕೂಡಲೆ ಎಚ್ಚೆತ್ತು ಸಾರ್ವಜನಿಕರ ಆರೋಗ್ಯ ದೃಷ್ಟಿ ಕೋನದಲ್ಲಿ ಈ ನೀರು ಸೇವನೆಯಿಂದ ವ್ಯತ್ಯಾಸ ಉಂಟಾದರೆ ಉಳ್ಳಾಲ ನಗರ ಸಭೆಯ ಆಡಳಿತವೇ ಹೊಣೆಗಾರರು
Trending
- ಉಡುಪಿ ಕಾರ್ಮಿಕ ಘಟಕ ಸಭೆ: ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿರ್ಣಯ
- ಅವಧಿ ಮುಗಿದ ಗ್ರಾಮ ಪಂಚಾಯತ್ಗಳಿಗೆ ಆಡಳಿತಾಧಿಕಾರಿಗಳ ನೇಮಕ, ಚುನಾವಣೆಗೂ ಮುನ್ನ ತಾತ್ಕಾಲಿಕ ವ್ಯವಸ್ಥೆ ಜಾರಿ
- ಮಂಗಳೂರು | ಮಾದಕವಸ್ತು ವಿರೋಧಿ ಕಾರ್ಯಾಚರಣೆ: ಕಾಲೇಜು ವಿದ್ಯಾರ್ಥಿಗಳ ಅಚ್ಚರಿಯ ತಪಾಸಣೆ – ಫಲಿತಾಂಶಗಳು ಉತ್ತೇಜನಕಾರಿ
- ಬೀದಿ ನಾಯಿಗಳ ಕಾಟ: ರಾಜ್ಯ ಸರ್ಕಾರಗಳು ಹೊಣೆಗಾರಿಕೆ ವಹಿಸಬೇಕು – ಸುಪ್ರೀಂ ಕೋರ್ಟ್ ಕಠಿಣ ಎಚ್ಚರಿಕೆ
- ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ ಡಾ. ಮಾಲತಿ ಶೆಟ್ಟಿ ಮಾಣೂರು ಆಯ್ಕೆ
- ಲೈಂಗಿಕ ದೌರ್ಜನ್ಯಕ್ಕೆ ನಿರಾಕರಿಸಿದ ಟೆಕ್ಕಿ ಶರ್ಮಿಳಾ ಹತ್ಯೆ: ಬೆಂಕಿ ಅವಘಡದ ಹಿಂದೆ ಭೀಕರ ಸತ್ಯ ಬಯಲು | 18 ವರ್ಷದ ಆರೋಪಿಯ ಬಂಧನ
- ಸುನಂದ ಕೋಟ್ಯಾನ್ ಅವರಿಗೆ ಕರುನಾಡ ಕಾಯಕ ಯೋಗಿ ರಾಜ್ಯ ಪ್ರಶಸ್ತಿ

